ಬೆಂಗಳೂರು.
ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮತ್ತು ನಾಯಕತ್ವ ಬದಲಾವಣೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ನಡುವೆ ಪಕ್ಷದ ಸುಮಾರು 60 ಮಂದಿ ಶಾಸಕರು ಸದ್ದಿಲ್ಲದೆ ವಿದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದಾರೆ.
ಈ ಮೊದಲು ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರು ತಮ್ಮ ಆಪ್ತ 30ಕ್ಕೂ ಹೆಚ್ಚು ಮಂದಿ ಶಾಸಕರೊಂದಿಗೆ ವಿದೇಶ ಪ್ರವಾಸ ತೆರಳಲು ತಯಾರಿ ಆರಂಭಿಸಿದ್ದರು. ಆದರೆ ಈ ವಿದೇಶ ಪ್ರವಾಸಕ್ಕೆ ನಾನಾ ಅರ್ಥಗಳು ಕೇಳಿಬಂದ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ಪ್ರವಾಸವನ್ನು ಮುಂದೂಡಿದ್ದರು.
ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದದೊಂದಿಗೆ ಶಾಸಕರ ವಿದೇಶ ಪ್ರವಾಸ ನಡೆಯುತ್ತಿದೆ ಎಂದು ಹೇಳಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 60ಮಂದಿ ಶಾಸಕರು ತಂಡ ತಂಡವಾಗಿ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ಮಂತ್ರಿಯೊಬ್ಬರು ಈ ಎಲ್ಲಾ ಶಾಸಕರ ಪ್ರವಾಸದ ಉಸ್ತುವಾರಿ ವಹಿಸಲಿದ್ದಾರೆ ಟೀ ಕುಡಿದಂತೆ ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ಏಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿ ಅವರ ಸಮ್ಮತಿ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ನಾಯಕತ್ವ ಬಿಕ್ಕಟ್ಟಿನ ಕುರಿತಂತೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಕಡೆ ಎಲ್ಲರೂ ಕೂತೂಹಲದಿಂದ ನೋಡುತ್ತಿರುವ ಸಮಯದಲ್ಲಿ ಶಾಸಕರ ಈ ವಿದೇಶ ಪ್ರವಾಸ ಕುತೂಹಲ ಮೂಡಿಸಿದೆ.
Previous Articleಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆ ಡೇಟ್ ಫಿಕ್ಸ್
Next Article ಬೆಂಗಳೂರು ಪುಟ್ ಪಾತ್ ಮೇಲೆ ಗಾಂಜಾ ಮಾರಾಟ

