ಯಾವುದೇ ಪ್ರದೇಶದ ಪ್ರಗತಿಯ ಪ್ರತೀಕ ಈ ಇಲಾಖೆ.ಅದರಲ್ಲೂ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುವ ಇಂಧನ ಇಲಾಖೆ ಎಂದರೆ ವಿದ್ಯುತ್ ಇಲಾಖೆ ಆ ರಾಜ್ಯದ ಕಣ್ಣು ಎಂದರೆ ತಪ್ಪಾಗಲಾರದು.
ಜನ ಸಾಮಾನ್ಯರ ಪ್ರತಿನಿತ್ಯದ ಅಗತ್ಯದಿಂದ ಹಿಡಿದು ಸಮಾಜದ ಎಲ್ಲಾ ಹಂತದಲ್ಲೂ ವಿದ್ಯುತ್ ಎನ್ನುವುದು ಅತ್ಯಂತ ಅನಿವಾರ್ಯ ವಾಗಿದೆ.
ಹೀಗಾಗಿ ರಾಜ್ಯ ಸರ್ಕಾರಗಳಿಗೆ ಈ ಇಲಾಖೆ ಅತ್ಯಂತ ಮಹತ್ವದ ಇಲಾಖೆಯಾಗಿದೆ.ವಿದ್ಯುತ್ ಸ್ವಾವಲಂಬನೆ ಎಲ್ಲಾ ಸರ್ಕಾರಗಳ ಆದ್ಯತೆ ಸೇವಾ ವಲಯದಿಂದ ಹಿಡಿದು ಉತ್ಪಾದನಾವಲಯದವರೆಗೆ ಅತ್ಯಂತ ಅಗತ್ಯವಾದ ಈ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸಿದರೆ ಆ ರಾಜ್ಯದ ಪ್ರಗತಿ ತನ್ನಿಂತಾನೆ ನಡೆಯಲಿದೆ ಎನ್ನುವುದು ವಾಸ್ತವ ಸಂಗತಿ.
ಕರ್ನಾಟಕ ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸಾಂಪ್ರದಾಯಿಕವಲ್ಲದ ಮೂಲಗಳಿಂದ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿದ್ದಂತೆ ಕರ್ನಾಟಕ ವಿದ್ಯುತ್ ಸ್ವಾವಲಂಬಿ ರಾಜ್ಯವಾಯಿತು.
ಇದೀಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರ,ರಾಜ್ಯದ ಜನತೆಗೆ ಇನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಿದೆ.
ಸರ್ಕಾರದ ಈ ಉಚಿತ ಕೊಡುಗೆಯ ಬಗ್ಗೆ ಹಲವಾರು ಅಪಸ್ವರ ಕೇಳಿಬರುತ್ತಿದೆ.ಈ ಯೋಜನೆಯಿಂದ ವಿದ್ಯುತ್ ನಿಗಮ,ವಿದ್ಯುತ್ ವಿತರಣಾ ಸಂಸ್ಥೆಗಳು ದಿವಾಳಿಯಾಗಲಿವೆ,ಇಂಧನ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂಬೆಲ್ಲಾ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.
ಈ ಆರೋಪ,ವ್ಯಾಖ್ಯಾನಗಳು ಮೇಲ್ನೋಟಕ್ಕೆ ಸರಿ ಎಂಬಂತೆ ಕಾಣುತ್ತೇವೆ.ಆದರೆ ವಾಸ್ತವ ಬೇರೇಯೆ ಇದೆ.ಉಚಿತವಾಗಿ ವಿದ್ಯುತ್ ಪಡೆಯುವ ಕುಟುಂಬಗಳು ಆರ್ಥಿಕವಾಗಿ ಒಂದಷ್ಟು ಪ್ರಯೋಜನ ಪಡೆಯಲಿವೆ.ವಿದ್ಯುತ್ ಬಳಕೆಗೆ ಶುಲ್ಕದ ರೀತಿಯಲ್ಲಿ ನೀಡುವ ಹಣವನ್ನು ಅವರು ಬೇರೆ ವಲಯದಲ್ಲಿ ಖರ್ಚು ಮಾಡಬಹುದು ಇಲ್ಲವೇ ಉಳಿತಾಯ ಮಾಡಬಹುದಾಗಿದೆ
ಪ್ರತಿ ಕುಟುಂಬಕ್ಕೆ ಇನ್ನೂರು ಯೂನಿಟ್ ಅತ್ಯಂತ ದೊಡ್ಡ ಕೊಡುಗೆ. ಇಷ್ಟು ಪ್ರಮಾಣದ ವಿದ್ಯುತ್ ಬಳಸಿ ಅವರು ಅಡುಗೆ ತಯಾರಿ ಸೇರಿದಂತೆ ಕೆಲವು ಅಗತ್ಯಗಳಿಗೆ ಬಳಸುತ್ತಾರೆ.
