ರಷ್ಯಾ ಅಧ್ಯಕ್ಷ ಪುಟಿನ್ ಗೆ ಈಗೊಂದು ಹೊಸ ತಲೆನೋವೊಂದು ಎದುರಾಗಿದೆ. ಯುಕ್ರೇನ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ರಷ್ಯಾ ಸೇನೆಯೊಂದಿಗೆ ಅರೆ ಸೇನಾ ಪಡೆಯಾಗಿರುವ ವಾಗ್ನರ್ ದಾಳಿಕೋರರನ್ನು ದೊಡ್ಡ ರೀತಿಯಲ್ಲಿ ಬಳಸಲಾಗಿತ್ತು. ಈ ವಾಗ್ನರ್ ದಾಳಿಕೋರರು ರಷ್ಯಾದ ಸೇನೆಗಿಂತ ವಿಭಿನ್ನವಾಗಿ ತಮ್ಮದೇ ಆದ ರೀತಿಯಲ್ಲಿ ದಾಳಿ ನಡೆಸುವವರಾಗಿದ್ದು ಅನೇಕ ಕಡೆ ಭಯ ಹುಟ್ಟಿಸುವ ರೀತಿಯಲ್ಲಿ ನಡೆದುಕೊಂಡಿದ್ದು ಆ ಕಾರಣದಿಂದ ಅವರನ್ನು ಮುಂದಿಟ್ಟುಕೊಂಡು ಯುಕ್ರೇನ್ ಅನ್ನು ಸದೆಬಡಿಯಲು ರಷ್ಯಾದ ಸರ್ಕಾರ ಹೊರಟಿತ್ತು. ಆದರೆ ಅನೇಕ ಸೋಲು ಗೆಲುವುಗಳ ಮಧ್ಯೆ ಈಗ ವಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗಾಝಿನ್ ರಷ್ಯಾದ ಆಡಳಿತಗಾರರ ವಿರುದ್ಧ ಸಿಡಿದೆದ್ದಿದ್ದು ಅನೇಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆ ಬೇಡಿಕೆಗಳು ಈಡೇರದಿದ್ದಲ್ಲಿ ರಷ್ಯಾದ ರಾಜಧಾನಿಯನ್ನು ವಶಕ್ಕೆ ಪಡೆದುಕೊಳ್ಳುವ ರೀತಿ ಅವರು ವರ್ತಿಸುತ್ತಿರುವುದು ಅನೇಕರಿಗೆ ತಲೆ ಬಿಸಿ ಉಂಟುಮಾಡಿದೆ. ರಷ್ಯಾದ ಅಧ್ಯಕ್ಷ ಪುಟಿನ್ ‘ಇದು ವಿದ್ರೋಹದ ಕೆಲಸ ಮತ್ತು ರಷ್ಯಾ ವಿರೋಧಿ ಕೆಲಸ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದಿದ್ದಾರೆ. ಆದರೆ ಪ್ರಿಗಾಝಿನ್ ಅವರ ಮುಂದಿನ ನಡೆ ಏನು ಎಂದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ.
ಪುಟಿನ್ ಗೆ ಸವಾಲೆಸೆದ ವಾಗ್ನರ್ ಮುಖ್ಯಸ್ಥ
Previous ArticleModiಗೆ ಅಮೆರಿಕಾದಲ್ಲಿ ಸ್ವಾಗತದ ಸವಿ ಪ್ರತಿಭಟನೆಯ ಬಿಸಿ
Next Article PGಯಲ್ಲಿರುವ ಮಹಿಳೆಯರೇ ಹುಷಾರ್!