ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ತಮ್ಮ ಸ್ಥಾನಕ್ಕೆ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಡೌನಿಂಗ್ ಸ್ಟ್ರೀಟ್‌ನ ಹೊರಗೆ ಮಾತನಾಡಿದ ಅವರು, ತಾನು ಆಯ್ಕೆಯಾದ ಜನಾದೇಶವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಮುಂದಿನ ಪ್ರಧಾನ ಮಂತ್ರಿ ಯಾರು ಎಂದು ಹುಡುಕುವ ಸ್ಪರ್ಧೆಯನ್ನು ಇದು ಆರಂಭಿಸಿದೆ. ಮುಂದಿನ ಶುಕ್ರವಾರದ ವೇಳೆಗೆ ಫಲಿತಾಂಶ ಬರುವ ನಿರೀಕ್ಷೆಯಿದೆ. ಹೊಸದಾಗಿ ನೇಮಕಗೊಂಡ ಚಾನ್ಸೆಲರ್ ಜೆರೆಮಿ ಹಂಟ್ ಅವರು ತಾವು ಪ್ರಧಾನಿಯಾಗುವುದನ್ನು ತಳ್ಳಿಹಾಕಿದ್ದಾರೆ. ಆದರೆ ಕಳೆದ ಬಾರಿ ಅವಕಾಶ ಸಿಗದ ರಿಷಿ ಸುನಕ್ ಮತ್ತು ಪೆನ್ನಿ ಮೊರ್ಡಾಂಟ್ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ.
ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೆ ಸ್ಪರ್ಧಿಸುತ್ತಾರೊ ಇಲ್ಲವೋ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ.
ಈ ಬಾರಿ ಹೆಚ್ಚು ಸ್ಪರ್ಧೆ ನಡೆಯುವುದಿಲ್ಲ ಎಂದು ಆ ಪ್ರಕ್ರಿಯೆಯನ್ನು ಆಯೋಜಿಸುವ ಸಮಿತಿಯ ಅಧ್ಯಕ್ಷ ಗ್ರಹಾಂ ಬ್ರಾಡಿ ಹೇಳಿದ್ದಾರೆ.
45 ದಿನಗಳ ಅಧಿಕಾರದ ನಂತರ ಟ್ರಸ್ ಅವರ ನಿರ್ಗಮನವು ಯುಕೆ ಇತಿಹಾಸದಲ್ಲಿ ಅವರು ಅತ್ಯಂತ ಕಡಿಮೆ ಅವಧಿಯ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದಂತಾಗುತ್ತದೆ.
ಕಳೆದ ತಿಂಗಳು ಟ್ರಸ್ ಅವರ ಮಿನಿ-ಬಜೆಟ್‌ನಿಂದ ಆಕೆಯ ಪ್ರಧಾನ ಹುದ್ದೆಗೆ ಕಂಟಕ ಆರಂಭವಾಯಿತು. ಅದು ದೇಶದ ಮಾರುಕಟ್ಟೆಗಳನ್ನು ಅಲ್ಲಾಡಿಸಿತ್ತು ಮತ್ತು ಆನಂತರ ಹೊಸ ಚ್ಯಾನ್ಸಲರ್ ನೇಮಕದೊಂದಿಗೆ ರದ್ದುಗೊಳಿಸಲ್ಪಟ್ಟಿತು.
ಬುಧವಾರ ಸರ್ಕಾರದ ಗೃಹ ಕಾರ್ಯದರ್ಶಿಯ ರಾಜೀನಾಮೆ ಮತ್ತು ಕಾಮನ್ಸ್‌ನಲ್ಲಿ ಅಸ್ತವ್ಯಸ್ತವಾದ ಮತದಾನವು ಟ್ರಸ್ ಅವರ ಭವಿಷ್ಯವನ್ನು ಮುಗಿಸಿತು ಎನ್ನಲಾಗಿದೆ.
Previous Articleಇತಿಹಾಸ ಸೃಷ್ಟಿಸಿದ ಕನ್ನಡಿಗ ಖರ್ಗೆ
Next Article ಜಯನಗರದ ಫುಟ್ ಪಾತ್ ಗಳನ್ನು ನುಂಗಲು ಹೊರಟವರು!