ಬೆಂಗಳೂರು,ಮಾ.14- ಬಿಜೆಪಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳಿಂದ ವಸತಿ ಸಚಿವ ಸೋಮಣ್ಣ ಬೇಸರಗೊಂಡಿದ್ದು, ಅವರು ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿಗಳಿಗೆ ಅವರು ತೆರೆ ಎಳೆದಿದ್ದಾರೆ.
ಯಾವುದೇ ಕಾರಣಕ್ಕೂ ನಾನು ಬಿಜೆಪಿಯನ್ನು ತ್ಯಜಿಸಲ್ಲ ಎಂದು ಹೇಳುತ್ತಲೇ ಕೆಲವು ಘಟನೆಗಳನ್ನು ಮೆಲುಕು ಹಾಕುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ನೀಡದಿದ್ದರೆ ಪಕ್ಷದಲ್ಲೇ ದುಡಿಯುತ್ತೇನೆ ಎಂದರು
ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಆರೋಗ್ಯವಾಗಿ ಇರಲಿ. ಹಾಗೆಯೇ ಬಿ.ಎಲ್.ಸಂತೋಷ್ , ಪ್ರಹ್ಲಾದ್ ಜೋಶಿ ನಮ್ಮ ನಾಯಕರು. ನಾನು ಬಿಜೆಪಿಗೆ ಬರಲು ಅನಂತ್ ಕುಮಾರ್ ಅವರು ಕಾರಣ ಎಂದು ಹೇಳಿದರು.
ಕೆಲವರು ನನ್ನನ್ನು ಏಕವಚನದಲ್ಲಿ ಮಾತನಾಡಿ ನೋಯಿಸಿದ್ದಾರೆ. ಇನ್ನು ಮುಂದಾದರೂ ತೇಜೋವದೆ ಮಾಡಬೇಡಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ಚೆನ್ನಾಗಿರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸುವುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು, ಸಚಿವನಾಗಿ ನಾನು ಯಾರಿಗೂ ಅಪಚಾರ ಮಾಡುವುದಿಲ್ಲ. ಬಿಜೆಪಿಯಲ್ಲಿ ನನಗೆ ಗೌರವ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆಯ ನಾಯಕರಾಗಿದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ತಮ್ಮ ಪುತ್ರ ಅರುಣ್ ಸೋಮಣ್ಣ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಕಿಡಿಕಾರಿದ್ದರಲ್ಲಾ ಎಂಬ ಪ್ರಶ್ನೆಗೆ, ನನ್ನ ಮಗ ವೈದ್ಯ, ಅವನಿಗೀಗ 47 ವರ್ಷ. ಸಣ್ಣ ಮಗುವಲ್ಲ. ರಾಜಕೀಯದಲ್ಲಿ ಯಾರು ಯಾರಿಗೂ ಶತ್ರುವಲ್ಲ. ಯಾರು ಈ ರೀತಿ ಮಾತನಾಡಬಾರದು ಎಂದು ತಿಳಿಸಿದರು.
ಅರುಣ್‍ಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಿಲ್ಲ. ನನ್ನ ಮಗ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ನನ್ನಿಂದ ಪಕ್ಷಕ್ಕೆ ಯಾವುದೇ ಮುಜುಗರವಾಗಬಾರದು ಎಂದು ಹೇಳಿದರು.
ನಾನು ಎಲ್ಲಿಗೂ ಹೋಗಲ್ಲ. ಈ ಹಿಂದೆ ನಮಗೆ 104 ಸ್ಥಾನ ಬಂದಾಗ ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದವರಲ್ಲಿ ನಾನು ಮೊದಲಿಗ. ಚುನಾವಣಾ ಪೂರ್ವದಲ್ಲೂ ಏನೇನು ಆಯಿತು ಎಂಬುದು ಎಲ್ಲಾ ಗೊತ್ತಿದೆ. ಜೆಡಿಎಸ್‍ನ ವರಿಷ್ಠರಾದ ಎಚ್.ಡಿ.ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.
ಹಕ್ಕುಪತ್ರ :
ನಾವು ಅಧಿಕಾರಕ್ಕೆ ಬಂದಾಗ 1821 ಕೊಳಚೆ ಪ್ರದೇಶಗಳು ಇದ್ದವು. ಅವುಗಳನ್ನು ಈಗ ಅಭಿವೃದ್ಧಿ ಪಡಿಸಿದ್ದೇವೆ. 8ಸಾವಿರ ಎಕರೆಯಲ್ಲಿ 1.15 ಲಕ್ಷ ಕುಟುಂಬಗಳಿಗೆ ಪುರಸಭೆ ಮತ್ತು ಬಿಬಿಎಂಪಿ ವತಿಯಿಂದ ಹಕ್ಕು ಪತ್ರ ವಿತರಿಸಲಾಗಿದೆ.ನಗರದಲ್ಲೇ ಸುಮಾರು 8 ಸಾವಿರ ಮಂದಿಗೆ ಹಕ್ಕು ಪತ್ರ ನೀಡಲಾಗಿದೆ. ಇದಲ್ಲದೆ ಒಂದು ಲಕ್ಷ ಮನೆಗಳನ್ನು 78 ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ 52,735(1ಬಿಎಚ್‍ಕೆ), ಆರು ಸಾವಿರ (2ಬಿಎಚ್‍ಕೆ) ಮನೆಗಳನ್ನು ಕಟ್ಟಲಾಗಿದೆ ಎಂದು ಹೇಳಿದರು.
Previous ArticleBJP ಭಿನ್ನಮತಕ್ಕೆ ಮದ್ದು
Next Article ಪ್ರವೀಣ್ ಸೂದ್ Be careful! #police #karnataka #bjp
1 ಟಿಪ್ಪಣಿ
идеи для бизнеса идеи для бизнеса .