ಫಿಲಿಪೈನ್ಸ್ ಗೆ ಹೋಗುವ ಪ್ರಯಾಣಿಕರು ಈಗ ಆ ದೇಶದ ಹೊರವಲಯದ ಎತ್ತರದ ಪ್ರದೇಶದಲ್ಲಿರುವ ಕೋಳಿ ಆಕಾರದ ವಿಶ್ವದ ಅತಿದೊಡ್ಡ ಕಟ್ಟಡದಲ್ಲಿ ಕೋಣೆಯನ್ನು ಕಾಯ್ದಿರಿಸಬಹುದು.
ಇಲ್ಲ, ನೀವು ಕೋಳಿಗೂಡಿನಲ್ಲಿ ಒಣಹುಲ್ಲಿನ ರಾಶಿಯ ಮೇಲೆ ಮಲಗುವ ಅವಶ್ಯಕತೆಯಿಲ್ಲ.
ಈ ಆರು ಅಂತಸ್ತಿನ ಕಟ್ಟಡವು ಸುಮಾರು 114 ಅಡಿಎತ್ತರದ ಮತ್ತು 15 ಕೊಠಡಿಗಳನ್ನು ಹೊಂದಿರುವ ಹವಾನಿಯಂತ್ರಿತ ಹೋಟೆಲ್ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದೆ. ಇಲ್ಲಿ ಕೋಣೆಗಳಿಗೆ ಕಿಟಕಿಗಳಿಲ್ಲ ಏಕೆಂದರೆ ಕಿಟಕಿಗಳು ಕಟ್ಟಡದ ಮೇಲಿರುವ ಕೋಳಿ ಗರಿ ಆಕಾರಗಳನ್ನು ಹಾಳುಮಾಡುತ್ತವೆ ಎಂದು ವಾದಿಸಲಾಗಿದೆ.
ನೆಗ್ರೋಸ್ ಆಕ್ಸಿಡೆಂಟಲ್ ದ್ವೀಪದಲ್ಲಿರುವ ಕ್ಯಾಂಪುಯೆಸ್ಟೋಹನ್ ಹೈಲ್ಯಾಂಡ್ ರೆಸಾರ್ಟ್ನ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಈ ಹೊಸ ಕಟ್ಟಡ ಕೋಳಿ ಆಕಾರದ ಅತಿದೊಡ್ಡ ಕಟ್ಟಡವೆಂದು ಅಧಿಕೃತವಾಗಿ ಗಿನ್ನಿಸ್ ವಿಶ್ವ ದಾಖಲೆಯ ಪ್ರಶಸ್ತಿ ಪಡೆದಿದೆ.
ಕಟ್ಟಡದ ಹಿಂದಿರುವ ಕ್ರಿಯಾಶೀಲ ವ್ಯಕ್ತಿ ರಿಕಾರ್ಡೊ ಕ್ಯಾನೊ ಗ್ವಾಪೊ ಟಾನ್, ತಾನು ಯಾವಾಗಲೂ “ಈ ಮರ್ತ್ಯ ಜಗತ್ತಿನಲ್ಲಿ ದೊಡ್ಡ ಪರಂಪರೆಯನ್ನು ಸೃಷ್ಟಿಸಲು ಬಯಸುತ್ತೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