ಬೆಂಗಳೂರು,ಫೆ.15: ಅಚ್ಚರಿಯ ಹಾಗೂ ಕ್ಷೀಪ್ರ ರಾಜಕೀಯ ಬೆಳವಣಿಗೆ ಒಂದರಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ನ ಭಿನ್ನಮತದ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ರಾಜ್ಯಸಭೆ (Rajya Sabha) ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಈ ಮೂಲಕ ಚುನಾವಣೆಯ ಅಖಾಡಕ್ಕೆ ಭರ್ಜರಿ ರಂಗು ಬಂದಿದೆ.
ಫೆಬ್ರವರಿ 27ರಂದು ನಡೆಯುತ್ತಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಗೆ ಬಿಜೆಪಿ ನಾರಾಯಣ ಸಾ ಬಾಂಡಗೆ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ಪ್ರಮುಖರೊಂದಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ಹಿರಿಯ ನಾಯಕ ಕುಪೇಂದ್ರ ರೆಡ್ಡಿ ಅವರೊಂದಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ನಾಯಕರೊಂದಿಗೆ ತೆರಳಿ ಕುಪೇಂದ್ರ ರೆಡ್ಡಿ ಅವರ ನಾಮಪತ್ರ ಸಲ್ಲಿಸಿದರು.
ವಿಧಾನಸಭೆಯಲ್ಲಿ ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಧ್ಯತೆಯಿದೆ. ಇದಕ್ಕಾಗಿ ಪಕ್ಷದ ಹಿರಿಯ ನಾಯಕ ಅಜಯ್ ಮಾಕೇನ್ ಅವರನ್ನು ಕಣಕ್ಕಿಳಿಸಿದೆ. ಸದ್ಯ ರಾಜ್ಯಸಭೆ ಸದಸ್ಯತ್ವ ದಿಂದ ನಿವೃತ್ತರಾಗುತ್ತಿರುವ ಜಿ.ಸಿ ಚಂದ್ರಶೇಖರ್ ಮತ್ತು ನಾಸಿರ್ ಹುಸೇನ್ ಅವರಿಗೆ ಮರು ಆಯ್ಕೆಯಾಗಲು ಅವಕಾಶ ನೀಡಿದೆ.
ರಾಜ್ಯಸಭೆಯ ಸದಸ್ಯರಾಗಲು ಪ್ರತಿಯೊಬ್ಬ ಅಭ್ಯರ್ಥಿಗೆ 46 ಶಾಸಕರ ಮತಗಳ ಅಗತ್ಯವಿದೆ ಹೀಗಾಗಿ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡ ನಂತರ ಹೆಚ್ಚುವರಿ ಮತಗಳು ಉಳಿಯಲಿವೆ.
ವಿಧಾನಸಭೆಯಲ್ಲಿ ಜೆಡಿಎಸ್ ಹೊಂದಿರುವ ಸಂಖ್ಯಾಬಲದಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಲಾಗಿತ್ತು ಆದರೆ ದಿಡೀರ್ ನಿಲುವು ಬದಲಾಯಿಸಿದ ಜೆಡಿಎಸ್ ನಾಯಕತ್ವ ಇದೀಗ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ಅನುದಾನ ಹಂಚಿಕೆ ಸೇರಿದಂತೆ ಹಲವಾರು ಕಾರಣಗಳಿಂದ ಕಾಂಗ್ರೆಸ್ ಒಡೆದ ಮರೆಯಾಗಿದೆ ಹಲವು ಶಾಸಕರು ನಾಯಕತ್ವದ ವಿರುದ್ಧ ತಿರುಗಿ ಬಿದ್ದರೆ ಇಂತಹ ಬಂಡಾಯದ ಲಾಭವನ್ನು ತಾವು ಪಡೆಯಬಹುದು ಹೀಗಾಗಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜೆಡಿಎಸ್ ತನ್ನ ಎಲ್ಲ ಮತಗಳನ್ನು ವರ್ಗಾಯಿಸಲಿದೆ ಎಂದು ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿಳಿಸಿದ್ದರು.
ಕುಮಾರಸ್ವಾಮಿ ನೀಡಿದ ಆಹ್ವಾನದ ಕುರಿತಂತೆ ಬಿಜೆಪಿ ಚಿಂತಕರ ಚಾವಡಿ ಹಲವು ಸುತ್ತಿನ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂಬ ನಿಲುವಿಗೆ ಬಂದಿತು ಒಂದು ವೇಳೆ ಜೆಡಿಎಸ್ ಆಡಳಿತ ಪಕ್ಷ ಕಾಂಗ್ರೆಸ್ಸಿನಲ್ಲಿರುವ ಒಡಕಿನ ಲಾಭ ಲಾಭ ಪಡೆಯುವುದಾದರೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ ಬಿಜೆಪಿಯ ಹೆಚ್ಚುವರಿ ಮತಗಳನ್ನು ಅವರಿಗೆ ವರ್ಗಾಯಿಸಬಹುದು ಎಂಬ ನಿರ್ಧಾರ ಕೈಗೊಂಡು ಕುಮಾರಸ್ವಾಮಿ ಅವರಿಗೆ ಮಾಹಿತಿ ರವಾನಿಸಲಾಯಿತು.
ಬಿಜೆಪಿಯಿಂದ ಹೆಚ್ಚುವರಿ ಮತಗಳು ದೊರಕಲಿವೆ ಎಂಬ ಕಾತರಿ ಸಿಗುತ್ತಿದ್ದಂತೆ ರಂಗ ಪ್ರವೇಶಿಸಿದ ಕುಮಾರಸ್ವಾಮಿ. ಇದೀಗ ಕಾಂಗ್ರೆಸ್ಸಿನಲ್ಲಿರುವ ಒಡಕಿನ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದಾರೆ.
ಪಕ್ಷೇತರ ಶಾಸಕರಾದ ಜನಾರ್ದನ ರೆಡ್ಡಿ ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವ ಭರವಸೆ ನೀಡಿದ್ದಾರೆ ಇದರೊಂದಿಗೆ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಅವರ ಮತವನ್ನು ಜೆಡಿಎಸ್ ನಂಬಿಕೊಂಡಿದೆ ಇದನ್ನು ಹೊರತುಪಡಿಸಿ ಬೇಕಿರುವ ಇತರೆ ಮೂರು ಮತಗಳ ಕೊರತೆ ನೀಗಿಸಿಕೊಳ್ಳಲು ಕಾಂಗ್ರೆಸ್ಸಿನಲ್ಲಿರುವ ಭಿನ್ನಮತದ ಲಾಭ ಪಡೆಯಲು ಲೆಕ್ಕಾಚಾರ ಹಾಕಲಾಗಿದೆ ಆಕಾಡ ಕುತೂಹಲ ಮೂಡಿಸಿದೆ.