ಬೆಂಗಳೂರು, ಮೇ 18- ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆ ಕಸರತ್ತು ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಕೂಡ ತೀವ್ರತೆ ಪಡೆದುಕೊಂಡಿದೆ. ಮಂತ್ರಿ ಸ್ಥಾನ ಪಡೆಯಲು ಹಲವರು ಲಾಭಿ ನಡೆಸಿದರೆ ಮಂತ್ರಿ ಆಗುವ ಖಚಿತತೆ ಇರುವ ಹಿರಿಯ ನಾಯಕರು ಪ್ರಮುಖ ಖಾತೆಗಳಿಗಾಗಿ ಪೈಪೋಟಿ ಆರಂಭಿಸಿದ್ದಾರೆ.
ಉಪಮುಖ್ಯಮಂತ್ರಿಯಾಗಲಿರುವ ಡಿಕೆ ಶಿವಕುಮಾರ್ ತಮಗೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಇಲಾಖೆ ಅಥವಾ ಇಂಧನ ಇಲಾಖೆ ಬೇಕು ಎಂದು ವರಿಷ್ಠರ ಬಳಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆನ್ನಲಾದ ಕೆಜೆ ಜಾರ್ಜ್ ಅವರು ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಇವರ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆ ಬೇಕೆಂದು ಹೇಳುತ್ತಿರುವ ಜಿ ಪರಮೇಶ್ವರ್ ಅವರು ಕೂಡ ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕೆಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿರುವವರು ಗೃಹ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯವೊಂದಿದ್ದರೂ, ಡಿಕೆ ಶಿವಕುಮಾರ್ ಅವರಿಗೆ ಆ ಜವಾಬ್ದಾರಿ ನೀಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ .
ಹೀಗಾಗಿ ಚಾರ್ಜ್ ಅಥವಾ ಜಿ ಪರಮೇಶ್ವರ್ ಇಬ್ಬರಲ್ಲಿ ಒಬ್ಬರನ್ನು ಗೃಹ ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದ್ದು ಪರಮೇಶ್ವರ್ ಅವರು ಗೃಹ ಖಾತೆಯ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ನೀಡಬೇಕೆಂದು ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಮತ್ತೊಬ್ಬ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಕೂಡ ತಮಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ನೀಡಬೇಕೆಂದು ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ ಬಿ ಪಾಟೀಲ್ ಅವರು ತಮಗೆ ಜಲ ಸಂಪನ್ಮೂಲ ಇಲಾಖೆ ಬೇಕೆಂದು ಮನವಿ ಮಾಡಿದರೆ ಸತೀಶ್ ಜಾರಕಿಹೊಳಿ ಅವರು ಸಮಾಜ ಕಲ್ಯಾಣ ಇಲಾಖೆ ಆರ್ ವಿ ದೇಶಪಾಂಡೆ ಬೃಹತ್ ಕೈಗಾರಿಕೆ ಟಿ. ಬಿ. ಜಯಚಂದ್ರ ಮತ್ತು ಕೃಷ್ಣ ಬೈರೇಗೌಡ ಕೃಷಿ ಯು.ಟಿ. ಖಾದರ್ ಅವರು ನಗರಾಭಿವೃದ್ಧಿ ಇಲಾಖೆಯ ಮೇಲೆ ಕಣ್ಣಿಟ್ಟಿದ್ದಾರೆ.
ಪ್ರಮುಖವಾಗಿ ಕಂದಾಯ ಬೆಂಗಳೂರು ನಗರಾಭಿವೃದ್ಧಿ ಜಲಸಂಪನ್ಮೂಲ ಬೃಹತ್ ಕೈಗಾರಿಕೆ ಮತ್ತು ಸಮಾಜಕಲ್ಯಾಣ ನಗರಾಭಿವೃದ್ಧಿ ಲೋಕೋಪಯೋಗಿ ಮತ್ತು ಸಣ್ಣ ಕೈಗಾರಿಕೆ ಇಲಾಖೆಗಳ ಮಂತ್ರಿ ಆಗಲು ಹಲವರು ಲಾಬಿ ನಡೆಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಯೋಜನೆ ಒಳಾಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯನ್ನು ಇಟ್ಟುಕೊಳ್ಳುವ ಸಾಧ್ಯತೆ ಇದೆ.
Previous Articleಅಬ್ಬಾ, ಸಮೀರ್ ವಾಂಖಡೆ ಬಳಿ ಎಷ್ಟೊಂದು ಆಸ್ತಿ!
Next Article BJP ವಿರುದ್ಧ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