ಹಾಸನ,ಜೂ.14- ತಾಳಿ ಕಟ್ಟಿದ ಪತಿಯನ್ನೇ ಕೊಲೆಗೈದು ಕೃತ್ಯವನ್ನು ಅಪಘಾತ ಎಂದು ಬಿಂಬಿಸಿ ನಾಟಕ ಮಾಡಲು ಹೋದ ಖತರ್ನಾಕ್ ಪತ್ನಿ ಗೊರೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಕಳೆದ ಜೂ. 5ರ ರಾತ್ರಿ ಬೈಕ್‍ನಿಂದ ಬಿದ್ದ ಸ್ಥಿತಿಯಲ್ಲಿ ಕೃಷ್ಣೇಗೌಡ(52) ಸಾವನ್ನಪ್ಪಿದ್ದರು. ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ, ಮೊಸಳೆಹೊಸಳ್ಳಿ ಸಮೀಪ ಪತ್ನಿ ಮನೆಯಲ್ಲಿಯೇ ವಾಸವಿದ್ದರು.
ಮನೆಯ ಸಮೀಪ ರಸ್ತೆಯಲ್ಲಿ ಕೃಷ್ಣೇಗೌಡ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದ ಬಳಿಕ ಪತ್ನಿ ಹಾಗು ಅತ್ತೆಯೇ ಪತಿಯ ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದಾರೆ.
ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿಯ ಕೃಷ್ಣೇಗೌಡ, ಗುಡುಗನಹಳ್ಳಿಯ ಜ್ಯೋತಿಯನ್ನು 23 ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಕೆಲದಿನಗಳಿಂದ ಪ್ರತಿದಿನ ಕೃಷ್ಣೇಗೌಡರ ಜೊತೆ ಜ್ಯೋತಿ ಜಗಳ ತೆಗೆದು, ಕೆಲವು ವೇಳೆ ಹಲ್ಲೆ ಮಾಡುತ್ತಿದ್ದಳು. ಜೂ.5 ರಂದು ಇದೇ ಜಗಳ ವಿಕೋಪಕ್ಕೆ ತಿರುಗಿ ಹರಿತವಾದ ಆಯುಧದಿಂದ ಹೊಡೆದು, ಕತ್ತುಹಿಸುಕಿ ಕೊಲೆ ಮಾಡಿ ಕೃತ್ಯ ಮರೆಮಾಚಲು ಅಪಘಾತವಾಗಿದೆ ಎಂದು ಬಿಂಬಿಸಲು ಬೈಕ್ ಸಮೇತ ಮೃತದೇಹವನ್ನು ರೈಸ್ ಮಿಲ್ ಹತ್ತಿರ ರಸ್ತೆಗೆ ರಾತ್ರೋರಾತ್ರಿ ತಂದು ಹಾಕಿದ್ದಾರೆ. ಕೃಷ್ಣೇಗೌಡನನ್ನು ಕೊಲೆ ಮಾಡಲು ಆತನ ಪತ್ನಿ ಜ್ಯೋತಿಗೆ, ಆಕೆಯ ತಾಯಿ ಪುಟ್ಟಮ್ಮ ಕೂಡ ಸಾಥ್ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಸ್ವಾಮಿಗೌಡ ಅವರು ಗೊರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪತ್ನಿ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Previous Articleವ್ಹೀಲಿಂಗ್ ಪಿಡುಗು..
Next Article ಇಸ್ಕಾನ್ ಶ್ರೀ ರಾಜಾಧಿರಾಜಗೋವಿಂದ ಮಂದಿರ ಲೋಕಾರ್ಪಣೆ