ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನಕ್ಕೆ ಕಾರಣರಾದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇದೀಗ ತಮ್ಮ ಆಪ್ತರೊಂದಿಗೆ ಮತ್ತೊಂದು ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ.
ಬಿಜೆಪಿ ಕಾರ್ಯವೈಖರಿಯಿಂದ ಬೇಸರಗೊಂಡಿರುವ ಎಚ್.ವಿಶ್ವನಾಥ್ ಇತ್ತೀಚೆಗೆ ಬಿಜೆಪಿಯ ಕಟು ಟೀಕಾಕಾರರಾಗಿ ಬದಲಾಗಿದ್ದಾರೆ.ಇದೀಗ ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಆರಂಭಿಸಿದ್ದು, ಸದ್ಯದಲ್ಲೇ ಬಿಜೆಪಿ ತೊರೆಯುವುದಾಗಿ ಹೇಳಿದ್ದಾರೆ.
ಮಂತ್ರಾಲಯಕ್ಕೆ ಭೇಟಿ ನೀಡಿ,ರಾಘವೇಂದ್ರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾವು
ಬಿಜೆಪಿಯ ವಿಧಾನಪರಿಷತ್ ಸದಸ್ಯನಲ್ಲ ಬಹಳ
ಜನರಿಗೆ ಇದು ಗೊತ್ತಿಲ್ಲ. ನಾನು ಸ್ವತಂತ್ರ ಪಕ್ಷಿ.ಪರಿಷತ್ ನಲ್ಲಿ ನಾನು ಸಾಹಿತ್ಯ ಕ್ಷೇತ್ರದ ಪ್ರತಿನಿಧಿ ಬಿಜೆಪಿ ಸದಸ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಪಾಲರು ತಮ್ಮಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪಡೆದ ಬಳಿಕ ನಾಮಕರಣ ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆದ ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಹಳಷ್ಟು ಶ್ರಮಿಸಿದರು ಎಂದು ಆರೋಪಿಸಿದರು.
ತಮ್ಮ ಮೈ- ನರ ನಾಟಕಗಳಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ.ತಾವು ಬಿಜೆಪಿ, ಜೆಡಿಎಸ್ ನಲ್ಲಿದ್ದಾಗಲೂ ಕಾಂಗ್ರೆಸ್ ತತ್ವ ಸಿದ್ದಾಂತ ಬಿಟ್ಟಿರಲಿಲ್ಲ ಎಂದು ತಿಳಿಸಿದರು.
ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತಿದೆ. ರಾಜಕೀಯದಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ ಆದಷ್ಟು ಶೀಘ್ರ ತಾವು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆಂದು ಹೇಳಿದರು.
ಇದೇ ರೀತಿಯಲ್ಲಿ ಬಿಜೆಪಿ ಜೊತೆ ವೈಮನಸ್ಯ ಹೊಂದಿರುವ ಶಾಸಕ ಪ್ರತಾಪಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಕೂಡಾ ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆನ್ನಲಾಗಿದೆ.
Previous Articleಶ್ರೀಮಂತಿಕೆಯ ಉತ್ತುಂಗಕ್ಕೇರಿ ನಷ್ಟದ ಪಾತಾಳ ನೋಡುತ್ತಿರುವ Musk
Next Article 50000 ವರ್ಷಗಳಲ್ಲಿ ಕಾಣಿಸಿಕೊಳ್ಳಲಿರುವ ಹಸಿರು ಧೂಮಕೇತು!