ಬೆಂಗಳೂರು,ಆ.8-
ಮತಗಳ್ಳತನವಾಗಿದೆ ಎಂದು ಕರ್ನಾಟಕದಲ್ಲಿ ಪ್ರತಿಭಟನೆಗೆ ಬಂದಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜ್ಯದ ಕೆಲವು ಸಮಸ್ಯೆಗಳನ್ನು ಪಟ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಇವುಗಳಿಗೆ ಉತ್ತರ ನೀಡಿ ರಾಹುಲ್ ಗಾಂಧಿ ಅವರೇ ಎಂದು ಆಗ್ರಹಿಸಿದೆ
ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕಾಂಗ್ರೆಸ್‌ನ ಚುನಾವಣೆಯ ಖರ್ಚಿಗಾಗಿ, ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಹಗರಣವನ್ನು ಜಾರಿ ನಿರ್ದೇಶನಾಲಯ ಬಯಲು ಮಾಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಹೊರತು ಬೇರೆ ಯಾವುದೇ ಕ್ರಮಗಳನ್ನು ನಿಮ್ಮ ಸರ್ಕಾರ ಕೈಗೊಂಡಿಲ್ಲ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಿದ್ದ ನಿಧಿಯನ್ನು ಕಾಂಗ್ರೆಸ್ ತನ್ನ ಪಾರ್ಟಿ ಫಂಡ್ ಗೆ ಬಳಸಿದಕ್ಕಾಗಿ ನೀವು ಅವರ ಕ್ಷಮೆಯಾಚಿಸುವುದಿಲ್ಲವೇ..?
ಮುಡಾ ಹಗರಣ, ಕಾರ್ಮಿಕ ಕಿಟ್ ಹಗರಣ, ವಸತಿ ಹಗರಣ, ಅಬಕಾರಿ ಲೈಸೆನ್ಸ್ ನವೀಕರಣ ಹಗರಣ, ವೈನ್ ವ್ಯಾಪಾರಿಗಳಿಂದ 200 ಕೋಟಿ ಲಂಚಕ್ಕೆ ಬೇಡಿಕೆ ಸೇರಿದಂತೆ, ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದೇನಾ ನೀವು ದ್ವೇಷದ ಅಂಗಡಿಯಲ್ಲಿ ತೆರೆದ ‘ಭ್ರಷ್ಟಾಚಾರದ ಮಾರುಕಟ್ಟೆ’.?
ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ 40 ಸಾವಿರ ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸುವ ಮೂಲಕ, ನಿಮ್ಮ ಸರ್ಕಾರ ಪರಿಶಿಷ್ಟರಿಗೆ ಮಹಾದ್ರೋಹ ಎಸಗಿದೆ. ನೀವು ನಮ್ಮ ಪರಿಶಿಷ್ಟ ಸಮುದಾಯದ ಸಹೋದರ-ಸಹೋದರಿಯರ ಬಳಿ ಯಾವಾಗ ಕ್ಷಮೆಯಾಚಿಸುತ್ತಿರಿ ಮತ್ತು ಅವರ ಹಣವನ್ನು ಯಾವಾಗ ಹಿಂದಿರುಗಿಸುತ್ತೀರಿ ಎಂದು ಹೇಳುವಿರಾ..?
ನಿಮ್ಮ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುತ್ತಾರಂತೆ. ನಿಮ್ಮ ಡಿಸಿಎಂ ಹೇಳಿಕೆಗೆ ನಿಮ್ಮ ಸಹಮತವಿದೆಯೇ..??
ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಬದಲಾಯಿಸಲು ನೀವು ಮಾಡಿದ ಪ್ರಯತ್ನಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಿರಾ..?
ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬರೆ ಎಳೆದ ನೀವು, ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ..?
ಕನ್ನಡ ಓದಲು, ಬರೆಯಲು ಬಾರದ ಮಂತ್ರಿಗೆ ಶಿಕ್ಷಣ ಸಚಿವನ ಪಟ್ಟ ನೀಡಿದ ಪರಿಣಾಮ ಕರ್ನಾಟಕದ ಶಿಕ್ಷಣ ಇಲಾಖೆ ಬೋರಲು ಬಿದ್ದಿದೆ. ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರ ಸಹ ನೀಡಲು ಬೊಕ್ಕಸದಲ್ಲಿ ದುಡ್ಡಿಲ್ಲದಷ್ಟು ಸರ್ಕಾರ ದಿವಾಳಿಯಾಗಿದೆ. ಕರ್ನಾಟಕವನ್ನು ದಿವಾಳಿ ಮಾಡಿರುವ ನೀವು ಈ ಬಗ್ಗೆ ಕನ್ನಡಿಗರ ಕ್ಷಮೆಯಾಚಿಸುತ್ತೀರಾ..?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮಾದಕ ದ್ರವ್ಯ ಮತ್ತು ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ. ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ ಅಲ್-ಖೈದಾ ಉಗ್ರನನ್ನು ಬಂಧಿಸಿದೆ. ಮುಂಬೈ ಪೊಲೀಸರು ಮೈಸೂರಿನಲ್ಲಿ ಮಾದಕ ದ್ರವ್ಯ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇವು ಯಾವುದೂ ಕರ್ನಾಟಕ ಪೊಲೀಸರ ಗಮನಕ್ಕೆ ಬಂದಿಲ್ಲ. ನಿಮ್ಮ ಸರ್ಕಾರದ ಆಂತರಿಕ ಭದ್ರತಾ ಲೋಪ ಮತ್ತು ಗುಪ್ತಚರ ವೈಫಲ್ಯಗಳ ಬಗ್ಗೆ ನೀವು ಕ್ಷಮೆಯಾಚಿಸುವುದಿಲ್ಲವೇ..?
ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಳ ಸಮುದಾಯದ ಮಹಿಳೆಯರ ಮೇಲೆ ಮಾನವಕುಲ ತಲೆತಗ್ಗಿಸುವಂತಹ ಪೈಶಾಚಿಕ ಘಟನೆ ನಡೆದಿವೆ. ಆ ಮಹಿಳೆಯರಿಗೆ ನಿಮ್ಮ ಸರ್ಕಾರದಿಂದ ಇದುವರೆಗೂ ನ್ಯಾಯವು ದೊರೆತಿಲ್ಲ, ಆರೋಪಿಗಳ ಬಂಧನವೂ ಆಗಿಲ್ಲ. ಮಹಿಳೆಯರ ಮೇಲಾದ ಈ ದೌರ್ಜನ್ಯಗಳ ಬಗ್ಗೆ ನೀವು ಮೌನ ಮುರಿಯುವುದು ಯಾವಾಗ..?
ಭಯೋತ್ಪಾದಕ ಗಲಭೆಕೋರರಿಗೆ ಬೆಂಬಲ ನೀಡಿದ ನೀವು ನಾಡಿನ ಜನರ ಕ್ಷಮೆಯಾಚಿಸುವುದಿಲ್ಲವೇ..?
ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟಾದರೂ ನಿಮ್ಮ ಸಚಿವರು ಮಾತ್ರ ನಾಟ್ ರೀಚೆಬಲ್..!! ಈ ಬಗ್ಗೆ ನೀವು ನಾಡಿನ ಅನ್ನದಾತರ ಕ್ಷಮೆಯಾಚಿಸುವುದಿಲ್ಲವೇ..?
ಡಿಸಿಎಂ ಶಿವಕುಮಾರ್ ಅವರಿಗೆ ಬೆಂಗಳೂರಿನ ಅಭಿವೃದ್ಧಿಗಿಂತ ತಮ್ಮ ಮುಖ್ಯಮಂತ್ರಿಯ ಕುರ್ಚಿ ಮೇಲೆ ಹೆಚ್ಚು ಗಮನ. ಬೆಂಗಳೂರನ್ನು ನರಕವನ್ನಾಗಿಸಿದಕ್ಕೆ ಬೆಂಗಳೂರಿಗರ ಬಳಿ ನೀವು ಕ್ಷಮೆಯಾಚಿಸುವುದಿಲ್ಲವೇ..?
ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಸಮಾರಂಭ ಆಯೋಜಿಸಿದ್ದಕ್ಕೆ ಹಾಗೂ ಕಾಂಗ್ರೆಸ್ಸಿಗರ ಫೋಟೋ ಹುಚ್ಚಿಗೆ ಅಮಾಯಕ 11 ಜನ ಬಲಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಈ ಕೊಲೆಗೆ ನೀವು ಕನ್ನಡಿಗರ ಬಳಿ ಕ್ಷಮೆಯಾಚಿಸುವುದಿಲ್ಲವೇ..?
ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬೆಲೆಯೇರಿಕೆ ಬರೆ ಎಳೆದ ನೀವು ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ..? ಎಂಬ ಹದಿಮೂರು ಪ್ರಶ್ನೆಗಳನ್ನು ಕೇಳಿದೆ.
ರಾಹುಲ್ ಗಾಂಧಿ ಗೆ ಬಿಜೆಪಿ ಹಾಕಿದ ಪ್ರಶ್ನೆಗಳು ಯಾವುವು ಗೊತ್ತಾ ?
Previous Articleಡೆತ್ ನೋಟ್ ನಲ್ಲಿ ಸಂಸದ ಡಾ.ಸುಧಾಕರ್ ಹೆಸರು !
Next Article ಮತಗಳ್ಳತನಕ್ಕೆ ಕುಮಾರಸ್ವಾಮಿ ಪರಿಹಾರ.


