ಬೆಂಗಳೂರು,ಏ.25-
ವಿದೇಶದಿಂದ ಅಕ್ರಮ ಚಿನ್ನ ಸಾಗಾಣೆ ಪ್ರಕರಣದಲ್ಲಿ ಬಂಧಿತ ಡಿಜಿಪಿ ರಾಮಚಂದ್ರರಾವ್ ಮಲಮಗಳು,ನಟಿ ರನ್ಯಾರಾವ್ ಮತ್ತು ಸಂಗಡಿಗರಿಗೆ 1 ವರ್ಷ ಜೈಲು ವಾಸ ಗಟ್ಟಿಯಾಗಿದೆ.
ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು ಜಾರಿ ಮಾಡಿರುವುದರಿಂದ ಅಕೆಯು 1 ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಎದುರಾಗಿದೆ. ರನ್ಯಾರಾವ್ 100 ಕೆಜಿಯಷ್ಟು ಚಿನ್ನವನ್ನು ವಿದೇಶದಿಂದ ಕಳ್ಳ ಸಾಗಾಣೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.ಇದರಿಂದ ರನ್ಯಾರಾವ್, ಮತ್ತು ಅವರ ಆಪ್ತರಾದ ತರುಣ್ ಕೊಂಡಾರಾಜ್ ಹಾಗೂ ಸಾಹಿಲ್ ಜೈನ್ ವಿರುದ್ಧ ಕಾಫಿಪೋಸಾ ಕಾಯಿದೆ ಜಾರಿ ಮಾಡಲಾಗಿದೆ.
ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ.
ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ.
ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ.
ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ನಿರಂತರವಾಗಿ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಜೈಲಿನಿಂದ ಬಂದ ಬಳಿಕ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಸ್ಮಗ್ಲಿಂಗ್‌ನಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ.
ಕಾಫಿಪೋಸಾ ಕಾಯ್ದೆಯನ್ನು ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಜಾರಿ ಮಾಡುತ್ತದೆ.ಈ ಕಾಯ್ದೆಯನ್ನು ಜಾರಿಗೊಳಿಸಿದರೆ ಆರೋಪಿ ಗಳು ಒಂದು ವರ್ಷ ಕಾಲ ಜೈಲಿನಲ್ಲೇ ಇರುವುದು ಕಡ್ಡಾಯವಾಗಿದೆ
Previous Articleಮುತ್ತಪ್ಪ ರೈ ಮಗ ತನಗೆ ತಾನೇ ಗುಂಡು ಹಾರಿಸಿಕೊಂಡನಾ.?
Next Article ಈ ಪಾಪಿಗಾಗಿ ಪೊಲೀಸರ ಹುಡುಕಾಟ


2 ಪ್ರತಿಕ್ರಿಯೆಗಳು
BГґnus de boas-vindas insano: 125% + 250 free spins no Mostbet – https://mostbetpt.pro/ , Mostbet – cassino online com recompensas que fazem a diferenГ§a .
Play like the next spin owes you child support – https://buyazelastinex.com , Every loss was just foreplay for domination .