ಬೆಂಗಳೂರು,
ಬಳ್ಳಾರಿ ಎಸ್ ಪಿಯಾಗಿ ಅಧಿಕಾರವಹಿಸಿಕೊಂಡ ಒಂದೇ ದಿನದಲ್ಲಿ ಪವನ್ ನೆಜ್ಜೂರು ಕರ್ತವ್ಯ ಲೋಪ ಆರೋಪದಲ್ಲಿ ಸೇವೆಯಿಂದ ಅಮಾನತುಗೊಂಡಿದ್ದಾರೆ.
ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸೇವೆಗೆ ನಿಯೋಜನೆಗೊಂಡ ಕೇವಲ ಒಂದೇ ದಿನದ ನಂತರ ಅವರು ಅಮಾನತುಗೊಳ್ಳಲು ಕರ್ತವ್ಯ ನಿರ್ಲಕ್ಷ್ಯ ಜೊತೆಗೆ ಮದ್ಯದ ಅಮಲು ಕಾರಣವಾಗಿದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣದ ಸಂಬಂಧ ಪವನ್ ನಿಜ್ಜೂರು ಅವರನ್ನು ಸರ್ಕಾರ ನಿನ್ನೆ ರಾತ್ರಿ ಅಮಾನತು ಮಾಡಿ ಆದೇಶ ಪ್ರಕಟಿಸಿತ್ತು.
ಸರ್ಕಾರದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ರಾಜಕಾರಣಿಗಳು ಮಾಡುವ ತಪ್ಪಿಗೆ ಪೊಲೀಸರಿಗೆ ಶಿಕ್ಷೆ ಎಂಬ ಟೀಕೆಗಳು ಬಂದ ಬೆನ್ನಲ್ಲೇ ಪವನ್ ನಿಜ್ಜೂರು ಮದ್ಯದ ಅಮಲಿನ ವಿಚಾರ ಬೆಳಕಿಗೆ ಬಂದಿದೆ.
ಜ.1 ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಅವರು ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು,ಅಂದು ರಾತ್ರಿ ನಿರ್ಗಮಿತ ಎಸ್ ಪಿ ಶೋಭಾರಾಣಿ ಅವರು ತಮ್ಮ ಸಿಬ್ಬಂದಿಗೆ ಪಾರ್ಟಿ ನೀಡಿದ್ದರು. ಈ ಪಾರ್ಟಿಯಲ್ಲಿ ಪವನ್ ನಿಜ್ಜೂರು ಮದ್ಯ ಸೇವಿಸಿದ್ದರು.
ಸಂಜೆ ವೇಳೆ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಗಲಾಟೆ ಆರಂಭವಾಗಿತ್ತು. ಗಲಾಟೆ ನಡೆಯುತ್ತಿದ್ದರೂ ಪವನ್ ಅವರು ಸ್ಥಳಕ್ಕೆ ಹೋಗಿರಲಿಲ್ಲ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಬೇಕಿತ್ತು.
ಗಲಾಟೆ ವಿಕೋಪಕ್ಕೆ ತಿರುಗಿದ ಬೆನ್ನಲ್ಲೇ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆರ್. ಹಿತೇಂದ್ರ ಮತ್ತು ಡಿಜಿ- ಐಜಿಪಿ ಸಲೀಂ ಫೋನ್ ಮಾಡಿದರೂ ಪವನ್ ಅವರು ಕರೆಯನ್ನೇ ಸ್ವೀಕರಿಸಿರಲಿಲ್ಲ.
ತಕ್ಷಣವೇ ಚಿತ್ರದುರ್ಗದ ಎಸ್‌ಪಿ ರಂಜಿತ್ ಕುಮಾರ್ ಗೆ ಸ್ಥಳಕ್ಕೆ ಹೋಗುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು.
ಕೊನೆಗೆ ರಾತ್ರಿ ಪವನ್ ನೆಜ್ಜೂರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪವನ್ ಅವರು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಉಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಅತಿಯಾದ ಮಧ್ಯ ಸೇವನೆಯಿಂದ ನಿಯಂತ್ರಣ ಕಳೆದುಕೊಂಡಿದ್ದರಿಂದ ಮಾಧ್ಯಮಗಳ ಮುಂದೆ ಪವನ್ ಬಾರದಂತೆ ಹಿರಿಯ ಅಧಿಕಾರಿಗಳು ನೋಡಿಕೊಂಡಿದ್ದರು.
ಬಳ್ಳಾರಿ ರೇಂಜ್ ಡಿಐಜಿ ಆಗಿರುವ ವರ್ತಿಕಾ ಕಟಿಯಾರ್ ಈ ಎಲ್ಲಾ ವಿಚಾರಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವಿಚಾರ ಸರ್ಕಾರದ ಗಮನಕ್ಕೆ ಬಂದ ಬೆನ್ನಲ್ಲೇ ಅವರನ್ನು ಅಮಾನತು ಮಾಡುವ ನಿರ್ಧಾರ ಕೈಗೊಂಡಿದೆ.
ಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?
Previous ArticleAlcohol ಇಲ್ಲದೆ ಪಾರ್ಟಿ ನಡೆಯುತ್ತಾ?
Next Article ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!