ರಾಜ್ಯದಲ್ಲಿ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಗಿರಿಜನ ನಿವಾಸಿಗಳು ಸೇರಿದಂತೆ ಹಲವರಿಗೆ ಭಾಗ್ಯ ಜ್ಯೋತಿ, ಕುಟಿರ ಜ್ಯೋತಿ ಹೆಸರಿನಲ್ಲಿ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತದೆ. ಈ ಗ್ರಾಹಕರ ಜೊತೆಗೆ 200 ಯೂನಿಟ್ ಬಳಸುವ ಕೆಲವು ಗ್ರಾಹಕರು ಸೇರ್ಪಡೆಯಾಗಲಿದ್ದಾರೆ ಇದು ರಾಜ್ಯದ ಬೊಕ್ಕಸಕ್ಕೆ ಅಂತಹ ಹೇಳಿಕೊಳ್ಳುವ ಹೊರೆ ಏನೂ ಆಗುವುದಿಲ್ಲ.
ಇದಕ್ಕಿಂತ ಪ್ರಮುಖವಾದ ಸಂಗತಿ ಎಂದರೆ ಗೃಹ ಬಳಕೆ ವಿದ್ಯುತ್ ಗ್ರಾಹಕರು ತಮ್ಮ ಬಳಕೆಯ ಮೇಲೆ ನಿಯಂತ್ರಣ ವಿಧಿಸಿಕೊಳ್ಳಲಿದ್ದಾರೆ ಈ ಮೂಲಕ ತಮ್ಮ ಬಳಕೆ ಇನ್ನೂರು ಯೂನಿಟ್ ಗಳಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಲಿದ್ದಾರೆ ಹೀಗಾಗಿ ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಹೆಚ್ಚಿನ ವಿದ್ಯುತ್ ಉಳಿತಾಯವಾಗಲಿದೆ. ಅದನ್ನು ಕೈಗಾರಿಕೆ ಸೇರಿದಂತೆ ಇತರ ವಲಯಗಳಿಗೆ ನೀಡುವ ಮೂಲಕ ಹೆಚ್ಚಿನ ಲಾಭಗಳಿಸಬಹುದಾಗಿದೆ ಸದ್ಯ ಗೃಹ ಬಳಕೆ ವಿದ್ಯುತ್ ಗೆ ಕಡಿಮೆ ಶುಲ್ಕ ವಿಧಿಸಲಾಗುತ್ತಿದೆ ಹೀಗಾಗಿ ಉಳಿತಾಯವಾಗಲಿ ವಿದ್ಯುತ್ತನ್ನು ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಹೆಚ್ಚಿನ ಶುಲ್ಕ ವಿವರಿಸಿ ನೀಡಬಹುದು ಜೊತೆಗೆ ಅಗತ್ಯವಿರುವ ರಾಜ್ಯಗಳಿಗೆ ಮಾರಾಟ ಮಾಡಬಹುದಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಬಳಕೆಗೆ ಹೆಚ್ಚಿನ ವಿದ್ಯುತ್ ನೀಡುವುದರಿಂದ ಉತ್ಪಾದನಾ ವಲಯದಲ್ಲಿ ದೊಡ್ಡ ಪ್ರಮಾಣದ ಪ್ರಗತಿ ಸಾಧ್ಯವಾಗಲಿದೆ ಈ ಮೂಲಕ ರಫ್ತು ಆಧಾರಿತ ಚಟುವಟಿಕೆಗಳು ಹೆಚ್ಚಳವಾಗಲಿವೆ ಒಟ್ಟಾರೆಯಾಗಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಳವಾಗಿ ಅತ್ಯಧಿಕ ಪ್ರಮಾಣದ ತೆರಿಗೆ ಸಂಗ್ರಹವಾಗಲಿದೆ ಇದರಿಂದ ರಾಜ್ಯದ ಖಜಾನೆ ಬಲಗೊಳ್ಳಲಿದೆ