10 ಪ್ರತಿಕ್ರಿಯೆಗಳು
?Celebremos a cada devoto del destino !
Jugar en casino sin registro permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como casinos sin kyc. Gracias a esta flexibilidad, cada sesiГіn se vuelve mГЎs cГіmoda al usar servicios como casino crypto sin kyc.
Jugar en casino crypto sin kyc permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como casino sin verificaciГіn. Gracias a esta flexibilidad, cada sesiГіn se vuelve mГЎs cГіmoda al usar servicios como crypto casino no kyc.
Casino sin KYC, diversiГіn sin lГmites – п»їhttps://casinoretirosinverificacion.com/
?Que la suerte te beneficie con que experimentes fantasticos lanzamientos prosperos !
legal canadian pharmacy online
canadian pharmacy online canada
canadian pharmacy online review
canadian pharmacies that ship to usa
non prescription drugs
online prescriptions
canadian pharmacy reviews
most reliable online pharmacies
Cheers to every destiny traveler !
ОџО№ ОјОµОіО±О»ПЌП„ОµПЃОµП‚ ПѓП„ОїО№П‡О·ОјО±П„О№ОєОП‚ ОµП„О±О№ПЃОЇОµП‚ ПѓП„ОїОЅ ОєПЊПѓОјОї ПЂПЃОїПѓПЂО±ОёОїПЌОЅ ОЅО± О±ОЅО±ПЂП„ПЌОѕОїП…ОЅ ПѓП‡ОПѓОµО№П‚ ОµОјПЂО№ПѓП„ОїПѓПЌОЅО·П‚ ОјОµ П„ОїП…П‚ ПЂОµО»О¬П„ОµП‚ П„ОїП…П‚. ОњОПѓП‰ ОґО№О±П†О¬ОЅОµО№О±П‚ ОєО±О№ О±ОЅОїО№ОєП„О®П‚ ОµПЂО№ОєОїО№ОЅП‰ОЅОЇО±П‚, ОїО№ ОµП„О±О№ПЃОµОЇОµП‚ ОїО№ОєОїОґОїОјОїПЌОЅ ПѓП‡ОПѓОµО№П‚ ОјО±ОєПЃОїП‡ПЃПЊОЅО№О±П‚ О±ОѕОЇО±П‚. . Оџ ПѓП„ПЊП‡ОїП‚ П„ОїП…П‚ ОµОЇОЅО±О№ ОЅО± ОµОѕО±ПѓП†О±О»ОЇПѓОїП…ОЅ П„О·ОЅ О№ОєО±ОЅОїПЂОїОЇО·ПѓО· ОєО±О№ П„О·ОЅ О±ОЅО±ОіОЅП‰ПѓО№ОјПЊП„О·П„О± ПѓП„О·ОЅ О±ОіОїПЃО¬.
ОџО№ ОјОµОіО±О»П…П„ОµПЃОµП‚ ПѓП„ОїО№П‡О·ОјО±П„О№ОєОµП‚ ОµП„О±О№ПЃО№ОµП‚ ПѓП„ОїОЅ ОєОїПѓОјОї ОµПЂОµОЅОґПЌОїП…ОЅ ПѓОµ ОµОєПЂО±ОЇОґОµП…ПѓО· ОєО±О№ О±ОЅО¬ПЂП„П…ОѕО· П„ОїП… ПЂПЃОїПѓП‰ПЂО№ОєОїПЌ П„ОїП…П‚. Оџ ОµОєПЂО±О№ОґОµП…П„О№ОєПЊП‚ О±П…П„ПЊП‚ П„ОїОјОО±П‚ П„ОїП…П‚ ОµПЂО№П„ПЃОПЂОµО№ ОЅО± ПЂПЃОїПѓП†ОПЃОїП…ОЅ ОµОѕО±О№ПЃОµП„О№ОєО® ОµОѕП…ПЂО·ПЃОП„О·ПѓО· ПЂОµО»О±П„ПЋОЅ. О€ОЅО±П‚ ОєО±О»О¬ ОµОєПЂО±О№ОґОµП…ОјООЅОїП‚ ПЂПЃОїПѓП‰ПЂО№ОєПЊ ОјПЂОїПЃОµОЇ ОЅО± О»ПЌПѓОµО№ ПЂПЃОїОІО»О®ОјО±П„О± ОєО±О№ ОЅО± ОµОЅО№ПѓП‡ПЌПѓОµО№ П„О·ОЅ ОµОјПЂОµО№ПЃОЇО± П„П‰ОЅ П‡ПЃО·ПѓП„ПЋОЅ.
The Rise of the Largest Betting Companies in the World – п»їhttps://onlinecasinoforeign.com/the-largest-betting-companies-in-the-world/
May fortune walk with you as you have at hand the pleasure of remarkable prizes !