ಲಖನೌ:
ವೈದ್ಯೋ ನಾರಾಯಣೋ ಹರಿ: ಎಂಬ ನಾಣ್ನುಡಿ ವೈದ್ಯರು ಮತ್ತು ವೈದ್ಯಕೀಯ ವೃತ್ತಿಯ ಶ್ರೇಷ್ಠತೆಯನ್ನು ಸಾರುತ್ತದೆ. ವೈದ್ಯರನ್ನು ನಮ್ಮ ನಾಡಿನಲ್ಲಿ ದೇವರೆಂದು ಗೌರವಿಸುತ್ತಾರೆ ಆದರೆ ಇಲ್ಲೊಬ್ಬ ವೈದ್ಯ ತನ್ನ ವೃತ್ತಿಯ ಶ್ರೇಷ್ಠತೆಯನ್ನು ಮರೆತು ವರ್ತಿಸುವ ಮೂಲಕ ವ್ಯಕ್ತಿ ಒಬ್ಬರ ಸಾವಿಗೆ ಕಾರಣವಾಗಿ ಅವರ ಕುಟುಂಬ ಸದಸ್ಯರ ಆಕ್ರೋಶ ಎದುರಿಸುವ ಜೊತೆಗೆ ಸಾಮಾಜಿಕ ಜಾಲತಾಣಗಳ ಆಹಾರವಾಗಿದ್ದಾನೆ
ಉತ್ತರ ಪ್ರದೇಶದ ಮಹಾರಾಜ ತೇಜ್ ಸಿಂಗ್ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆಕ್ರೋಶಕ್ಕೆ ಕಾರಣ ಏನು ಎಂದರೆ
ಪ್ರವೇಶ್ ಕುಮಾರಿ ಎನ್ನುವ ಮಹಿಳೆ ತಮಗೆ ತೀವ್ರ ಎದೆನೋವು ಆಗುತ್ತಿದೆ ಎಂದು ಮಗನಿಗೆ ಹೇಳಿದ್ದಾರೆ. ತಕ್ಷಣವೇ ಅವರ ಮಗ ಗುರುಶರಣ್ ಸಿಂಗ್ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗೆ ತಮ್ಮ ತಾಯಿಗೆ ಆಗುತ್ತಿರುವ ನೋವಿನ ಕುರಿತು ಮಾಹಿತಿ ನೀಡಿದ್ದಾರೆ ಈ ಮಾಹಿತಿ ಕೇಳಬೇಕಾದ ಆಸ್ಪತ್ರೆಯ ವೈದ್ಯಡಾ. ಆದರ್ಶ್ ಸೆಂಗರ್ ಎನ್ನುವ ಡಾಕ್ಟರ್ ಕರ್ತವ್ಯದಲ್ಲಿದ್ದರು.
ಗುರು ಶರಣ ಸಿಂಗ್ ಎದೆ ನೋವಿನಿಂದ ಬಳಲುತ್ತಿದ್ದ ತಮ್ಮ ತಾಯಿಯನ್ನು ಬೆಡ್‌ನಲ್ಲಿ ಮಲಗಿಸಿ ವೈದ್ಯರಿಗೆ ಪ್ರಾರ್ಥನೆ ಮಾಡಿದ್ದಾರೆ.ಈ ವೇಳೆ ಡಾಕ್ಟರ್ ಆದರ್ಶ್ ಅಲ್ಲೇ ಕೂತಿದ್ದು, ರೋಗಿಯನ್ನು ಪರೀಕ್ಷೆ ಮಾಡುವ ಬದಲಿಗೆ ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ರೀಲ್ಸ್ ನೋಡುತ್ತಿದ್ದರು. ಹೀಗಾಗಿ ರೋಗಿಯನ್ನು ನರ್ಸ್ ಹಾಗೂ ಇತರೆ ಸಿಬ್ಬಂದಿಗಳು ಪರೀಕ್ಷೆ ಮಾಡಲು ಶುರು ಮಾಡಿದ್ದಾರೆ.
ಎಷ್ಟು ಹೊತ್ತಾದರೂ ಅಲ್ಲಿ ಕುಳಿತಿದ್ದ ವೈದ್ಯ ಬೆಡ್ ಮೇಲೆ ಮಲಗಿದ್ದ ಮಹಿಳೆಯನ್ನು ಪರೀಕ್ಷಿಸಲು ಬರಲೇ ಇಲ್ಲ ಇದನ್ನು ಕಂಡ ಆ ಮಹಿಳೆಯ ಮಗ ಗುರು ಶರಣ ಸಿಂಗ್ ಆತನ ತಾಯಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು
ಇದರಿಂದ ಕೆರಳಿದ ಆತ ರೀಲ್ಸ್ ನೋಡುತ್ತಾ ಕುಳಿತಿದ್ದ ವೈದ್ಯನ ಕೆನ್ನೆಗೆ ಬಾರಿಸಿದ್ದಾನೆ ಇದಾದ ನಂತರ ಆಸ್ಪತ್ರೆಯ ಸಿಬ್ಬಂದಿ ಕೂಡ ಆತನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಬಳಿಕ ಮೃತ ಮಹಿಳೆಯ ಕುಟುಂಬ ಸದಸ್ಯರು ಕೂಡ ಆಸ್ಪತ್ರೆಗೆ ಧಾವಿಸಿ ಗದ್ದಲ ಎಬ್ಬಿಸಿದ್ದಾರೆ ಇದರಿಂದ ಆಸ್ಪತ್ರೆಯಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಕಂಡ ಮುಖ್ಯ ವೈದ್ಯಕೀಯ ಅಧೀಕ್ಷಕ ಮದನ್ ಲಾಲ್ ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಇಡೀ ಘಟನಾವಳಿ ಆಸ್ಪತ್ರೆಯ ಸಿಸಿ ಕ್ಯಾಮೆರಾ ಗಳಲ್ಲಿ ದಾಖಲಾಗಿದ್ದು ಅವುಗಳು ಜಾಲತಾಣಗಳ ಮೂಲಕ ಹರಿದಾಡುತ್ತಿವೆ. ವೈದ್ಯನ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ
ಘಟನೆಯ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
Previous Articleಊಟ ಮಾಡುವಾಗ ಈ ವಿಷಯಗಳನ್ನು ಗಮನದಲ್ಲಿಡಿ
Next Article ಬಿ.ಶ್ರೀರಾಮುಲು ಕಾಂಗ್ರೆಸ್ ಸೇರೋದು ಗ್ಯಾರಂಟಿ