ಬೆಂಗಳೂರು,ಜ.31-
ಸುಮಾರು 7 ಕೋಟಿ ರೂ ಮೌಲ್ಯದ Cocaine ಹೊಂದಿರುವ 58 ಕ್ಯಾಪ್ಸುಲ್‌ಗಳನ್ನು ತನ್ನ ಕರುಳಿನಲ್ಲಿ ಬಚ್ಚಿಟ್ಟು ಸಾಗಿಸಲು ಯತ್ನಿಸಿದ್ದ ವಿದೇಶಿ ಮಹಿಳೆಯೊಬ್ಬರನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (40) ಎಂಬ ಮಹಿಳೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಮಹಿಳೆ ಕ್ಯಾಪ್ಸೂಲ್‌ಗಳನ್ನು ನುಂಗಿದ ನಂತರ ವೆಸ್ಟ್ ಆಫ್ರಿಕಾದ ಗಿನಿ (Guinea, West Africa) ದಲ್ಲಿ ವಿಮಾನವನ್ನು ಹತ್ತಿ ಜ.14 ರಂದು ಎಮಿರೇಟ್ಸ್ (Emirates) ವಿಮಾನದಲ್ಲಿ ದುಬೈ ಮೂಲಕ ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಅಧಿಕಾರಿಗಳು ಮಹಿಳೆಯ ಕೆಲವು ಅಸಾಮಾನ್ಯ ವರ್ತನೆಯನ್ನು ಗಮನಿಸಿದಾಗ ಅನುಮಾನ ಬಂದಿದೆ. ಹೀಗಾಗಿ ಮಹಿಳಾ ಅಧಿಕಾರಿಗಳ ಸಹಾಯದಿಂದ ಮಹಿಳೆಯನ್ನು ಸ್ಕ್ಯಾನ್ ಮತ್ತು ರೇಡಿಯಾಲಜಿ ಕಾರ್ಯವಿಧಾನಗಳಿಗೆ ಒಳಪಡಿಸಲಾಗಿದೆ. ಈ ವೇಳೆ ಮಹಿಳೆಯು ತನ್ನ ಕರುಳಿನಲ್ಲಿ ಕ್ಯಾಪ್ಸುಲ್ಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ನಂತರ ಆಕೆಯನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆಯ ವೇಳೆ, ಆಕೆಯ ಕಿಬ್ಬೊಟ್ಟೆಯಲ್ಲಿ Cocaine ಇರುವ 58 ಕ್ಯಾಪ್ಸುಲ್‌ಗಳು ಇರುವುದು ಸಾಬೀತಾಗಿದ್ದು, ಮಹಿಳೆ ಜ.13 ರಂದು ಗಿನಿಯಾದ ಕೊನಾಕ್ರಿ ಗ್ಬೆಸ್ಸಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Conakry Gbessia International Airport) ದಿಂದ ವಿಮಾನದಲ್ಲಿ 686 ಗ್ರಾಂ ಕೊಕೇನ್ ಅನ್ನು ಸಾಗಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರು ವೈದ್ಯಕೀಯ ಸಹಾಯದಿಂದ ಆಕೆಯ ದೇಹದಿಂದ ಎಲ್ಲಾ ಕ್ಯಾಪ್ಸುಲ್‌ಗಳನ್ನು ಹೊರತೆಗೆದಿದ್ದಾರೆ.


6 ಪ್ರತಿಕ್ರಿಯೆಗಳು
Gå med i tusentals vinnare på Betano https://betanogame.org/sv/. Få en enorm €500 bonus på din första insättning och njut av premiumspel. Live casino, virtuell sport och mer – allt i fantastiskt HD. Vänta inte.
Betano te da la bienvenida con los brazos abiertos y bonos enormes. Recibe el 100% hasta €500 más 200 giros gratis justo después de tu primer depósito https://betanogame.org/es/bonuses/. Desde tragamonedas Megaways hasta ruleta en vivo, la emoción no tiene fin. Empieza a ganar ahora.
Ready for serious action? Betano is waiting with open arms (and bonuses). https://tikitakagm.org/da/promo-code/ Betano keeps raising the bar while others lower expectations.
Mostbet ilЙ™ hЙ™r gГјn udmaq daha asandД±r – Mostbet AZ , Mostbet-Й™ qoЕџul, 550 AZN-Й™ qЙ™dЙ™r bonusu dЙ™rhal al .
Mostbet: mais emoГ§ГЈo, mais jogos, mais recompensas para vocГЄ – https://mostbetpt.pro/mostbet-app/ , Entre no Mostbet e deixe a diversГЈo tomar conta de tudo .
One flip and the whole timeline shifts in your favor – https://lorxitin.com , The lights dim for everyone else when you win .