ಬೆಂಗಳೂರು, ಏ.10- ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವೆಂದೇ ಪರಿಗಣಿಸಲಾದ ದ್ವಿತೀಯ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ದಾಖಲೆಯ ಶೇಕಡಾ 81.15 ರಷ್ಟು ಫಲಿತಾಂಶ ಬಂದಿದ್ದು,ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ (80.25%)ಮೇಲುಗೈ ಸಾಧಿಸಿದ್ದಾರೆ.
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಫಲಿತಾಂಶ ಏರಿಕೆಯಾಗಿದೆ.ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ.
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿ,ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.
2023 ರಲ್ಲಿ 74.67 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.6.4 ರಷ್ಟು ಏರಿಕೆಯಾಗಿದ್ದು, ದಾಖಲೆಯ 81.15 ರಷ್ಟು ಫಲಿತಾಂಶ ದಾಖಲಾಗಿರುವುದು ವರ್ಷದಿಂದ ವರ್ಷಕ್ಕೆ ಫಲಿತಾಂಶ ಏರಿಕೆಯಾಗುತ್ತಿರುವುದರ ಸಕಾರಾತ್ಮಕ ಬೆಳವಣಿಗೆಯಾಗಿದೆ.ಕಳೆದ ಮಾರ್ಚ್ 1 ರಿಂದ 27 ರವರೆಗೆ ರಾಜ್ಯದ 1,124 ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ-1 ರ ಪರೀಕ್ಷೆಗೆ ಒಟ್ಟು 6,81,079 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 5,22,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು.
ಕಲಾ ವಿಭಾಗದಲ್ಲಿ 1,87,891 ಹಾಜರಾದ ವಿದ್ಯಾರ್ಥಿಗಳ ಪೈಕಿ 1,28,448 (68.36), ವಾಣಿಜ್ಯ ವಿಭಾಗದಲ್ಲಿ 2,15,357 ಹಾಜರಾದವರ ಪೈಕಿ 1,74,315 (80.94), ವಿಜ್ಞಾನ ವಿಭಾಗದಲ್ಲಿ 2,77,831 ಹಾಜರಾದವರ ಪೈಕಿ 249927 (89.96) ಫಲಿತಾಂಶ ಪ್ರಕಟಗೊಂಡಿದೆ.ಬಾಲಕರ ಪೈಕಿ ಪರೀಕ್ಷೆಗೆ 3,21,467 ಹಾಜರಾದವರ ಪೈಕಿ 2,47,478 (76.98), ಅದೇ ರೀತಿ ಬಾಲಕಿಯರಲ್ಲಿ 3,59,612 ವಿದ್ಯಾರ್ಥಿನಿಯರಲ್ಲಿ 3,05,212 (84.87) ಫಲಿತಾಂಶ ಹೊರಬಂದಿದೆ ಎಂದು ತಿಳಿಸಿದರು.
ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ.
ಕಲಾ ವಿಭಾಗದಲ್ಲಿ ಬೆಂಗಳೂರಿನ ಎಂ ಎನ್ ಕೆ ಆರ್ ವಿ ಪಿಯು ಕಾಲೇಜಿನ ಮೇಧಾ ಡಿ. 596, ವಿಜಯಪುರದ ಎಸ್‍ಎಸ್ ಪಿಯು ಕಾಲೇಜಿನ ವೇದಾಂತ್ ಜಯನುಬಾನವಿ 596, ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಕೂಡ್ಲಗಿಯ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ. 596 ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮಿ 598 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾನಿಕೇತನ ಪಿಯು ಕಾಲೇಜಿನ ಜ್ಞಾನವಿ ಎಂ. 597, ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ಕಾಲೇಜಿನ ಪವನ್ ಎಂ.ಎಸ್. 596, ಉಡುಪಿಯ ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ಹರ್ಷಿತಾ ಎಸ್.ಎಚ್. 596 ಅಂಕ ಪಡೆದಿದ್ದಾರೆ.
