ಪುನೀತ್‍ರಾಜ್‍ಕುಮಾರ್ ಚಿತ್ರಗಳು ಮತ್ತು ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿರುವ ಪ್ರತಿಷ್ಟಿತ ಸಂಸ್ಥೆ ಹೊಂಬಾಳೆ ಫಿಲಿಂಸ್ ಈಗ ಕಾಂತಾರ ಸಿನಿಮಾಕ್ಕೆ ಬಂಡವಾಳ ಹೂಡಿದೆ. ನಾಯಕ ಮತ್ತು ನಿರ್ದೇಶಕ ರಿಷಬ್‍ಶೆಟ್ಟಿ ಮಾತನಾಡಿ ಕರಾವಳಿ ಭಾಗದ ಸಾಂಸ್ಕ್ರತಿಕ ವೈಭವವೇ ಕಂಬಳ. ಈ ಕಂಬಳದಲ್ಲಿ ಜಾತ್ಯಾತೀತ ಸಂಭ್ರಮವಿದೆ. ಅದರ ಸೊಗಸು, ಸೊಗಡು ಪರಿಚಯಿಸುವುದರಲ್ಲಿ ತೃಪ್ತಿ, ಆನಂದ ಸಿಕ್ಕಿದೆ. ಇಲ್ಲಿ ಶಾರೀರತ್ವ ಮತ್ತು ಶೂರತ್ವ ಇದ್ದರೂ ಸೇಡು, ಕಿಚ್ಚು ಯಾರಲ್ಲೂ ಇರುವುದಿಲ್ಲ. ಅಂಥದ್ದೊಂದು ಸುಂದರ, ಅಷ್ಟೇ ಮಧುರ ಅನುಭವ ಕಂಬಳಕ್ಕಿದೆ. ಇಂತಹ ಕ್ರೀಡೆ ಉಳಿಯುವುದು ಅಲ್ಲದೆ ಕಾಡುತ್ತದೆ. ಊರ ಮೇಲಿನ ಅಭಿಮಾನ, ಹಾಗೂ ತನ್ನಲಾದ ಸಂಭ್ರಮದಿಂದ ಚಿತ್ರವಾಗಿದೆ. ಕುಂದಾಪುರಕ್ಕೆ ಅಂಟಿಕೊಂಡ ಕಿರಾಡಿಯ ಹತ್ತು ಎಕರೆ ಪ್ರದೇಶದಲ್ಲಿ ಸೆಟ್ ಹಾಕಲಾಗಿತ್ತು.
ಕಥೆ ಸಿದ್ದ ಮಾಡಿಕೊಂಡ ನಂತರ, ಹೊಂಬಾಳೆ ಸಂಸ್ಥೆಗೆ ಕಥೆ ಹೇಳಲು ಬರಬಹುದೇ ಎಂದು ಕೇಳಿದಾಗ, ಆಯ್ತು ಮೊಬೈಲ್‍ದಲ್ಲೆ ಹೇಳಿ ಎನ್ನುವ ಉತ್ತರ ಬಂತು. ಕಥೆಯನ್ನು ಹೇಳಲು ಶುರು ಮಾಡಿದೆ. ಯಾಕೋ ಆ ದಿನ ಯಾವುದೇ ಆತಂಕ ತನ್ನಲ್ಲೂ ಇರಲಿಲ್ಲ. ನಂತರ ಆ ಕಡೆಯಿಂದ ಶೂಟಿಂಗ್ ಯಾವಾಗ ಶುರು ಮಾಡುತ್ತಿರಿ ಎನ್ನುವ ಉತ್ತೇಜನ ಕ್ಷಣದಲ್ಲಿ ಬಂತು. ಯಾವುದೇ ತರಹದ ನಿಭಂದನೆ ಹಾಕಲಿಲ್ಲ. ಒಂದು ನಂಬುಗೆ ಅಂತ ಬಂದ ಮೇಲೆ ಯಾವ ರೀತಿ ಉತ್ತೇಜನ ಸಿಗುತ್ತದೆ ಎಂಬುದಕ್ಕೆ ಉದಾಹರಣೆ ಹೊಂಬಾಳೆ ಸಂಸ್ಥೆಯೆ ನಿರ್ದೇಶನವಾಗಿದೆ. ಅದಕ್ಕಾಗಿ ಇಂತಹ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಹೋಗಿದೆ ಎಂದು ಚಿತ್ರೀಕರಣದ ಅನುಭವಗಳನ್ನು ತೆರೆದಿಟ್ಟರು. ರಾಜಕೀಯ ಪುಡಾರಿಯಾಗಿ ಪ್ರಮೋದ್‍ಶೆಟ್ಟಿ, ನಾಯಕಿ ಸಪ್ತಮಿಗೌಡ ಮತ್ತು ಊರ ಧಣಿಯಾಗಿ ಅಚ್ಯುತಕುಮಾರ್ ಇವರೆಲ್ಲರೂ ಪಾತ್ರದ ಪರಿಚಯ ಮಾಡಿಕೊಂಡರು. ಸಿನಿಮಾದ ಕೆಲವು ಅಂಶಗಳನ್ನು ಟ್ರೇಲರ್‍ದಲ್ಲಿ ತೋರಿಸಿದ್ದಾರೆ ಹೊರತು ಕಥೆಯ ಹಿಂಟ್ ಬಿಟ್ಟುಕೊಟ್ಟಿರುವುದಿಲ್ಲ. ಅಂದಹಾಗೆ ಸಿನಿಮಾವು ಸೆಪ್ಟಂಬರ್ 30ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ
Previous Articleಗೊಬ್ಬರ ಆಗಲಿದೆ ದುಬಾರಿ
Next Article ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಮಲ್ಲಿಕಾರ್ಜುನ ಖರ್ಗೆ!