ಮುಂಬೈ: ಕ್ರಿಕೆಟ್ ಲೋಕದ ಜೀವಂತ ದಂತಕತೆ ಭಾರತ ರತ್ನ ಲಿಟಲ್ ಮಾಸ್ಟರ್ ತೆಂಡೂಲ್ಕರ್ (Sachin Tendulkar) ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೈವ. ಪ್ರಚಾರ ವಿವಾದಗಳು ಮಾತ್ರವಲ್ಲದೆ ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಗಾಸಿಪ್ ಗಳಿಂದ ದೂರ. ಹೀಗಾಗಿ ಸಚಿನ್ ಇದುವರೆಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡವರಲ್ಲ. ಆದರೆ ಇದೀಗ ಸಚಿನ್ ತೆಂಡೂಲ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರ ಮನೆಯ ಮುಂದೆ ಮಹಾರಾಷ್ಟ್ರದ ಪಕ್ಷೇತರ ಶಾಸಕ ಬಚ್ಚು ಕಡು ಧರಣಿ ನಡೆಸಿದ್ದಾರೆ.
ಅದು ಸಚಿನ್ ತೆಂಡೂಲ್ಕರ್ (Sachin Tendulkar) ವಿರುದ್ಧ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಆರೋಪ ಹೊರಿಸಿ ಧರಣಿ ಮಾಡಲಾಗಿದೆ.
ಇದರ ನಿಜವಾದ ಕಾರಣ ಆನ್ ಲೈನ್ ಗೇಮಿಂಗ್ ಆ್ಯಪ್. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆನ್‌ಲೈನ್ ಗೇಮಿಂಗ್ ಆ್ಯಪ್ ಒಂದರ ಜಾಹಿರಾತಿನಲ್ಲಿ ನಟಿಸಿ,ಆನ್ ಲೈನ್ ಆಟವಾಡಲು ಜನರನ್ನು ಉತ್ತೇಜಿಸಿದ್ದಾರೆ.
ಆನ್ ಲೈನ್ ಗೇಮ್ ನ ಗೀಳಿಗೆ ಬಿದ್ದವರು ಮನೆ, ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿರುವ, ಆತ್ಮಹತ್ಯೆಗೆ ಶರಣಾಗುತ್ತಿರುವ ಅನೇಕ ಉದಾಹರಣೆಗಳಿವೆ.ಈ ಮೂಲಕ ಆನ್ ಲೈನ್ ಗೇಮ್ ಸಮಾಜಕ್ಕೆ ಪಿಡುಗಾಗತೊಡಗಿದೆ.
ಇಂತಹ ಕೆಟ್ಟ ವ್ಯವಸ್ಥೆಯ ಪರವಾಗಿ ಸಚಿನ್ ಪ್ರಚಾರ ಮಾಡಿರುವುದು ಶಾಸಕ ಬಚ್ಚು ಕಡು ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಶಾಸಕ ಬಚ್ಚು ಕಡು, ಭಾರತ ರತ್ನ ದಂತಹ ಅತ್ಯುನ್ನತ ಗೌರವ ಪಡೆದಿರುವ ವ್ಯಕ್ತಿಗಳು ‘ಯಾವುದನ್ನು ಜಾಹೀರಾತು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬುದಕ್ಕೆ ಭಾರತ ರತ್ನ ನೀತಿ ಸಂಹಿತೆ ಹೊಂದಿದೆ. ಹಾಗಾಗಿ ಈಗ ಲಾಯರ್ ಮೂಲಕ ತೆಂಡೂಲ್ಕರ್ ಅವರಿಗೆ ನೋಟಿಸ್ ಕಳುಹಿಸಿದ್ದೇನೆ. ಸಚಿನ್ ಒಬ್ಬ ಆದರ್ಶ ವ್ಯಕ್ತಿ. ಕೆಲವರಿಗೆ ಅವರು ಕ್ರಿಕೆಟ್ ದೇವರಂತೆ ಬಿಂಬಿತವಾಗಿದ್ದಾರೆ. ಅಲ್ಲದೆ ಸಚಿನ್ ಅವರಿಗೆ ಲಕ್ಷ್ಯಾಂತರ ಫಾಲೋವರ್ಸ್ ಕೂಡ ಇದ್ದಾರೆ. ಹಾಗಾಗಿ ಸಚಿನ್ ಏನಾದರೂ ತಪ್ಪು ಮಾಡಿದ್ದರೆ ಅದು ಯುವ ಪೀಳಿಗೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಬಚ್ಚು ಕಡು ಆರೋಪಿಸಿದ್ದಾರೆ.
ಹೀಗಾಗಿ ಅವರ ಮನೆಯ ಮುಂದೆ ಧರಣಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು.
LATEST KANNADA NEWS
ಗೃಹ ಲಕ್ಷ್ಮಿಗೆ ಅದ್ದೂರಿ ಚಾಲನೆ ನೀಡಿದ ಬಿಜೆಪಿ ಶಾಸಕ | Gruha Lakshmi