ಈ ಬಾರಿ ಶೇ.85 ಅಥವಾ ಅದಕ್ಕಿಂತ ಹೆಚ್ಚಿನ ಅಂಗಳನ್ನು 1,53,370 ವಿದ್ಯಾರ್ಥಿಗಳು ಪಡೆದಿದ್ದರೆ ಶೇ.85 ಕ್ಕಿಂತ ಕಡಿಮೆ ಹಾಗೂ ಶೇ. 60 ಅಥವಾ ಶೇ.60 ಕ್ಕಿಂತ ಕಡಿಮೆ ಅಂಕವನ್ನು 2,89,733 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಶೇ.60 ಕ್ಕಿಂತ ಕಡಿಮೆ, ಶೇ.50 ಅಥವಾ ಶೇ.50 ಕ್ಕಿಂತ ಹೆಚ್ಚು ಅಂಕಗಳನ್ನು 72,098, ಶೇ.50 ಕ್ಕಿಂತ ಕಡಿಮೆ ಅಂಕಗಳನ್ನು 37,489 ವಿದ್ಯಾರ್ಥಿಗಳು ಪಡೆದಿದ್ದಾರೆ.ಈ ಬಾರಿ ಅಚ್ಚರಿಯೆಂಬಂತೆ 91 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದ್ದರೆ, 2 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
26 ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದ್ದರೆ, 6 ಕಾಲೇಜುಗಳಲ್ಲಿ ಶೂನ್ಯ, 345 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.100 ರಷ್ಟು ಹಾಗೂ 26 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಹಾಗೂ ಒಂದು ವಿಭಜಿತ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ರಷ್ಟು ಹಾಗೂ ಒಂದು ಕಾಲೇಜಿನಲ್ಲಿ ಶೂನ್ಯ ಫಲಿತಾಂಶ ಸೇರಿದಂತೆ ಒಟ್ಟು 463 ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಮತ್ತು 35 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
24 ಪ್ರತಿಕ್ರಿಯೆಗಳು
can you get generic clomiphene online can i order generic clomid online cost cheap clomid without insurance can you get cheap clomid without rx can you buy generic clomiphene without a prescription buy clomiphene without dr prescription where can i buy cheap clomiphene tablets
The thoroughness in this section is noteworthy.
More posts like this would persuade the online elbow-room more useful.
cost inderal 10mg – buy propranolol generic buy methotrexate 10mg pill
buy generic amoxil for sale – order combivent 100mcg online order ipratropium 100mcg online
zithromax pills – generic bystolic 20mg order bystolic pill
¡Hola, descubridores de riquezas !
Casino sin licencia espaГ±ola con acceso internacional – http://casinosinlicenciaespana.xyz/ casino sin licencia espaГ±ola
¡Que vivas increíbles recompensas asombrosas !
esomeprazole 20mg price – https://anexamate.com/ esomeprazole 20mg sale
coumadin usa – https://coumamide.com/ cozaar 50mg pill
¡Bienvenidos, exploradores de posibilidades !
Casinos sin registro para jugadores espaГ±oles – http://mejores-casinosespana.es/ casinos online sin licencia
¡Que experimentes maravillosas tiradas afortunadas !
meloxicam 15mg cost – relieve pain where to buy mobic without a prescription
buy prednisone 20mg – https://apreplson.com/ prednisone online
buy ed pills no prescription – fast ed to take site buy ed pills generic
amoxil uk – https://combamoxi.com/ cost amoxil
buy generic diflucan 200mg – forcan for sale online how to buy forcan
escitalopram 20mg cheap – https://escitapro.com/ escitalopram 20mg pill
us pharmacy cialis – https://strongtadafl.com/ what to do when cialis stops working
zantac tablet – https://aranitidine.com/# buy generic ranitidine 150mg
can you buy viagra vietnam – can you buy viagra cvs buy viagra online in the uk
More posts like this would force the blogosphere more useful. where to buy tamoxifen without a prescription
More posts like this would create the online elbow-room more useful. buy furosemide online
This is a keynote which is virtually to my verve… Many thanks! Unerringly where can I notice the acquaintance details in the course of questions? https://ursxdol.com/synthroid-available-online/
The depth in this tune is exceptional. https://prohnrg.com/product/acyclovir-pills/
Thanks an eye to sharing. It’s acme quality. https://aranitidine.com/fr/ivermectine-en-france/