ಬೆಂಗಳೂರು,ಜೂ.25- ಸಾಫ್ಟ್ವೇರ್ ಇಂಜಿನಿಯರ್ ವಿಜಯ ಸಿಂಗ್ ಅವರನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಪೊಲೀಸರು ಬಂಧಿಸಿದ್ದಾರೆ. ಭಾವನಾ ರೆಡ್ಡಿ, ಪುಲ್ಲಾರೆಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. ಆಂಧ್ರ ಪ್ರದೇಶದ ಅನಂತಪುರದ ವಿಜಯಸಿಂಗ್ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಭಾವನಾ ರೆಡ್ಡಿ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಪ್ರಿಯತಮೆ ಭಾವನಾ ರೆಡ್ಡಿಯೇ ಕೆಲ ದುಷ್ಕರ್ಮಿಗಳಿಗೆ ವಿಜಯ ಸಿಂಗ್ ಅವರನ್ನು ಅಪಹರಿಸಲು ಸುಪಾರಿ ನೀಡಿದ್ದಳು.
ಅದರಂತೆ ಕಿಡಿಗೇಡಿಗಳು ಕಳೆದ ಜೂ. 16ರಂದು ಪ್ರಿಯತಮೆ ಭಾವನಾ ರೆಡ್ಡಿ ಮೂಲಕ ದೇವನಹಳ್ಳಿಗೆ ಕರೆಸಿಕೊಂಡಿದ್ದಾರೆ. ನಂತರ ಅಲ್ಲಿಂದ ಅಪಹರಿಸಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಬಳಿಯ ರೆಸಾರ್ಟ್ನಲ್ಲಿ ಕೂಡಿಹಾಕಿದ್ದಾರೆ. ಬಳಿಕ ಜೂನ್ 18ರ ವರೆಗೂ ಮೂರು ದಿನಗಳ ಕಾಲ ಚಿತ್ರ ಹಿಂಸೆ ನೀಡಿದ್ದಾರೆ.
ನಂತರ 2 ಲ್ಯಾಪ್ಟಾಪ್, 3 ಮೊಬೈಲ್, 12 ಗ್ರಾಂ ಚಿನ್ನದ ಸರ ಕಸಿದು ಕೊನೆಗೆ 21 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ವಿಜಯಸಿಂಗ್ ಪ್ರಿಯತಮೆ ಸೇರಿ 6 ಮಂದಿ ವಿರುದ್ಧ ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಬೆನ್ನು ಬಹತ್ತಿದ ಪೊಲೀಸರಿಗೆ ಭಾವನಾ ರೆಡ್ಡಿ, ಪುಲ್ಲಾರೆಡ್ಡಿ ಅಡಗಿರುವ ತಾಣ ತಿಳಿದಿದ್ದು, ಈ ಇಬ್ಬರು ಹುಬ್ಬಳ್ಳಿಯ ಖಾಸಗಿ ಹೋಟೆಲ್ವೊಂದರಲ್ಲಿ ಇರುವುದು ಗೊತ್ತಾಗಿದೆ. ಪೊಲೀಸರು ಹುಬ್ಬಳ್ಳಿಗೆ ತೆರಳಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಇನ್ನುಳಿದ ಸುಬ್ರಮಣಿ, ನಾಗೇಶ್ ರೆಡ್ಡಿ, ಸಿದ್ದೇಶ, ಸುಧೀರ್ಗಾಗಿ ಹುಡುಕಾಟ ನಡೆಸಿದ್ದಾರೆ.
Previous ArticlePGಯಲ್ಲಿರುವ ಮಹಿಳೆಯರೇ ಹುಷಾರ್!
Next Article ನಮ್ಮ ಮೆಟ್ರೋ ಕಳಪೆ ಕಾಮಗಾರಿಗೆ ಇವರೇ ಹೊಣೆ