ಬೆಂಗಳೂರು.
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಮತ್ತು ಅರಾಜಕತೆಯ ಕರಿ ನೆರಳು ಇದೀಗ ಅತ್ಯಂತ ಜನಪ್ರಿಯ ಚುಟುಕು ಕ್ರಿಕೆಟ್ ಐಪಿಎಲ್ ಟಿ 20 ಪಂದ್ಯಾವಳಿಗಳ ಮೇಲೂ ಬೀರಿದೆ.
ಬಾಂಗ್ಲಾದಲ್ಲಿ ಶೇಕ್ ಹಸೀನಾ ಸರ್ಕಾರ ಪತನಗೊಂಡ ನಂತರ ರಾಜಕೀಯ ಅಸ್ಥಿರತೆ ಉಂಟಾಗಿದೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ ಈ ಹಿಂಸಾತ್ಮಕ ದಾಳಿಯಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹಳಸಿದೆ. ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಅವರಿಗೆ ಭಾರತ ರಾಜಕೀಯ ಆಶ್ರಯ ನೀಡಿದೆ ಇದರ ವಿರುದ್ಧ ಅಲ್ಲಿನ ಮೂಲಭೂತವಾದಿಗಳು ಆಕ್ರೋಶಗೊಂಡಿದ್ದು ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಇದಕ್ಕೆ ಭಾರತ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಅಷ್ಟೇ ಅಲ್ಲ ಬಾಂಗ್ಲಾದಲ್ಲಿರುವ ಭಾರತೀಯರ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ ಇದರ ನಡುವೆಯೇ ಐಪಿಎಲ್ ಪಂದ್ಯದಲ್ಲಿ ಆಡುತ್ತಿರುವ ಬಾಂಗ್ಲಾದ ಆಟಗಾರ ಮುಸ್ತಾಫಿಜುರ್ ಅವರನ್ನು ಐಪಿಎಲ್ ಪಂದ್ಯಗಳಿಂದ ದೂರ ಇಡುವಂತೆ ಬಿಸಿಸಿಐ ಸೂಚನೆ ನೀಡಿದೆ.
ಬಾಂಗ್ಲಾ ಕ್ರಿಕೆಟ್ ಆಟಗಾರ ಮುಸ್ತಾಫಿಜುರ್ ಸದ್ಯ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಟವಾಡುತ್ತಿದ್ದಾರೆ
ಕೊಲ್ಕತ್ತಾ ನೈಟ್ ರೈಡರ್ಸ್ ಆಡಳಿತ ಮಂಡಳಿಯನ್ನು ಸಂಪರ್ಕಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಕ್ಷಣದಿಂದ ಜಾರಿಗೆ ಬರುವಂತೆ ಬಾಂಗ್ಲಾ ಆಟಗಾರನನ್ನು ತಂಡದಿಂದ ಕೈ ಬಿಡಬೇಕು ಎಂದು ಸೂಚಿಸಿದ್ದಾರೆ ಈ ಆಟಗಾರನನ್ನು ಕೈಬಿಟ್ಟ ನಂತರ ಪರ್ಯಾಯ ಆಟಗಾರನ ಸೇರ್ಪಡೆಗೆ ಬಿಸಿಸಿಐ ಅನುಮತಿ ನೀಡಲಿದೆ ಎಂದು ಹೇಳಿದ್ದಾರೆ
ಮುಸ್ತಾಫಿಜುರ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.
Previous Articleಸಫಾರಿ ಪ್ರಿಯರಿಗೆ ಸಿಹಿ ಸುದ್ದಿ
Next Article Alcohol ಇಲ್ಲದೆ ಪಾರ್ಟಿ ನಡೆಯುತ್ತಾ?
