ಗದಗ: ಮುಖ್ಯಮಂತ್ರಿ, ಸಚಿವರಾಗಲು ಹಣ ರೆಡಿ ಮಾಡಬೇಕು ಎಂಬ ಅರ್ಥದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆ ನೀಡಿದರು. ಜವಾಬ್ದಾರಿ ಇರುವ ಒಂದು ಪಕ್ಷದ ಶಾಸಕರು ಹೇಳಿದ್ದಾರೆ, ಸತ್ಯಾಂಶ ಇರಬೇಕು ಎಂದ ಜಾರಕಿಹೊಳಿ ತಿಳಿಸಿದ್ರು. ಇನ್ನು ಈ ಬಗ್ಗೆ ಬಿಜೆಪಿಯವರು ಸ್ಪಷ್ಟನೆ ನೀಡಬೇಕು. ಈ ಬಗ್ಗೆ ತನಿಖೆ ಆಗಬೇಕು, ಆದ್ರೆ ಸರ್ಕಾರ ಮುಂದಾಗಲ್ಲ, ಅದೇ ಸಮಸ್ಯೆಯಾಗಿದೆ. ಈ ಬಗ್ಗೆ ತನಿಖೆ ಮಾಡೋದು ಸಿಎಂಗೆ ಬಿಟ್ಟ ವಿಚಾರ ಅವ್ರು ತೀರ್ಮಾನ ತೆಗೆದುಕೊಳ್ಳಬೇಕು. ಇದು ಬಿಜೆಪಿಯಿಂದ ಪ್ರಾರಂಭವಾಗಿದೆ. ಯತ್ನಾಳ್ ಹೇಳಿದ್ದಾರೆ ಅಂದ್ರೆ ನಿಜಾಂಶ ಇರುತ್ತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಮೈಸೂರು ಜಿಲ್ಲೆಯ ಕವಲಂದೆಯಲ್ಲಿ ಮಿನಿ ಪಾಕಿಸ್ತಾನ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಘೋಷಣೆ ಕೂಗಿದರೆ ತಪ್ಪಿತಸ್ಥರಿಗೆ ಶಿಕ್ಷಿಸುವ ಅವಕಾಶ ಇದೆ. ಹಿಂದೆಯೂ ಈ ರೀತಿಯ ಉದಾಹರಣೆ ಆಗಿವೆ. ಹುಬ್ಬಳ್ಳಿ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಇನ್ನು ಪಿಎಸ್ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ, ಸಿಬಿಐ ತನಿಖೆಯಾದಲ್ಲಿ ಸ್ಪಷ್ಟತೆ ಬರುತ್ತದೆ.
ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರವಾದಲ್ಲಿ ಸತ್ಯಾಂಶ ಹೊರ ಬರುತ್ತದೆ. ಮಂತ್ರಿಗಳ, ಶಾಸಕರ, ಉನ್ನತ ಅಧಿಕಾರಿಗಳು ಅಕ್ರಮದಲ್ಲಿದ್ದಾರೆ. ಇನ್ಸ್ ಪೆಕ್ಟರ್, ಡಿಎಸ್ಪಿ ಮಟ್ಟದಲ್ಲಿ ತನಿಖೆ ಮಾಡೋದಕ್ಕೆ ಆಗಲ್ಲ. ಹೀಗಾಗಿ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.