ಕರ್ನಾಟಕ : ಪೊಲೀಸ್ ಸಬ್‌ಇನ್ಸಪೆಕ್ಟರ್ ನೇಮಕಾತಿಯ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನ ಪ್ರಕಾರ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಇದನ್ನು ಸಿಐಡಿಗೆ ವಹಿಸಿದ್ದೇವೆ. ತನಿಖಾ ತಂಡದವರು ಕೆಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ತಪ್ಪಿತಸ್ಥರು ಯಾರೇ ಇರಲಿ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ ಎಂದು ಹೇಳಿದರು.
ಹಿಂದೆ ನಡೆದಿರುವ ನೇಮಕಾತಿ ಹಾಗು ಕಳೆದ ಫೆಬ್ರವರಿಯಲ್ಲಿ 402 ಪಿಎಸ್‍ಐ ನೇಮಕಾತಿಯ ಪರೀಕ್ಷೆಯಲ್ಲೂ ಅಕ್ರಮ ಎಸಗಲು ಇಬ್ಬರು ನಡೆಸಿರುವ ಆಡಿಯೋ ಸಂಭಾಷಣೆ ಕುರಿತು ತನಿಖೆ ನಡೆಸಲಿದ್ದೇವೆ. ಆ ಪಕ್ಷ, ಈ ಪಕ್ಷ
ಯಾವುದನ್ನೂ ನೋಡದೇ ತಪ್ಪಿತಸ್ಥರು ಯಾರೇ ಇರಲಿ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.