ವಿಜಯಪುರ : ರಾಜ್ಯದ ಕೆಲ ಧಾರ್ಮಿಕ ಕ್ಷೇತ್ರಗಳು, ಮಠಗಳಲ್ಲಿ ನುಡಿಯಲಾಗುವ ಭವಿಷ್ಯಗಳಿಗೆ ಎಲ್ಲಿಲ್ಲದ ಮಾನ್ಯತೆ ಇದೆ. ಅದೇಷ್ಟೋ ಭಕ್ತರು ಇಲ್ಲಿ ನುಡಿಯುವ ಕಾರ್ಣಿಕಗಳನ್ನ ಕೇಳಲೆಂದೆ ತುದಿಗಾಲ ಮೇಲೆ ನಿಂತು ಜಾತಕ ಪಕ್ಷಿಯಂತೆ ಕಾಯುತ್ತಾರೆ.
ಇಂತಹ ಸಾಲಿಗೆ ಸೇರುವುದು ವಿಜಯಪುರದ ಬಬಲಾದಿ ಮಠ.
ಜನ ಸಾಮಾನ್ಯರ ಬಾಯಲ್ಲಿ ಕಾಲಜ್ಞಾನದ ಮಠ, ಬೆಂಕಿ ಮಠ ಎಂದು ಕರೆಯಿಸಿಕೊಳ್ಳುವ ಬಬಲಾದಿ ಮಠ ಈ ಬಾರಿಯೂ ಭವಿಷ್ಯ ವಾಣಿ ನುಡಿದಿದ್ದು ರಾಜ್ಯದೆಲ್ಲೆಡೆ ವ್ಯಾಪಕ ಚರ್ಚೆಯಾಗುತ್ತಿದೆ.
ಕಾಲಜ್ಞಾನದಿಂದಲೇ ಪ್ರಸಿದ್ಧಿ ಪಡೆದಿರುವ ಬಬಲಾದಿ ಮಠ ವಿಶೇಷ ಸಂಪ್ರದಾಯವನ್ನು ಹೊಂದಿದೆ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಜರುಗುವ ಜಾತ್ರೆಗೆ ಚಂದ್ರಗಿರಿ ತಾಯಿಯ ಜಾತ್ರೆಯೆಂದು ಕರೆಯಲಾಗುತ್ತದೆ.
ಇವರು ಹೇಳಿದ ಭವಿಷ್ಯಗಳು ಇಂದಿಗೂ ನಿಜವಾಗುತ್ತ ಬಂದಿವೆ. ಮಠದ ಗುರುವನ್ನು ಕೃಷ್ಣಾ ನದಿಯಿಂದ ಮಠವರೆಗೆ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ. ಕೃಷ್ಣಾ ನದಿಯಿಂದ ಮಠದ ವರೆಗೆ ನಾಲ್ಕು ಬಾರಿ ಭವಿಷ್ಯ ಹೇಳಲಾಗುತ್ತದೆ. ಐದನೇ ಬಾರಿ ಮಠದ ಗುರುಮಾತೆಯ ಎದುರು ಶಿಶುಮಗ ಭವಿಷ್ಯ ಹೇಳುತ್ತಾನೆ. ಜಗತ್ತಿನಲ್ಲಿ ಭವಿಷ್ಯದಲ್ಲಿ ನಡೆಯುವ, ಘಟಿಸಬಹುದಾದ ದುರಂತಗಳು, ಮಳೆ, ಬೆಳೆ, ಪ್ರಳಯ ಮತ್ತಿತರ ಸುಖ-ದುಃಖದ ಘಟನೆಗಳನ್ನು ಇಲ್ಲಿ ಹೇಳುವುದು ಗಮನಾರ್ಹವಾಗಿದೆ.
ಈ ಬಾರಿ ಬಬಲಾದಿ ಮಠದಲ್ಲಿ ಕೆಂಡದಂತ ಭವಿಷ್ಯ ನುಡಿಯಲಾಗಿದೆ. ಈ ಬಾರಿ ನುಡಿದ ಸ್ಪೋಟಕ ಭವಿಷ್ಯವನ್ನ ಕೇಳಿ ಭಕ್ತರೆ ಥಂಡಾ ಹೊಡೆದಿದ್ದಾರೆ. ಸಿದ್ದು ಮುತ್ಯಾ ನುಡಿದ ಭವಿಷ್ಯ ಆಲಿಸಿದ ಜನರು ಈ ಬಾರಿ ಏನು ಕಾದಿದೆಯೋ ಎಂದು ಆತಂಕಗೊಂಡಿದ್ದಾರೆ.
