ಬೆಂಗಳೂರು,ಜೂ.19-ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ನಗರ ಪೊಲೀಸರು ನಗರದಲ್ಲೆಡೆ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ನಗರದ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿ ಪ್ರಧಾನಿಗಳು ಸಂಚರಿಸುವ ಮಾರ್ಗ ದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಕೆಂಗೇರಿ ಬಳಿಯ ಕೊಮ್ಮಘಟ್ಟದ ಬಳಿಯ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಭದ್ರತೆಗಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಕಮಿಷನರ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದು ಅಧಿಕಾರಿಗಳು, ಸಿಬ್ಬಂದಿಯ ಸಂಖ್ಯಾಬಲ ಈ ಕೆಳಗಿನಂತಿದೆ.
ತಲಾ ಇಬ್ಬರು ಹೆಚ್ಚುವರಿ ಆಯುಕ್ತರು.ಜಂಟಿ ಆಯುಕ್ತರು, 8 ಮಂದಿ ಡಿಸಿಪಿಗಳು 25 ಮಂದಿ ಎಸಿಪಿಗಳು 123ಇನ್ಸ್ಪೆಕ್ಟರ್-126 ಸಬ್ ಇನ್ಸ್ಪೆಕ್ಟರ್-1,736.ಎಎಸ್ಐ,2,100 ಸಿಬ್ಬಂದಿ ನಿಯೋಜಿತರಾಗಿದ್ದಾರೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಧಾನಿ ಕಾರ್ಯಕ್ರಮದ ವೇದಿಕೆ ಹಾಗೂ ಹೆಲಿಪ್ಯಾಡ್ ಸುತ್ತಮುತ್ತ ಬಂದೋಬಸ್ತ್ ಹೊಣೆ ನೀಡಲಾಗಿದೆ. ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ನೂರಾರು ಪೊಲೀಸರ ಸರ್ಪಗಾವಲಿರಲಿದೆ. ಸಿಎಆರ್, ಕೆಎಸ್ಆರ್ಪಿ, ಗರುಡ ಪಡೆ ಕ್ಯೂಆರ್ ಟಿ ಪಡೆ ಕೂಡ ವಿಶೇಷವಾಗಿ ಭದ್ರತೆಗೆ ನಿಯೋಜನೆಗೊಂಡಿವೆ.