ಬೆಂಗಳೂರು – ಓಲಾ,ಊಬರ್ ಸೇರಿದಂತೆ ಎಲ್ಲಾ ಆ್ಯಪ್ ಆಧಾರಿತ ಟ್ಯಾಕ್ಸಿಗಳು ಮತ್ತು ರೇಡಿಯೋ ಟ್ಯಾಕ್ಸಿಗಳು ಹವಮಾನದ ವ್ಯತ್ಯಾಸ ಮತ್ತು ದಟ್ಟಣೆ ಹೆಸರಲ್ಲಿ ಪ್ರಯಾಣ ದರ ಏರಿಕೆ, ಇಳಿಕೆ ಮಾಡುವುದಾಗಿ ಹೇಳುತ್ತಾ ಜನ ಸಾಮಾನ್ಯರಿಗೆ ಹೊರೆ ಹಾಕುವ ಕುರಿತಂತೆ ಪುಂಖಾನುಪುಂಖವಾಗಿ ಕೇಳಿ ಬರುತ್ತಿದ್ದ ದೂರುಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ವಿಶೇಷ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಇದೀಗ
ಸಿಟಿ ಟ್ಯಾಕ್ಸಿಗಳು ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿಗಳು ಹವಮಾನದ ವ್ಯತ್ಯಾಸ ಮತ್ತು ಜನದಟ್ಟಣೆಗೆ ಅನುಗುಣವಾಗಿ ಪ್ರಯಾಣ ದರ ಏರಿಕೆ, ಇಳಿಕೆ ಮಾಡುತ್ತಿರುವುದನ್ನು ತಪ್ಪಿಸಲು ಏಕರೂಪದ ದರ ನಿಗದಿಪಡಿಸಿ ಹೊರಡಿಸಿದೆ.
ಓಲಾ, ಉಬರ್ ಸಹಿತ ಎಲ್ಲ ಟ್ಯಾಕ್ಸಿಗಳಿಗೆ ಈ ನಿಯಮ ಅನ್ವಯ ಆಗಲಿದೆ.ಟ್ಯಾಕ್ಸಿ ಬಳಕೆದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ಮಳೆ ಬಂದಾಗ ದರ ಹೆಚ್ಚಳ ಮಾಡುವುದು, ಜನರು ಕಚೇರಿಗೆ, ಕೆಲಸಕ್ಕೆ ತೆರಳುವ ಸಮಯದಲ್ಲಿ ದಟ್ಟಣೆ ಹೆಸರಲ್ಲಿ
ದರ ಹೆಚ್ಚಿಸುವುದು ಮಾಮೂಲಾಗಿತ್ತು.ಇದರ ವಿರುದ್ಧ ಪ್ರಯಾಣಿಕರು ಸಾಕಷ್ಟು ಬಾರಿ ದೂರು ನೀಡಿದ್ದರು.
ಇದನ್ನು ತಪ್ಪಿಸಲು ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ನಿರ್ದೇಶನದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಅಧಿಕಾರಿಗಳು,ಹಲವಾರು ಸುತ್ತಿನಲ್ಲಿ ಸಭೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ.
ಇಲ್ಲಿವರೆಗೆ ಸಿಟಿ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಅಗ್ರಿಗೇಟರ್ ಟ್ಯಾಕ್ಸಿಗಳ ದರ ಬೇರೆ ಬೇರೆಯಾಗಿದ್ದವು. ಈಗ ಹೊರಡಿಸಿರುವ ಅಧಿಸೂಚನೆ ಪ್ರಕಾರ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಪಡಿಸಲಾಗಿದೆ. ಏಕರೂಪ ಮತ್ತು ಪರಿಷ್ಕೃತ ದರಗಳು ಬೆಂಗಳೂರು ನಗರ ಒಳಗೊಂಡಂತೆ ಇಡೀ ರಾಜ್ಯಕ್ಕೆ ಅನ್ವಯವಾಗಲಿವೆ.
ಸದ್ಯ ಜಾರಿಗೊಂಡಿರುವ ಆದೇಶದಲ್ಲಿ ವಾಹನಗಳ ಮೌಲ್ಯಗಳನ್ನು ಆಧರಿಸಿ ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ಈ ವಿಭಾಗಗಳಿಗೆ ನಿಗದಿತ ದರ ನಿಗದಿ ಮಾಡಲಾಗಿದೆ. ವೈಯಕ್ತಿಕ ಲಗೇಜ್ ದರವು 120 ಕೆ.ಜಿ. ವರೆಗೆ ಉಚಿತವಾಗಿದೆ. ನಂತರದ ಪ್ರತಿ 30 ಕಿಲೋ ಗ್ರಾಂ ವರೆಗೆ 7ರೂಪಾಯಿ ನಿಗದಿ ಮಾಡಲಾಗಿದೆ.
ಕಾಯುವಿಕೆ ದರವು ಮೊದಲ 5 ನಿಮಿಷಗಳವರೆಗೆ ಉಚಿತವಾಗಿದ್ದು, ಬಳಿಕದ ಪ್ರತಿ ನಿಮಿಷಕ್ಕೆ 1ರೂಪಾಯಿ ನೀಡಬೇಕಾಗುತ್ತದೆ. ರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಶೇ 10ರಷ್ಟು ಹೆಚ್ಚುವರಿ ದರ ನಿಗದಿ ಮಾಡಲಾಗಿದೆ.
ನಗರ ಟ್ಯಾಕ್ಸಿಯವರು, ಅಗ್ರಿಗೇಟರ್‌ಗಳು ಜಿಎಸ್‌ಟಿ ಮತ್ತು ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದು. ಸಮಯಕ್ಕೆ ಅನುಗುಣವಾಗಿ ಏರಿಕೆ ಮಾಡದೆ, ಕಿಲೋ ಮೀಟರ್ ಆಧಾರದಲ್ಲಿ ನಿಗದಿಪಡಿಸಿರುವ ದರಗಳನ್ನು ಮಾತ್ರ ವಸೂಲಿ ಮಾಡಬೇಕು. ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡೆಯಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.


7 ಪ್ರತಿಕ್ರಿಯೆಗಳು
betmgm sportsbook app betmgm-play mgm 200 free bet
Experience the fusion of tradition and innovation in gaming. In crown coin casino online, blockchain tech secures your funds. Innovate your way to wealth!
Sweet Bonanza combines eye-popping visuals with high-volatility excitement that sweet bonanza tips keeps players coming back. Free spins round loaded with up to 100x multipliers = pure adrenaline. Join the candy craze!
chumba casino big wins: free to play, real money to win. Get your welcome Sweeps Coins bonus and experience the ultimate social casino. Start now!
Want anonymous crypto gambling with huge multipliers? stake vip club has been delivering it for years. Jump in.
Crown yourself at DraftKings jackpot Casino. Play $5 today for 500 spins on Cash Eruption and up to $1,000 lossback. Elite casino thrills await!
Nejlevnejsi cesta k originalnim generikum v CR
https://opravdovalekarna.cz