ಬೆಂಗಳೂರು,ಸೆ.12-
ಮಹಾನಗರ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸಂಚಾರಿ ಪೊಲೀಸರು ಇದೀಗ ಕೃತಕ ಬುದ್ಧಿಮತ್ತೆ(ಎಐ)ಯ ಮೊರೆ ಹೋಗಿದ್ದಾರೆ..
ಸದ್ಯ ಬೆಂಗಳೂರಿನ ಪ್ರಮುಖ ಜಂಕ್ಷನ್ ಗಳಲ್ಲಿ ಅಳವಡಿಸಲಾದ ಸಿಗ್ನಲ್ ಲೈಟ್ ಗಳು ಮಾನವ ಆಧಾರಿತ ನಿರ್ವಹಣಾ ವ್ಯವಸ್ಥೆಯಾಗಿವೆ.ಇದನ್ನು ಆಧುನೀಕರಣಗೊಳಿಸಿ ವಾಹನ ದಟ್ಟಣೆಯ ಆಧಾರದಲ್ಲಿ ಸ್ವಯಂಚಾಲಿತ ವ್ಯವಸ್ಥೆಯಾಗಿಸಲು ತೀರ್ಮಾನಿಸಿರುವ ಸಂಚಾರಿ ಪೊಲೀಸರು ಇದಕ್ಕೆ ಕೃತಕ ಬುದ್ಧಿಮತ್ತೆ ಬಳಸಲು ಮುಂದಾಗಿದ್ದಾರೆ.
ಮೊದಲ ಹಂತದಲ್ಲಿ ನಗರದವಿವಿಧ 41 ಜಂಕ್ಷನ್ಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ
ಈ 41 ಜಂಕ್ಷನ್‌ಗಳಲ್ಲಿ ಎಐ-ಸಕ್ರಿಯಗೊಳಿಸಲಾದ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ಎಟಿಸಿಎಸ್) ಅಳವಡಿಸಲಾಗುತ್ತಿದೆ.
ಈ ಕ್ರಮದಿಂದ ಟ್ರಾಫಿಕ್ ಸಿಗ್ನಲ್‌ಗಳು ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ನಿರ್ವಹಣೆ ಮಾಡಲಾಗುತ್ತದೆ.
ಇದಕ್ಕೆ ಗುರುತಿಸಲಾದ 41 ಜಂಕ್ಷನ್‌ಗಳಲ್ಲಿ, ಏಳು ಹೊಸಸಿಗ್ನಲ್‌ಗಳನ್ನು ಹೊಂದಿದ್ದರೆ,ಈಗಾಗಲೆ ಇಲ್ಲಿರುವ 34 ಹಳೆಯ ಕ್ಯಾಮೆರಾ ಆಧಾರಿತ ಅಡಾಪ್ಟಿವ್ ಸಿಸ್ಟಮ್‌ಗಳಿಂದ ಅಪ್‌ಗ್ರೇಡ್ ಮಾಡಲಾಗುತ್ತಿದೆ.ಈ 41 ಜಂಕ್ಷನ್ ಗಳ ಕಾರ್ಯಕ್ಷಮತೆ ನೋಡಿದ ನಂತರ ಡಿಸೆಂಬರ್ ಅಂತ್ಯದ ವೇಳೆಗೆ, ಬೆಂಗಳೂರಿನಲ್ಲಿ ಸಂಪೂರ್ಣ ಸ್ವಯಂಚಾಲಿತ ಎಐ-ಚಾಲಿತ ಸಿಗ್ನಲ್‌ಗಳನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ.