ಬೆಂಗಳೂರು – ಲೋಕಸಭೆ ಚುನಾವಣೆ ಪ್ರಚಾರದ ಕಾವು ತೀವ್ರಗೊಂಡಿರುವ ಬೆನ್ನೆಲೆ ರಾಜ್ಯದ ಜನಪ್ರಿಯ ದೈನಿಕ ವಿಜಯ ವಾಣಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ.
ರಾಜ್ಯದ 14 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಸಮಯದಲ್ಲಿ ವಿಜಯವಾಣಿ ದಿನಪತ್ರಿಕೆಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಭೀಮ್ ಆರ್ಮಿ ಸಂಘಟನೆ ಆಯೋಗಕ್ಕೆ ದೂರು ಸಲ್ಲಿಸಿದೆ.
ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಮಾಧ್ಯಮ ಸಂಸ್ಥೆಗಳು ಸಮೀಕ್ಷಾ ವರದಿಗಳನ್ನು ಪ್ರಕಟಿಸಬಾರದು ಎಂದು ಆಯೋಗ ಸ್ಪಷ್ಟ ಸೂಚನೆ ನೀಡಿದೆ ಬರುವ ಜೂನ್ ಎರಡರವರೆಗೆ ಈ ನಿಯಮ ಜಾರಿಯಲ್ಲಿದ್ದು ಅದನ್ನು ವಿಜಯವಾಣಿ ಪತ್ರಿಕೆ ಉಲ್ಲಂಘಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ ಈ ಪತ್ರಿಕೆಯು ಪರೋಕ್ಷವಾಗಿ ಬಿಜೆಪಿಯ ಜಾಹೀರಾತಿನ ರೂಪದಲ್ಲಿ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬ ಅಂಕಿ ಅಂಶಗಳನ್ನು ನೀಡಲಾಗಿದೆ ಇದು ಸ್ಪಷ್ಟವಾಗಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ವಿಶ್ವಾಸದ ತಂಗಾಳಿ ಎಂಬ ಶೀರ್ಷಿಕೆಯ ಈ ವರದಿ ಸಂಪೂರ್ಣ ಕಾನೂನುಬಾಹಿರವಾಗಿದೆ ಎಂದು ಆರೋಪಿಸಿರುವ ಭೀಮ್ ಆರ್ಮಿಯ ಅಧ್ಯಕ್ಷ ರಾಜಗೋಪಾಲ್ ಅವರು ವಿಜಯವಾಣಿ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ
6 ಪ್ರತಿಕ್ರಿಯೆಗಳು
Типы натяжных потолков: какой выбрать?
прайс на натяжні стелі прайс на натяжні стелі .
купить семена в интернет магазине наложенным платежом купить семена в интернет магазине наложенным платежом .
наркологическая скорая наркологическая скорая .
идеи малого бизнеса идеи малого бизнеса .
новый бизнес новый бизнес .
insta stories anonymous [url=https://anonstoriesview.com]insta stories anonymous[/url] .