ಬೆಂಗಳೂರು,ಆ.30-ಬ್ಯಾಕಾಂಕ್ನಿಂದ ನಗರಕ್ಕೆ ಅಕ್ರಮವಾಗಿ ತರಲಾಗಿದ್ದ 60 ಜೀವಂತ ನಕ್ಷತ್ರ ಆಮೆಗಳನ್ನು ರಕ್ಷಣೆ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು ಅವುಗಳನ್ನು ರಾಜ್ಯ ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ.
ಕಳೆದ ಆ. 27 ರಂದು ಬ್ಯಾಂಕಾಕ್ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಆತನ ಬ್ಯಾಗೇಜ್ನಲ್ಲಿ 60 ಜೀವಂತ ನಕ್ಷತ್ರ ಆಮೆಗಳು ಪತ್ತೆಯಾಗಿದ್ದವು. ತಕ್ಷಣವೇ ಅವುಗಳ ರಕ್ಷಣೆ ಮಾಡಿದ ಅಧಿಕಾರಿಗಳು ರಾಜ್ಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ
Previous ArticlePOCSO ಬೆನ್ನಲ್ಲೇ ದೌರ್ಜನ್ಯ ಕಾಯ್ದೆ ಕಂಟಕ
Next Article ವಾಲ್ಮೀಕಿ ಸಮುದಾಯಕ್ಕೆ ಶೀಘ್ರವೇ ಸಿಹಿ ಸುದ್ದಿ.