ಬೆಂಗಳೂರು,ನ.23-ಅಪರಾಧ ಕೃತ್ಯಗಳನ್ನು ಹತ್ತಿಕ್ಕಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ರೌಡಿಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ನಗರದಲ್ಲಿ 86 ರೌಡಿಗಳಿಗೆ ಶಾಕ್ ನೀಡಿದ್ದಾರೆ.
ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ 86 ರೌಡಿಗಳ ಮನೆಗಳ ಮೇಲೆ ನಿನ್ನೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ ವಿಭಾಗಗಳ ಠಾಣಾ ವ್ಯಾಪ್ತಿಗಳಲ್ಲಿ ಐವರು ಎಸಿಪಿ, 20 ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ನಗರದ ಪ್ರಮುಖ ರೌಡಿಗಳ ಮನೆಗಳ ಮೇಲೆ ರೇಡ್ ನಡೆಸಿ ಸಿಸಿಬಿ ಪರಿಶೀಲನೆ ನಡೆಸಿದೆ.
ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗನ ಮನೆ ಮೇಲೂ ದಾಳಿ ನಡೆಸಿದ್ದು ಸಿಸಿಬಿ ದಾಳಿ ವೇಳೆ ಇಬ್ಬರು ರೌಡಿಗಳು ಮನೆಗಳಲ್ಲಿ ಇರಲಿಲ್ಲ.
ದಾಳಿ ವೇಳೆ ಕುಖ್ಯಾತ ರೌಡಿಗಳಾದ ಕೋತಿರಾಮ, ಆರ್.ಟಿ.ನಗರದ ವೆಂಕಟೇಶ್ ಸೇರಿ 26 ಮಂದಿ ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಉತ್ತಮ ಜೀವನ ನಡೆಸಬೇಕು ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಮಾರಕಾಸ್ತ್ರಗಳು ಪತ್ತೆ:
ಸಿಸಿಬಿ ದಾಳಿ ವೇಳೆ ರೌಡಿಶೀಟರ್ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಳ್ಳ ರಿಜ್ವಾನ್ ಶಿಷ್ಯ ಸ್ಟಾರ್ ನವೀನ್ ಮನೆಯಲ್ಲಿ ಡ್ಯಾಗರ್ ಪತ್ತೆಯಾಗಿದ್ದು ಸಿಸಿಬಿ ದಾಳಿ ವೇಳೆ ಸ್ಟಾರ್ ನವೀನ್ ಪರಾರಿಯಾಗಿದ್ದಾನೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲೂ ಸಿಸಿಬಿ ದಾಳಿ ನಡೆದಿ ಪರಿಶೀಲನೆ ನಡೆಸಿದೆ. ಈ ವೇಳೆ ವಿಜಯನಗರ ರೌಡಿಶೀಟರ್ ರಾಘವೇಂದ್ರ ಮನೆಯಲ್ಲಿ ಎರಡು ಲಾಂಗ್ಗಳು ಪತ್ತೆಯಾಗಿವೆ.
Previous Articleಆಧಾರ್ ಕಾರ್ಡ್ ಬಗ್ಗೆ ಇರಲಿ ಎಚ್ಚರ
Next Article ಕುಕ್ಕೆಯಲ್ಲಿ ಶುರುವಾಯ್ತು ಕಿತಾಪತಿ