ಬೆಂಗಳೂರು,ಡಿ.28- ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಹದಿಹರೆಯದ ವಿದ್ಯಾರ್ಥಿಯೊಂದಿಗೆ ಮುದ್ದಾಡಿ, ಜತೆಗೆ ರೊಮ್ಯಾಂಟಿಕ್ ಆಗಿ ಫೋಟೊ ಶೂಟ್ ಮಾಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಫ್ರೌಡಾಶಾಲೆಯ ವಿದ್ಯಾರ್ಥಿ ಜತೆಗೆ ತೆಗೆದ ಫೋಟೊ, ವಿಡಿಯೊ ವೈರಲ್ ಆಗಿದ್ದು, ಮುಖ್ಯ ಶಿಕ್ಷಕಿಯ ವರ್ತನೆಗೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಶಾಲೆಯಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಂದಿಗೆ ಮುಖ್ಯ ಶಿಕ್ಷಕಿ ಪುಷ್ಪಲತಾ ರೊಮ್ಯಾಂಟಿಕ್ ಫೋಟೊ ಶೂಟ್ ಮಾಡಿಸಿದ್ದಾರೆ.
ಬಾಲಕನ ಕೆನ್ನೆಗೆ ಮುತ್ತು ಕೊಡುವುದು ಹಾಗೂ ಶಿಕ್ಷಕಿಯ ಸೀರೆ ಸೆರಗು ಎಳೆಯುವುದು, ಶಿಕ್ಷಕಿಯನ್ನು ಮೇಲಕ್ಕೆ ಎತ್ತುವುದು ಹೀಗೆ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿದ್ದಾರೆ. ವಿದ್ಯಾರ್ಥಿ ಕೂಡ ಶಿಕ್ಷಕಿಯನ್ನು ಮುದ್ದಾಡಿದ್ದು ಈ ಎಲ್ಲ ಫೋಟೊಗಳು ಸೋರಿಕೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತಾನೊಬ್ಬಳು ಗುರು ಎನ್ನುವುದನ್ನೂ ಮರೆತು ವಿದ್ಯಾರ್ಥಿಯೊಂದಿಗೆ ಹೀಗೆ ವರ್ತಿಸಿದ್ದಕ್ಕೆ ಆಕ್ರೋಶಗಳು ವ್ಯಕ್ತವಾಗಿದೆ.
ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಎಸ್‌ಡಿಎಂಸಿ ಸದಸ್ಯರು ಒತ್ತಾಯಿಸಿದ್ದಾರೆ. ಜತೆಗೆ ಶಿಕ್ಷಕಿಯ ಈ ನಡೆಗೆ ಪೋಷಕರು ಕಿಡಿಕಾರಿದ್ದು, ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ತೆರಳಿ ಶಿಕ್ಷಕಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಮಕ್ಕಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
7 ಪ್ರತಿಕ್ರಿಯೆಗಳು
Специальные промокоды для вас. https://free-promocode.ru/ .
ВНЖ цифрового кочевника Испании ВНЖ цифрового кочевника Испании .
производители электрокарнизов производители электрокарнизов .
вывод из запоя срочно ростов http://www.vyvod-iz-zapoya-rostov111.ru .
выведение из запоя выведение из запоя .
вывод из запоя на дому цена https://www.vyvod-iz-zapoya-v-sankt-peterburge.ru .
снять ломку снять ломку .