ತಮಿಳು ನಟಿ ಐಶ್ವರ್ಯಾ ಭಾಸ್ಕರನ್ ಅವರು ಈಗ ಕೆಲಸವಿಲ್ಲದ ಕಾರಣ ಬದುಕಲು ಮನೆ ಮನೆಗೆ ಸಾಬೂನು ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಅಲ್ಲದೆ ತಾನು ಟಾಯ್ಲೆಟ್ ತೊಳೆಯೋ ಕೆಲಸಕ್ಕೂ ಸಿದ್ದವೆಂದಿದ್ದಾರೆ.
ಸ್ಟಾರ್ ನಟಿಯಾಗಿದ್ದ ಐಶ್ವರ್ಯ ಈ ನಿರುದ್ಯೋಗಿಯಾಗಿದ್ದು ಸಿನಿಮಾಗಳಲ್ಲಿ ಅವರಿಗೆ ಅವಕಾಶವಿಲ್ಲವಾಗಿದೆ.
ಐಶ್ವರ್ಯಾ ಭಾಸ್ಕರನ್ ಬಟರ್‌ಫ್ಲೈಸ್, ನರಸಿಂಹಂ ಮತ್ತು ಪ್ರಜಾ ಮುಂತಾದ ಚಿತ್ರಗಳಲ್ಲಿ ಮೋಹನ್‌ಲಾಲ್ ನಾಯಕಿಯಾಗಿದ್ದರು. ಮತ್ತು ಮಲಯಾಳಂ ಸಿನಿ ಪ್ರೇಕ್ಷಕರಲ್ಲಿ ಬಹಳ ಜನಪ್ರಿಯರಾಗಿದ್ದರು. ಐಶ್ವರ್ಯಾ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಐಶ್ವರ್ಯಾ ದಕ್ಷಿಣ ಭಾರತದ ಹಿರಿಯ ನಟಿ ಲಕ್ಷ್ಮಿ ಅವರ ಮಗಳು. ಆದರೆ ಕೆಲ ಸಮಯದಿಂದ ಬೆಳ್ಳಿತೆರೆಯಲ್ಲಿ ಸಕ್ರಿಯವಾಗಿಲ್ಲ. ನಿರುದ್ಯೋಗದಿಂದ ಆದಾಯವು ಇಲ್ಲವಾಗಿದೆ. ಐಶ್ವರ್ಯಾ ತನಗೆ ಕೆಲಸವಿಲ್ಲ, ಹಣವಿಲ್ಲ, ಬೀದಿಯಲ್ಲಿ ಸಾಬೂನು ಮಾರುತ್ತಾ ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ. ಐಶ್ವರ್ಯಾ ಚಲನಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿದ್ದಾರೆ ಮತ್ತು ಯಾರಾದರೂ ಕರೆ ಮಾಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದಾರೆ. ಬದುಕು ನಡೆಸೋಕೆ ನಿಮ್ಮ ಕಚೇರಿಯಲ್ಲಿ ಟಾಯ್ಲೆಟ್ ತೊಳೆಯೋ ಕೆಲಸ ಮಾಡೋಕೂ ಓಕೆ ಅಂತ ನಟಿ ಹೇಳಿಕೊಂಡಿದ್ದಾರೆ.
ಐಶ್ವರ್ಯ ಕನ್ನಡದಲ್ಲಿ ಪಾಂಡವರು, ಒಗ್ಗರಣೆ ಚಿತ್ರದಲ್ಲಿ ನಟಿಸಿದ್ದಾರೆ.
ಟಾಯ್ಲೆಟ್ ತೊಳೆಯೋ ಕೆಲಸಕ್ಕೂ ಸಿದ್ದ ಎಂದ ನಟಿ!
Previous Articleಗಂಡನಿಗಾಗಿ ಡ್ರಗ್ಸ್ ಮಾರಿದ ಪತ್ನಿ..!!
Next Article ರಾಜ್ಯಾದ್ಯಂತ ಎಸಿಬಿ ದಿಢೀರ್ ದಾಳಿ!