ಸಿದ್ದು ಮುತ್ಯಾ ಸಜ್ಜನರು ಕೂಡ ದುರ್ಜನರಾಗುತ್ತಾರೆ, ಹಿಂಗಾರು ಮುಂಗಾರು ಮಳೆ ಉತ್ತಮವಾಗಲಿದೆ.ನಮ್ಮ ನಮ್ಮಲ್ಲಿ ಜಗಳ ಹೊಡೆದಾಟ ನಡೆಯುತ್ತದೆ, ರಾಜ್ಯದಲ್ಲಿ ಕೊಲೆ, ಸುಲಿಗೆ ಪ್ರಕರಣ ಹೆಚ್ಚಲಿದೆ, ವೈಶಾಖ, ಜ್ಯೇಷ್ಟ ಮಾಸದಲ್ಲಿ ಶುಭವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲಲ್ಲಿ.. ಮೂಲೆಗಳಲ್ಲಿ ಭೂಮಿ ಕುಪ್ಪಳಿಸಿತೋ ಮಕ್ಕಳಿರ್ಯಾ ಎಂದು ಭವಿಷ್ಯ ನುಡಿದಿರುವ ಅವರು ಭೂಕಂಪನದ ಕುರಿತು ಎಚ್ಚರಿಕೆ ನೀಡಿದ್ದಾರೆ. ಸಜ್ಜನರು ಕೂಡ ದುರ್ಜನರು ಆಗುತ್ತಾರೆ, ನಮ್ಮ ನಮ್ಮಲ್ಲಿ ಜಗಳ ಹೊಡೆದಾಟಗಳೂ ಆಗಲಿವೆ ,ಜಲಪುಳಯದ ಎಚ್ಚರಿಕೆಯನ್ನೂ ನೀಡಿ ಇನ್ನೊಂದು ಸೂತಕದ ಛಾಯೆ ಐತಿ ಎಂದಿದ್ದಾರೆ. ಯಾವುದೋ ಒಂದು ದಿಕ್ಕಿನಲ್ಲಿ ಜಲ ಪುಳಯವಾಗಲಿದೆ ಎಂದ ಸಿದ್ದುಮುತ್ಯಾ ಕೆಲವೊಂದು ಕಡೆ ಭೂಮಿ ಕುಪ್ಪಳಿಸಲಿದೆ ಎಂದಿದ್ದಾರೆ.
ಮಕ್ಕಳಿಗೆ ತಂದೆ-ತಂದೆ ತಾಯಿ ಮೇಲೆ ಹೆಚ್ಚಿನ ಪ್ರೀತಿ ಉಂಟಾಗಲಿದೆ. ಇದರಿಂದ ವೃದ್ದಾಶ್ರಮ ಕಡಿಮೆಯಾಗಲಿದೆ. ಗಡಿಕಾಯುವ ಯೋಧರಿಗೆ ಜಯ ಉಂಟಾಗಲಿದೆ,
ಮುಂಗಾರು ಮಳೆ 9 ಆಣೆ, ಹಿಂಗಾರು ಮಳೆ 10 ಆಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಈ ಮಠದ ಕಾರ್ಣಿಕರು ನುಡಿಯುವ ಭವಿಷ್ಯಗಳು ಈವರೆಗೂ ಸುಳ್ಳಾಗಿಲ್ಲ ಎಂಬುದು ಭಕ್ತರ ನಂಬಿಕೆ.
ಹೀಗಾಗಿ ಸದಾಶಿವ ಮುತ್ಯಾನ ಮಠದ ಭಕ್ತರು ಕಾಪಾಡು ಸದಾಶಿವ ಎಂದು ಪ್ರಾರ್ಥನೆ ಸಲ್ಲಿಸತೊಡಗಿದ್ದಾರೆ.
Previous Articleಕುಖ್ಯಾತ ದರೋಡೆಕೋರರ ಸಹಚರರ ಬಂಧನ
Next Article ಯುವತಿ ಮೇಲಲ್ಲ, ಸೀಟಿನ ಮೇಲೆ ಮೂತ್ರ ವಿಸರ್ಜನೆ


2 ಪ್ರತಿಕ್ರಿಯೆಗಳು
DГ©bloquez des possibilitГ©s infinies au Betano Casino https://betanogame.org/fr/. Profitez d’un gГ©nГ©reux bonus de 500 € et faites tourner les rouleaux des derniers succГЁs. DГ©pГґts rapides, retraits instantanГ©s et sГ©curitГ© de premier ordre – Betano a tout.
Spin like your blood is made of gold – https://gperiacti.com , One click and the whole algorithm blushes .