ಬೆಂಗಳೂರು, ಡಿ. 15- ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಐಸಿಸ್ ಉಗ್ರರು ಸಂಚು ನಡೆಸಿದ್ದಾರೆ ಎಂಬ ಗುಪ್ತದಳದ ವರದಿ ಹಿನ್ನೆಲೆಯಲ್ಲಿ ಐಸಿಸ್ ಜೊತೆ ನಂಟು ಹೊಂದಿರುವರ ವ್ಯಕ್ತಿಗಳ ಹುಡುಕಾಟದಲ್ಲಿ ರಾಷ್ಟ್ರೀಯ ಭದ್ರತಾ ದಳ ತೊಡಗಿರುವ ಬೆನ್ನಲ್ಲೇ ಕರ್ನಾಟಕದಿಂದ ಪಾಕಿಸ್ತಾನಕ್ಕೆ (Pakistan) ಸೆಟಲೈಟ್ ಪೋನ್ ಕರೆ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಕರೆಯ ಜಾಡು ಬೆನ್ನುಹತ್ತಿ ಯಾದಗಿರಿಗೆ ಆಗಮಿಸಿರುವ ಎನ್.ಐ.ಎ.ತಂಡ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಜಿಪಿಎಸ್ ಲೊಕೇಷನ್ ಆಧರಿಸಿ ಹುಡುಕಾಟ ನಡೆಸಿದ್ದಾರೆ.
ಯಾದಗಿರಿ ತಾಲೂಕಿನ ಶೆಳ್ಳಗಿ ಗ್ರಾಮದಿಂದ ಪಾಕಿಸ್ತಾನಕ್ಕೆ ಸೆಪ್ಟೆಂಬರ್ 17ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಸ್ಯಾಟಲೈಟ್ ಕರೆ ಹೋಗಿರುವ ಬಗ್ಗೆ ಮಾಹಿತಿ ಪಡೆದಿರುವ ತನಿಖಾ ತಂಡ,ಈ ಬಗ್ಗೆ ಪರಿಶೀಲನೆ ನಡೆಸಿದೆ.
ಚೀನಾ ನಿರ್ಮಿತ ಸೆಟಲೈಟ್ ಪೋನ್ ನಿಂದ ಪಾಕಿಸ್ತಾನಕ್ಕೆ ಕರೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಗ್ರಾಮದಿಂದ ಪಾಕಿಸ್ತಾನಕ್ಕೆ ಸೆಟಲೈಟ್ ಪೋನ್ ಕರೆ ಮಾಡಲಾಗಿತ್ತು ಎಂಬ ಮಾಹಿತಿ ಆಧಾರದಲ್ಲಿ ತನಿಖೆ ನಡೆದಿತ್ತು
1 ಟಿಪ್ಪಣಿ
лучшее порево онлайн https://besplatny-sex-online.ru/ .