ಹೇಳಿ-ಕೇಳಿ ವಿದ್ಯುತ್ ಸಂಗ್ರಹಿಸಬಹುದಾದ ಉತ್ಪಾದನೆಯಲ್ಲ ಕರ್ನಾಟಕದಲ್ಲಿ ಇದೀಗ ಸಾಂಪ್ರದಾಯಿಕ ಮೂಲಗಳಿಗಿಂತ ಅಸಂಪ್ರದಾಯಿಕ ಮೂಲಗಳಾದ ಸೋಲಾರ್, ಪವನ ಮತ್ತು ತ್ಯಾಜ್ಯದಿಂದ ಹೆಚ್ಚಿನ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಇತರ ಬೆಲೆ ಅತ್ಯಂತ ಕಡಿಮೆ ಇದೆ ಇದನ್ನು ಸಂಪೂರ್ಣವಾಗಿ ವಿನಿಯೋಗಿಸಬಹುದಾಗಿದೆ.
ಸರ್ಕಾರ ನೀಡುವ ಉಚಿತ ವಿದ್ಯುತ್ ನಿಂದಾಗಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಕಳ್ಳತನ ತಪ್ಪಲಿದೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗೃಹಬಳಕೆ ಹೆಸರಿನಲ್ಲಿ ವಿದ್ಯುತ್ ಕಳ್ಳತನ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ಬಂದಲ್ಲಿ ಈ ಕಳ್ಳತನಕ್ಕೆ ಕಡಿವಾಣ ಬೀಳಲಿದೆ.
ಅನಿವಾರ್ಯ ಕಾರಣಗಳಿಂದಾಗಿ ಈ ಹಿಂದಿನ ಸರ್ಕಾರಗಳು ಉಷ್ಣ ವಿದ್ಯುತ್ ತಯಾರಿಕಾ ಕಂಪನಿಗಳ ಜೊತೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿದ್ದು ದುಬಾರಿ ದರ ನೀಡುತ್ತಿವೆ ಈಗ ಜನಸಾಮಾನ್ಯರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿ ಈ ವಿದ್ಯುತ್ ಖರೀದಿ ಒಪ್ಪಂದಗಳನ್ನು ರದ್ದು ಪಡಿಸಬಹುದಾಗಿದೆ ಈ ರೀತಿ ಮಾಡಿದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಉಳಿತಾಯ ಮಾಡಬಹುದು.
ಅ ಸಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಹೊತ್ತು ನೀಡುವ ಮೂಲಕ ಜಲ ವಿದ್ಯುತ್ ಮತ್ತು ಶಾಖೋತ್ಪನ್ನ ವಿದ್ಯುತ್ ಘಟಕಗಳ ಮೇಲಿನ ಅವಲಂಬನೆ ತಪ್ಪಿಸಬಹುದಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿದೆ ಈಗ ಅದಕ್ಕೆ ಮರು ಜೀವ ನೀಡುವ ಮೂಲಕ ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರಿಗೆ ನೆರವು ಕಲ್ಪಿಸಬಹುದಾಗಿದೆ.
ಈ ಎಲ್ಲಾ ಉಪಕ್ರಮಗಳ ಮೂಲಕ ಇಂಧನ ಇಲಾಖೆ ಮತ್ತಷ್ಟು ಬಲಯುತವಾಗುವಂತೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ರಾಜ್ಯದ ಪ್ರಗತಿಯ ಮೇಲಾಗಲಿದೆ.