ಬೆಂಗಳೂರು – ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಳೆದೊಂಸು ವಾರದಿಂದ ಸುರಿಯುತ್ತಿರುವ ಮಳೆ, ಮತ್ತೆ ಇನ್ನೂ ಒಂದು ವಾರ ಮುಂದುವರೆಯುವ ಸಾಧ್ಯತೆಗಳಿವೆ.ಮೇಲ್ಮೈ ಸುಳಿಗಾಳಿ ಹಾಗೂ ನೈರುತ್ಯ ಮುಂಗಾರು ಮರಳುವಿಕೆ ಪ್ರಕ್ರಿಯೆ ಪ್ರಾರಂಭ ವಾಗಿರುವ ಹಿನ್ನೆಲೆಯಲ್ಲಿ ಮಳೆ ಮುಂದು ವರೆಯುತ್ತಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.
ಸದ್ಯ ಸುರಿಯುತ್ತಿರುವ ಮಳೆ ಅಕ್ಟೋಬರ್ 20-21ರವರೆಗೆ ಮುಂದುವರೆಯಲಿದೆ.ಕರಾವಳಿ ಮತ್ತು ಒಳನಾಡಿನಲ್ಲಿ ಅಕ್ಟೋಬರ್ 17ರ ನಂತರ ಲ್ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ರಾಜ್ಯದ ಕೆಲವೆಡೆ ಮಳೆ ಕಡಿಮೆಯಾಗಬಹುದು, ಮತ್ತೆ ಕೆಲವೆಡೆ ಹೆಚ್ಚು ಆಗಬಹುದು.ಆದರೆ, ಮಳೆ ಚದುರಿದಂತೆ ಅಲ್ಲಲ್ಲಿ ಮುಂದುವರೆಯುತ್ತಲೇ ಇರುತ್ತದೆ. ಮುಂಗಾರು ಮರಳುವಿಕೆ ಹಾಗೂ ಈಶಾನ್ಯ ಹಿಂಗಾರು ಆರಂಭವಾಗುವ ಪರ್ವ ಕಾಲ ಇದಾಗಿದ್ದು , ಈ ಸಂದರ್ಭದಲ್ಲಿ ಮಳೆ ಯಾಗುವುದು ಸಹಜ ಪ್ರಕ್ರಿಯೆ ಎಂದು ತಿಳಿಸಿದೆ.