ಉಕ್ರೇನ್ ದೇಶದ ಮೇಲೆ ರಷ್ಯಾ ಮಾಡುತ್ತಿವೆ ದಾಳಿಯಲ್ಲಿ ಉಕ್ರೇನ್ ಗಿಂತ ಹೆಚ್ಚಾಗಿ ರಷ್ಯಾ ದೇಶವೇ ಸೈನಿಕರನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ರಷ್ಯಾದ ಸುಮಾರು 45000 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ರಷ್ಯಾದ ಯುದ್ಧ ಸಲಕರಣೆಗಳೂ ಕೂಡ ಬಹಳ ದೊಡ್ಡ ರೀತಿಯಲ್ಲಿ ನಾಶಗೊಂಡಿವೆ. ನಾಶವಾಗಿರುವ ಸಲಕರಣೆಗಳು ಮತ್ತು ಆಯುಧಗಳ ಪೈಕಿ ಹೆಚ್ಚಾಗಿ ರಷ್ಯಾದ ಟ್ಯಾಂಕ್ ಗಳು ದೊಡ್ಡ ಸಂಖ್ಯೆಯಲ್ಲಿವೆ ಎಂದು ವರದಿಯಾಗಿದೆ.
ಈ ಎಲ್ಲಾ ವಿಪತ್ತುಗಳಿಂದಾಗಿ ಈ ಯುದ್ಧದಿಂದ ರಷ್ಯಾಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಲಾಗಿದೆ.
ಉಕ್ರೇನ್ ಮೇಲೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಗೆಲುವು ನಮ್ಮದಾಗಿರುತ್ತದೆ ಎಂದು ತನ್ನ ದೇಶಕ್ಕೆ ವಾಗ್ದಾನ ನೀಡಿದ್ದ ಪುತಿನ್ ಈಗ ದಾಳಿ ಆರಂಭವಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಇನ್ನೂ ಕೂಡ ಉಕ್ರೇನ್ ನ ಯಾವುದೇ ಪ್ರದೇಶವನ್ನೂ ತನ್ನದಾಗಿಸಿಕೊಳ್ಳಲು ರಷ್ಯಾ ಸಫಲವಾಗಿಲ್ಲ. ಇಷ್ಟೊಂದು ದಾಳಿಯಾದರೂ ಎದೆಗುಂದದ ಉಕ್ರೇನ್ ಈಗ ರಷ್ಯಾದ ಮೇಲೆ ದಾಳಿ ಮಾಡುವುದಾಗಿ ಹೇಳಿಕೊಂಡಿದೆ. ಕೆಲವು ದಿನಗಳ ಹಿಂದೆ ರಷ್ಯಾದ ಕ್ರೆಮ್ಲಿನ್ ಮೇಲೆ ಆದ ಡ್ರೋನ್ ದಾಳಿ ತಾನು ಮಾಡಿಲ್ಲವೆಂದು ಉಕ್ರೇನ್ ಹೇಳಿಕೊಂಡಿದ್ದರೂ ಇಂದು ನಡೆದಿರುವ ದಾಳಿಯನ್ನು ಉಕ್ರೇನ್ ದೇಶವೇ ನಡೆಸಿದೆ ಎಂದು ಹೇಳಲಾಗುತ್ತಿದೆ.
ಹೀಗೇ ಮುಂದುವರೆದರೆ ಈ ಯುದ್ಧ ಇನ್ನೂ ಗಂಭೀರವಾಗುತ್ತಾ ಹೋಗುವ ನಿರೀಕ್ಷೆಯಿದೆ. ರಷ್ಯಾ ದೇಶ ಈಗ ಉಕ್ರೇನ್ ದೇಶದಲ್ಲಿ ಹೋರಾಡಲು ಹೋಗುವವರ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹೊಸದೊಂದು ಜಾಹೀರಾತು ಪ್ರಕಟಿಸಿ ನಿಜವಾದ ಗಂಡಸರು ಉಕ್ರೇನ್ ವಿರುದ್ಧ ಹೋರಾಡಲು ಮುಂದೆ ಬರಬೇಕು ಎಂದು ಹೇಳಿದೆ. ಇದನ್ನು ನೋಡಿದರೆ ರಷ್ಯಾ ಹತಾಶ ಸ್ಥಿತಿಯನ್ನು ತಲುಪುತ್ತಿದೆ ಎಂದು ವಿವರಿಸಲಾಗಿದೆ.