Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಕ್ಕಿ ಬದಲಿಗೆ ಹಣ – ಹಿಂದೆ ಇದೆ ದೊಡ್ಡ ರಹಸ್ಯ
    ರಾಜಕೀಯ

    ಅಕ್ಕಿ ಬದಲಿಗೆ ಹಣ – ಹಿಂದೆ ಇದೆ ದೊಡ್ಡ ರಹಸ್ಯ

    vartha chakraBy vartha chakraಜುಲೈ 6, 2023Updated:ಜುಲೈ 6, 202327 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ ಅನ್ನಭಾಗ್ಯ ಯೋಜನೆ ಅನ್ವಯ ಬಿಪಿಎಲ್ ಕಾರ್ಡುದಾರ ಪ್ರತಿ ಸದಸ್ಯನಿಗೆ ಮಾಸಿಕ ಹತ್ತು ಕಿಲೋ ಅಕ್ಕಿ ನೀಡುವ ಗ್ಯಾರಂಟಿ ಈಗ ಸಾಕಷ್ಟು ಚರ್ಚೆಯಲ್ಲಿದೆ.
    ಹೆಚ್ಚುವರಿ ಅಕ್ಕಿ ನೀಡುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸ್ಪಂದಿಸಲಿಲ್ಲ‌.ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಕೇಂದ್ರದ ಆಹಾರ ನಿಗಮ ನಿಗದಿಪಡಿಸಿದ ಮೊತ್ತ ನೀಡಲು ಸಿದ್ದ ಎಂದು ಪದೇ ಪದೇ ಮನವರಿಕೆ ಮಾಡಿದರೂ ಸ್ಪಂದಿಸದ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
    ಕೇಂದ್ರದ ಈ ಕ್ರಮದಿಂದಾಗಿ ಜುಲೈ ತಿಂಗಳಿಂದಲೇ ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿಯಾಗಿ ಐದು ಕಿಲೋ ಅಕ್ಕಿ ನೀಡುವ ರಾಜ್ಯ ಸರ್ಕಾರದ ಭರವಸೆ ಈಡೇರಿಸುವುದು ಕಷ್ಟ ಸಾಧ್ಯವಾಗಲಿದೆ ಎಂಬ ಅಂಶ ಆತಂಕ ಮೂಡಿಸಿತು.
    ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಇಲಾಖೆಯ ಮಂತ್ರಿ ಹಾಗೂ ಅಧಿಕಾರಿಗಳಿಗೆ ಯಾವ ರಾಜ್ಯದಲ್ಲಿ ಹೆಚ್ಚುವರಿ ಅಕ್ಕಿ ಲಭ್ಯವಿದೆ,ಅದನ್ನು ತಮಗೆ ಮಾರಾಟ ಮಾಡುತ್ತಾರೆಯೇ?ಹಾಗಾದರೆ ಬೆಲೆ ಎಷ್ಟು? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.
    ಅದರಂತೆ ಅಧಿಕಾರಿಗಳು ಎಲ್ಲಾ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚುವರಿ ಅಕ್ಕಿಯ ಲಭ್ಯತೆ ಇದೆ.ಇದನ್ನು ಅವರು ಮಾರಾಟ ಮಾಡಲು ಸಿದ್ದರಿದ್ದಾರೆ ಎಂಬ ಮಾಹಿತಿ ನೀಡಿದರು.
    ಈ ಕುರಿತಂತೆ ಕರ್ನಾಟಕದ ಅಧಿಕಾರಿಗಳು ಹಾಗೂ ಈ ರಾಜ್ಯಗಳ ಅಧಿಕಾರಿಗಳು ವಿಚಾರ ವಿನಿಮಯ ಮಾಡಿದರು.ಈ ವೇಳೆ ಪ್ರತಿ ಕಿಲೋ ಅಕ್ಕಿಗೆ ಆ ರಾಜ್ಯಗಳು ನಿಗದಿ ಪಡಿಸಿದ ಬೆಲೆ ಅದರ ಸಾಗಾಣಿಕೆ ವೆಚ್ಚ ಹಾಗೂ ವಿತರಣೆಯ ವೆಚ್ಚ ನೋಡಿದಾಗ ಪ್ರತಿ ಕಿಲೋ ಅಕ್ಕಿಯ ಬೆಲೆ ಐವತ್ತು ರೂಪಾಯಿ ಆಸುಪಾಸಿಗೆ ಬಂದು ನಿಂತಿತು.
    ಇದು ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬ ಅಂಶ ಮನವರಿಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಅಕ್ಕಿ ಗಿರಣಿ ಮತ್ತು ಮಾರಾಟಗಾರ ಬಳಿ ಲಭ್ಯವಿರುವ ಅಕ್ಕಿ ಖರೀದಿಸುವ ಕುರಿತಂತೆ ಮಾತುಗಳು ನಡೆದವು.
    ಆಹಾರ ಇಲಾಖೆ ಮಂತ್ರಿ ಮುನಿಯಪ್ಪ ಅವರೆ ಕೆಲವರೊಂದಿಗೆ ಮಾತುಕತೆ ನಡೆಸಿದರು. ಆನಂತರ ಇಲಾಖೆಯ ಕೆಲವು ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲಿ ಅಕ್ಕಿ ಖರೀದಿ ಬೆಲೆ ನಿಗದಿ ಕುರಿತಂತೆ ಸಮಾಲೋಚನೆ ನಡೆಸಿದರು. ಇದರ ‌ಪರಿಣಾಮ ಪ್ರತಿ ಕಿಲೋ ಅಕ್ಕಿಗೆ 43 ರೂಪಾಯಿ 60 ಪೈಸೆ ನಿಗದಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
