ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದಾಗಿನಿಂದಲೂ ದಿನಕ್ಕೊಂದು ವಿಚಿತ್ರ ಕಾನೂನುಗಳು ಜಾರಿಗೆ ಬರುತ್ತಲೇ ಇದೆ. ಇದೀಗ ಮತ್ತೊಂದು ಕಾನೂನು ಜಾರಿಗೆ ಬಂದಿದ್ದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಆಡಳಿತವನ್ನು ಟೀಕಿಸುವವರಿಗೆ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಹೇಳಿದೆ.
ಮಾತಿನ ಮೂಲಕ, ವರ್ತನೆ ಮೂಲಕ ಅಥವ ಸನ್ನೆಯ ಮೂಲಕ ಹೀಗೆ ಯಾವುದೇ ವಿಧದಲ್ಲಿಯಾದರೂ ಸರ್ಕಾರವನ್ನು ಖಂಡಿಸಿದಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದು ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂದ್ಜಾದಾ ಹೇಳಿದ್ದಾರೆ.