ಬೆಂಗಳೂರು,ಏ.20- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಕೆಜಿಎಫ್ ಬಾಬು (KGF Babu) ಮನೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ಮತದಾರರ ಗುರುತಿನ ಪತ್ರ (ವೋಟರ್ ಐಡಿ)ಗಳು ಪತ್ತೆಯಾಗಿವೆ.
ಪತ್ತೆಯಾಗಿರುವ ಪ್ರತಿ ವೋಟರ್ ಐಡಿಗಳ ಜೊತೆಗೆ ತಲಾ 5 ಸಾವಿರ ರೂ. ಚೆಕ್‌ಗಳೊಂದಿಗೆ ಶೇಖರಿಸಿಡಲಾಗಿತ್ತು.
ದಾಳಿ ನಡೆಸಿದ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ವೋಟರ್ ಐಡಿ ಹಾಗೂ ಚೆಕ್‌ಗಳು ದೊರೆತಿವೆ.
ಮನೆಯ ನೆಲಮಹಡಿಯಲ್ಲಿ ಸುಮಾರು 26 ಬ್ಯಾಗ್‌ಗಳಲ್ಲಿ ಸೀರೆಗಳು ದೊರಕಿವೆ. ಸುಮಾರು 5,000 ಸೀರೆಗಳು ಪತ್ತೆಯಾಗಿದ್ದು, ಅವು ಕಾಂಚಿಪುರಂ ರೇಷ್ಮೆ ಸೀರೆಗಳಾಗಿವೆ ಎನ್ನಲಾಗಿದೆ.

ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಈ ಎಲ್ಲಾ ವಸ್ತುಗಳ ಮೇಲೆ ಕೆಜಿಎಫ್ ಬಾಬು ಅವರಿಂದ ಉಡುಗೊರೆ ಎಂದು ಬರೆಯಲಾಗಿದ್ದು, ಅವರ ಫೋಟೋಗಳು ಕೂಡಾ ಕಂಡುಬಂದಿದೆ. ಈ ಎಲ್ಲಾ ವಸ್ತುಗಳನ್ನು ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದು, ಇದೀಗ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆ ಶಿವಾಜಿನಗರ ವಲಯ ಚುನಾವಣಾ ವೇಳೆ ಉಸ್ತುವಾರಿಯಿಂದ ಹೈ ಗ್ರೌಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೆಜಿಎಫ್ ಬಾಬು (KGF Babu) ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಪ್ರಚಾರವನ್ನು ನಡೆಸಿದ್ದರು. ಆದರೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿರದ ಕಾರಣ ಅವರ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಕಣಕ್ಕೆ ಇಳಿಸಿದ್ದಾರೆ.
ಐಟಿ ದಾಳಿ ವೇಳೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ವೋಟರ್ ಐಡಿಗಳು ಪತ್ತೆಯಾಗಿವೆ. ಪ್ರತಿ ವೋಟರ್ ಐಡಿಗಳನ್ನು ತಲಾ 5ಸಾವಿರ ರೂ. ಚೆಕ್‌ಗಳೊಂದಿಗೆ ಶೇಖರಿಸಿಡಲಾಗಿತ್ತು.
ಕೆಜಿಎಫ್ ಬಾಬುಗೆ ಸಂಬಂಧಪಟ್ಟ ಹೈಗ್ರೌಂಡ್ ಬಳಿ ಇರುವ ರುಕ್ಸಾನಾ ಪ್ಯಾಲೆಸ್ ಮೇಲೆ ನಿನ್ನೆ ಐಟಿ ಅಧಿಕಾರಿಗಳು ದಾಳಿ ನಡೆಸಲಾಗಿತ್ತು.


1 ಟಿಪ್ಪಣಿ
Nosta pelisi uudelle tasolle Betano Casinolla https://betanogame.org/fi/. nappaa upea €500 tervetuliaisbonus ja sukella satoihin premium-peleihin. Rakastatko slotteja, pokeria vai urheiluvedonlyöntiä – meiltä löytyy kaikki. Liity voittajien piiriin tänään.