ಬೆಂಗಳೂರು,ಆ.5-ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸ್ಯಾಂಡಲ್ ವುಡ್ ನಟ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ.
ಜಾಂಡೀಸ್ ನಿಂದ ಬಳಲುತ್ತಿದ್ದ 34 ವರ್ಷದ ನಟ ಸಂತೋಷ್ ಬಾಲರಾಜ್ ನನ್ನು ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಕುಮಾರಸ್ವಾಮಿ ಲೇ ಔಟ್ ನ ಸಾಗರ್ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಿಸದೇ ಅವರು ಕೋಮಾಗೆ ಹೋಗಿದ್ದರು. ಸಂತೋಷ್ ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು, ಕುಟುಂಬ ವರ್ಗ ಪ್ರಾರ್ಥಿಸುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಸಾವನಪ್ಪಿದ್ದಾರೆ.
ಅನೇಕಲ್ ಬಾಲರಾಜ್ ದರ್ಶನ್ ಅಭಿನಯದ ಕರಿಯ ಸಿನಿಮಾ ಮಾಡಿದ್ದರು. ಕರಿಯ-2 ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಕೆಂಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರೂ ಆ ಸಿನಿಮಾದಿಂದ ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಕ್ಕಲಿಲ್ಲ.
ನಂತರ ನಟಿಸಿದ ಗಣಪ ಹಾಗೂ ಕರಿಯ 2 ಚಿತ್ರ ತಕ್ಕಮಟ್ಟಕ್ಕೆ ಯಶಸ್ಸು ಕಂಡಿದ್ದವು. ನಂತರದ ದಿನಗಳಲ್ಲಿ ಒಂದಷ್ಟು ಸಿನಿಮಾದಲ್ಲಿ ನಟಿಸಿದರೂ ಯಾವ ಚಿತ್ರ ಕೂಡಾ ಅಷ್ಟರ ಮಟ್ಟಿಗೆ ಕೈ ಹಿಡಿಯಲಿಲ್ಲ. ಸಂತೋಷ್ ಅಭಿನಯದ ಸತ್ಯ ಚಿತ್ರ ಇನ್ನೂ ರಿಲೀಸಾಗಬೇಕಿತ್ತು.
Previous Articleರಾಹುಲ್ ಗಾಂಧಿ ಪ್ರತಿಭಟನೆ ಮುಂದೂಡಿಕೆ !
Next Article ಹುಡುಗಿಯರ ಮಾತು ಕೇಳಿದ ಟೆಕ್ಕಿಗಳ ಗತಿ ನೋಡಿ !