ಹಿಂದಿ ಲೇಖಕಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ
ಗೀತಾಂಜಲಿ ಶ್ರೀ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಲೇಖಕಿಯಾಗಿದ್ದಾರೆ.
ಅವರ ಕಾದಂಬರಿ ಟಾಂಬ್ ಆಫ್ ಸ್ಯಾಂಡ್, ಭಾರತದ ವಿಭಜನೆಯ ನೆರಳಿನಲ್ಲಿ ಕೌಟುಂಬಿಕ ಕಥೆಯನ್ನು ಹೇಳುತ್ತದೆ, ಪತಿಯ ಮರಣದ ನಂತರ 80 ವರ್ಷದ ಮಹಿಳೆಯ ಜೀವನಾಧಾರಿತ ಕಥೆ ಇದು
£50,000 ಬಹುಮಾನಕ್ಕೆ ಆಯ್ಕೆಯಾದ ಮೊದಲ ಹಿಂದಿ ಭಾಷೆಯ ಪುಸ್ತಕ ಇದಾಗಿದೆ.
“ನಾನು ಬೂಕರ್ ಬಗ್ಗೆ ಎಂದಿಗೂ ಕನಸು ಕಂಡಿರಲಿಲ್ಲ, ನಾನು ಈ ಸಾಧನೆ ಮಾಡಬಹುದೆಂದು ನಾನು ಎಂದಿಗೂ ಯೋಚಿಸಲಿಲ್ಲ” ಎಂದು ಗೀತಾಂಜಲಿ ಶ್ರೀ ಹೇಳಿದರು. “ನನ್ನ ಮತ್ತು ಈ ಪುಸ್ತಕದ ಹಿಂದೆ ಹಿಂದಿ ಮತ್ತು ದಕ್ಷಿಣ ಏಷ್ಯಾದ ಇತರ ಭಾಷೆಗಳಲ್ಲಿ ಶ್ರೀಮಂತ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಸಾಹಿತ್ಯ ಸಂಪ್ರದಾಯವಿದೆ. ಈ ಭಾಷೆಗಳಲ್ಲಿ ಕೆಲವು ಅತ್ಯುತ್ತಮ ಬರಹಗಾರರನ್ನು ತಿಳಿದುಕೊಂಡಲ್ಲಿ ವಿಶ್ವ ಸಾಹಿತ್ಯವು ಶ್ರೀಮಂತವಾಗಿರುತ್ತದೆ” ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಜನಿಸಿದ ಗೀತಾಂಜಲಿ ದೆಹಲಿ ನಿವಾಸಿ. ಇವರು ಮೂರು ಕಾದಂಬರಿಗಳು ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಇದರಲ್ಲಿ ಹಲವು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಜರ್ಮನ್ ಹಾಗು ಕೊರಿಯಾ ಭಾಷೆಗಳಿಗೆ ಭಾಷಾಂತರಗೊಂಡಿವೆ.