    ಇದನ್ನು ಆಧರಿಸಿ‌ ಇನ್ನೇನು ಅಕ್ಕಿ ಖರೀದಿಗೆ ಆದೇಶ ಹೊರಡಿಸಬೇಕು ಎನ್ನುವಷ್ಟರಲ್ಲಿ ಆಘಾತಕಾರಿ ಸುದ್ದಿಯೊಂದು ಮುಖ್ಯಮಂತ್ರಿಗಳನ್ನು ತಲುಪಿತು. ಗುಪ್ತದಳ‌ದ ಅಧಿಕಾರಿಗಳು ಈ ಸಂಬಂಧ ನೀಡಿದ ಮಾಹಿತಿ ಕೇಳಿ ಅದನ್ನು ಖಚಿತಪಡಿಸಿಕೊಂಡ ಮುಖ್ಯಮಂತ್ರಿಗಳು ಅಕ್ಕಿ ಖರೀದಿ ಸಂಬಂಧ ಹೊರಡಿಸಬೇಕಿದ್ದ ಎಲ್ಲಾ ಆದೇಶಗಳನ್ನು ತಡೆ ಹಿಡಿದರು ಎನ್ನಲಾಗಿದೆ.
    ಅಂದಹಾಗೆ ಗುಪ್ತದಳ ಮುಖ್ಯಮಂತ್ರಿಗಳಿಗೆ ನೀಡಿದ ಮಾಹಿತಿಯಲ್ಲಿ ಖಾಸಗಿಯವರಿಂದ ಖರೀದಿಸುವ ಪ್ರತಿ ಲಾಟ್ ಅಕ್ಕಿಗೆ ಇಪ್ಪತ್ತು ಕೋಟಿ ರೂಪಾಯಿ ಕಿಕ್ ಬ್ಯಾಕ್ ನೀಡುವ ಕುರಿತು ಆಹಾರ ಇಲಾಖೆಯ ಪ್ರಭಾವಿಯೊಬ್ಬರೊಂದಿಗೆ ನಡೆಸಿದ ಮಾತುಕತೆಯ ವಿವರಗಳಿದ್ದವು ಎನ್ನಲಾಗಿದೆ.
    ಇಷ್ಟೇ ಅಲ್ಲ ಈ ಮಾಹಿತಿ ಪ್ರತಿಪಕ್ಷ ನಾಯಕರೊಬ್ಬರಿಗೆ ದಾಖಲೆ ರೂಪದಲ್ಲಿ ಸಿಕ್ಕಿದೆ ಎಂದು ವಿವರಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
    ಇದಾದ ನಂತರ ಮುಖ್ಯಮಂತ್ರಿಗಳು ತಮ್ಮ ಅಪ್ತ ಸಚಿವರೊಂದಿಗೆ ಸಭೆ ನಡೆಸಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವ ಬದಲಿಗೆ ಪ್ರತಿ ಕಿಲೋ ಅಕ್ಕಿಗೆ ಕೇಂದ್ರ ಆಹಾರ ನಿಗಮ ನಿಗದಿಪಡಿಸಿದ ಹಣವನ್ನು ತಾತ್ಕಾಲಿಕವಾಗಿ ಬಿಪಿಎಲ್ ಕಾರ್ಡುದಾರರಿಗೆ ನೀಡುವ ತೀರ್ಮಾನ ಕೈಗೊಂಡರೆನ್ನಲಾಗಿದೆ.
    ಇದಾದ ಬಳಿಕ ನಡೆದ ಸಂಪುಟ ಸಭೆಯಲ್ಲಿ ಅಕ್ಕಿಯ ಬದಲಿಗೆ ಹಣ ಕೊಡುವ ವಿಷಯದಲ್ಲಿ ಸುದೀರ್ಘ ಚರ್ಚೆ ನಡೆಯಿತು ಅಂತಿಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವ ಸಂಬಂಧ ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ ಟೆಂಡರ್ ಕರೆದು ಶರತ್ತುಗಳನ್ನು ವಿಧಿಸಬೇಕು ಆ ಶರತ್ತುಗಳನ್ನು ಪೂರೈಸಿದ ಸಂಸ್ಥೆಗಳಿಂದ ನಿಗದಿಪಡಿಸಿದ ದರದಲ್ಲಿ ಅಕ್ಕಿ ಖರೀದಿ ಮಾಡಬೇಕು ಅಲ್ಲಿಯವರೆಗೆ ಹಣ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರದ ಈ ನಿರ್ಧಾರದಿಂದ ಖಜಾನೆಗೆ ದೊಡ್ಡ ಪ್ರಮಾಣದ ಉಳಿತಾಯವಾಗಿದೆ ಪ್ರಮುಖವಾಗಿ ಸಾಗಾಣಿಕೆಗೆ ನೀಡಲಾಗುತ್ತಿದ್ದ ಹಣ ಮತ್ತು ನ್ಯಾಯಬೆಲೆ ಅಂಗಡಿಗಳ ವಿತರಕರಿಗೆ ನೀಡುತ್ತಿರುವ ನಿರ್ವಹಣಾ ವೆಚ್ಚ ಪ್ರತಿ ಕಿಲೋ ಗೆ ಒಂದು ರೂಪಾಯಿ 50 ಪೈಸೆ ಸೇರಿ ಸುಮಾರು ನೂರು ಕೋಟಿ ಉಳಿತಾಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಕಾಂಗ್ರೆಸ್ ಚುನಾವಣೆ ನ್ಯಾಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಮಂತ್ರಿಗಳ ಕಿವಿ ಹಿಂಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
    Next Article ವಿಧಾನಸಭೆ ಪ್ರವೇಶಿಸಿದ ಅನಾಮಿಕ
    vartha chakra
    • Website

