Adani ಸಂಸ್ಥೆಯ ಬಗ್ಗೆ ಹಿಂಡೆನ್‌ಬರ್ಗ್ ರಿಸರ್ಚ್ (Hindenburg Research) ನ ಇತ್ತೀಚಿನ ವರದಿಯ ಕುರಿತು ಮತ್ತು ಅದರ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ವಹಿಸಿದ ಮೌನದ ಕುರಿತು, “ಮೋದಿ ಅವರು ಈ ವಿಷಯದ ಬಗ್ಗೆ ಮೌನವಾಗಿದ್ದಾರೆ, ಆದರೆ ಅವರು ವಿದೇಶಿ ಹೂಡಿಕೆದಾರರ ಪ್ರಶ್ನೆಗಳಿಗೆ ಮತ್ತು ಸಂಸತ್ತಿನಲ್ಲಿ ಇದರ ಕುರಿತು ಅವರು ಉತ್ತರಿಸಬೇಕಾಗುತ್ತದೆ. ಇದು ಭಾರತದ ಫೆಡರಲ್ ಸರ್ಕಾರದ ಮೇಲೆ ಮೋದಿಯವರ ಹಿಡಿತವನ್ನು ಗಮನಾರ್ಹವಾಗಿ ದುರ್ಬಲಗೊಳಿಸುತ್ತದೆ. ನಾನು ನಿಷ್ಕಪಟನಾಗಿರಬಹುದು, ಆದರೆ ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುಜ್ಜೀವನವನ್ನು ನಾನು ನಿರೀಕ್ಷಿಸುತ್ತೇನೆ” ಎಂದು ಟೀಕಿಸುವ ಮೂಲಕ ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ (George Soros, Billionaire investor) ಈಗ ಸುದ್ದಿಯಲ್ಲಿದ್ದಾರೆ.
ಈ ಟೀಕೆಯನ್ನು ಸ್ವೀಕರಿಸದ BJP ಪಕ್ಷ, “ಈ ಹೇಳಿಕೆ ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ನಾಶಪಡಿಸುವ ಘೋಷಣೆಯಾಗಿದೆ ಮತ್ತು ಭಾರತದ ವಿರುದ್ಧ ಯುದ್ಧ ನಡೆಯುತ್ತಿದೆ, ಪ್ರಧಾನಿ ಮೋದಿಯವರು ಯುದ್ಧ ಮತ್ತು ದೇಶದ ಹಿತಾಸಕ್ತಿಯ ನಡುವೆ ನಿಂತಿದ್ದಾರೆ” ಎಂದು ಏಟಿಗೆ ಎದಿರೇಟು ನೀಡಿದೆ.
ಇದೇನು ಮೊದಲ ಬಾರಿಯಲ್ಲ ಜಾರ್ಜ್ ಸೊರೊಸ್ ಮೋದಿಯವರನ್ನು ಟೀಕಿಸಿದ್ದು. ಇದಕ್ಕೂ ಮೊದಲು ಅಂದರೆ 2020 ರಲ್ಲೂ ಸಹ “frightening rise of nationalism in India” ಕುರಿತು ಮಾತನಾಡುತ್ತಾ, “ಭಾರತದಲ್ಲಿ ಅತಿದೊಡ್ಡ ಮತ್ತು ಅತ್ಯಂತ ಭಯಾನಕ ಹಿನ್ನಡೆ ಸಂಭವಿಸಿದೆ. ಅಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರೀಯತಾವಾದಿ ರಾಜ್ಯವನ್ನು ರಚಿಸುತ್ತಿದ್ದಾರೆ. ಕಾಶ್ಮೀರದ ಮೇಲೆ ದಂಡನಾತ್ಮಕ ಕ್ರಮಗಳನ್ನು ಹೇರುತ್ತಿದ್ದಾರೆ. ಅರೆ ಸ್ವಾಯತ್ತ ಮುಸ್ಲಿಂ ಪ್ರದೇಶ, ಮತ್ತು ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಾರೆ” ಎಂದಿದ್ದರು ಸೊರೊಸ್.
ಭಾರತದ ಬಗ್ಗೆ ಈ ಬಗೆಯ ಟೀಕಾ ಪ್ರಹಾರವನ್ನು ನಡೆಸಿದ ಈ ಜಾರ್ಜ್ ಸೊರೊಸ್ ಯಾರು?
ಇವರು ಹಂಗೇರಿಯನ್ ಮೂಲದ ಅಮೇರಿಕನ್ ಫೈನಾನ್ಶಿಯರ್, ಲೋಕೋಪಕಾರಿ ಮತ್ತು ಕಾರ್ಯಕರ್ತರಾಗಿದ್ದಾರೆ. ಅವರು ತಮ್ಮ ಯಶಸ್ವಿ ಹೂಡಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ, ಜೊತೆಗೆ ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಅವರ ಪರೋಪಕಾರಿ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ.
Schwartz ನಿಂದ Soros ಆಗಿದ್ದು ಹೇಗೆ?