    Related Posts

    ದಿನೇಶ್ ಗುಂಡೂರಾವ್ ಸಿಎಂ ಆಗಬೇಕಂತೆ.

    ಡಿಸೆಂಬರ್ 7, 2025

    ಕೆ.ಎನ್ ಶಾಂತಕುಮಾರ್ ಯಾಕೆ ಗೆಲ್ಲಬೇಕು ಗೊತ್ತಾ?

    ಡಿಸೆಂಬರ್ 6, 2025

    ದರ್ಶನ್‌ಗೆ ದುಡ್ಡು ಎಲ್ಲಿಂದ ಬಂತು?

    ಡಿಸೆಂಬರ್ 5, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪರಪ್ಪನ ಅಗ್ರಹಾರದಲ್ಲಿ ಟ್ರ್ಯಾಕಿಂಗ್ ಸಿಸ್ಟಂ

    ಸಾಲದಲ್ಲಿ ಮುಳುಗುತ್ತಿದ್ದಾರೆ ಭಾರತೀಯರು!

    ದಿನೇಶ್ ಗುಂಡೂರಾವ್ ಸಿಎಂ ಆಗಬೇಕಂತೆ.

    ಕೆ.ಎನ್ ಶಾಂತಕುಮಾರ್ ಯಾಕೆ ಗೆಲ್ಲಬೇಕು ಗೊತ್ತಾ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • umnye_tbpr ರಲ್ಲಿ ಕಾವೇರಿ ನದಿ ತೀರದ ಈ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.
    • umnye_vopr ರಲ್ಲಿ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದರೆ ಅಷ್ಟೇ..
    • Earnesteximi ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    Latest Kannada News

    ಪರಪ್ಪನ ಅಗ್ರಹಾರದಲ್ಲಿ ಟ್ರ್ಯಾಕಿಂಗ್ ಸಿಸ್ಟಂ

    ಡಿಸೆಂಬರ್ 8, 2025

    ಸಾಲದಲ್ಲಿ ಮುಳುಗುತ್ತಿದ್ದಾರೆ ಭಾರತೀಯರು!

    ಡಿಸೆಂಬರ್ 8, 2025

    ದಿನೇಶ್ ಗುಂಡೂರಾವ್ ಸಿಎಂ ಆಗಬೇಕಂತೆ.

    ಡಿಸೆಂಬರ್ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬೆಂಗಳೂರಲ್ಲಿ ಮನೆ ಕಟ್ಟೋಕೆ ಏನೇನ್ ರೂಲ್ಸ್ #varthachakra #buildingahouse #gba #bbmp #bangalorerealestate
    Subscribe