1930 ರಲ್ಲಿ ಹಂಗೇರಿಯ (Hungary) ಶ್ರೀಮಂತ ಯಹೂದಿ (Jewish) ಕುಟುಂಬದಲ್ಲಿ ಜನಿಸಿದರು ಜಾರ್ಜ್ ಸೊರೊಸ್. ಆಗ ಹಂಗೇರಿಯಲ್ಲಿ ನಾಜಿಯ ಆಕ್ರಮಣ ಪರಾಕಾಷ್ಠೆಯನ್ನು ತಲುಪಿತ್ತು ಮತ್ತು ಯಹೂದಿಗಳನ್ನು ತೀವ್ರವಾಗಿ ವಿರೋಧಿಸಲಾಗುತ್ತಿತ್ತು. ಯಹೂದಿಗಳ ಹತ್ಯಾಕಾಂಡ ನಡೆಯುತ್ತಿತ್ತು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೂಲತಃ “ಶ್ವಾರ್ಟ್ಜ್” (Schwartz) ಎಂದು ಹೆಸರು ಪಡೆದಿದ್ದ ಜಾರ್ಜ ಕುಟುಂಬ “ಸೊರೊಸ್” (Soros) ಎಂದು ಬದಲಾಯಿತು. ನಕಲಿ ಗುರುತಿನ ಪತ್ರಗಳನ್ನು ಖರೀದಿಸುವ ಮೂಲಕ ತಮ್ಮ ಗುರುತನ್ನು ಮರೆಮಾಚಿಕೊಂಡರು.
ಯುದ್ಧದ ನಂತರ ಹಂಗೇರಿಯನ್ನು ತೊರೆದ ಸೊರೊಸ್ ಲಂಡನ್ (London) ತಲುಪಿದರು. ಅಲ್ಲಿ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (London School of Economics) ನಿಂದ ಪದವಿ ಪಡೆದರು. 1973 ರಲ್ಲಿ, ಅವರು ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ (Soros Fund Management) ಅನ್ನು ತೆರೆದರು ಮತ್ತು ಯುನೈಟೆಡ್ ಸ್ಟೇಟ್ಸ್ನ (United States) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ಒಬ್ಬರಾದರು.
The Man Who Broke the Bank of England
1992 ರ Black Wednesday UK ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಬೃಹತ್ ಲಾಭವನ್ನು ಗಳಿಸಿದ ಅವರನ್ನು ” The Man Who Broke the Bank of England” ಎಂದು ಕರೆಯಲಾಯಿತು. ಅವರು ಕೇವಲ ಬಹು ದೊಡ್ಡ ಶ್ರೀಮಂತರಷ್ಟೇ ಆಗಿರದೇ ಕೊಡುಗೈ ದಾನಿ ಎಂದೂ ಎನ್ನಿಸಿಕೊಂಡಿದ್ದಾರೆ.
ಅತ್ಯಂತ ದೊಡ್ಡ ಉದಾರಿ ಎಂದು ಹೊಗಳಿದ FORBES
ಅವರ ವೆಬ್‌ಸೈಟ್ ಪ್ರಕಾರ, ಪ್ರಪಂಚದಾದ್ಯಂತ open society foundation ಗಳ ಕೆಲಸಕ್ಕೆ ಧನಸಹಾಯ ಮಾಡಲು “ಅವರು ತಮ್ಮ ವೈಯಕ್ತಿಕ ಸಂಪತ್ತಿನ 32 ಶತಕೋಟಿ ಡಾಲರ್ ಗಿಂತ ಹೆಚ್ಚಿನದನ್ನು ನೀಡಿದ್ದಾರೆ”. ಈ ಕಾರಣದಿಂದಾಗಿ, 2020 ರಲ್ಲಿ, FORBES ಅವರನ್ನು “ಅತ್ಯಂತ ಉದಾರಿ” ಎಂದು ಕರೆದಿತ್ತು.
ಪ್ರಜಾಪ್ರಭುತ್ವದ ಬೆಂಬಲಿಗ
ಸೊರೊಸ್ “ದಮನಕಾರಿ ಆಡಳಿತ” ಗಳ ದೃಢವಾದ ವಿರೋಧಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ, open society foundation ಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಜವಾಬ್ದಾರಿಯುತ ಸರ್ಕಾರ ಮತ್ತು ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸುವ ಸಮಾಜಗಳಿಗಾಗಿ ಹೋರಾಡುವ ಜಗತ್ತಿನಾದ್ಯಂತ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಬೆಂಬಲಿಸುತ್ತವೆ”ಎಂದು ಅವರ ವೆಬ್‌ಸೈಟ್ ಹೇಳುತ್ತದೆ.
ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಸೊರೊಸ್, ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದ ಬಗ್ಗೆ ಮಾಡಿರುವ ಟೀಕೆ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾಕಾಗಿ ಈ ಟೀಕೆ ಎನ್ನುವ ಪ್ರಶ್ನೆಯೊಂದಿಗೆ ಇದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
4 ಪ್ರತಿಕ್ರಿಯೆಗಳು
safe reliable canadian pharmacy
pharmacy review
list of trusted canadian pharmacies
fda approved canadian pharmacies