ತಿರುಪತಿ.
ವೈಕುಂಠ ಏಕಾದಶಿ ಎಂದು ತೆರೆಯಲಾಗುವ ವೈಕುಂಠ ದ್ವಾರದ ಮೂಲಕ ಪ್ರವೇಶ ಪಡೆದು ವೆಂಕಟರಮಣನನ್ನು ಆರಾಧಿಸಿದರೆ ಮೋಕ್ಷ ಅಥವಾ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವುದು ಆಸ್ತಿಕರ ಬಲವಾದ ನಂಬಿಕೆ.
ಹೀಗಾಗಿ ಪ್ರತಿ ವರ್ಷ ವೈಕುಂಠ ಏಕಾದಶಿ ಎಂದು ಕಲಿಯುಗದ ಪ್ರತ್ಯಕ್ಷ ದೈವ ಎಂದು ಪರಿಗಣಿಸಲ್ಪಟ್ಟಿರುವ ತಿರುಪತಿಯ ತಿಮ್ಮಪ್ಪನನ್ನು ದರ್ಶಿಸಲು ಲಕ್ಷಾಂತರ ಮಂದಿ ತಿರುಮಲಕ್ಕೆ ಭೇಟಿ ನೀಡುತ್ತಾರೆ.
ಈ ರೀತಿಯಾಗಿ ಏಳು ಬೆಟ್ಟದ ಒಡೆಯ ವೆಂಕಟೇಶ್ವರನ ದರ್ಶನಕ್ಕೆ ಬರುವ ಎಲ್ಲರಿಗೂ ಸುಲಭ ದರ್ಶನ ಸಾಧ್ಯವಾಗಲಿ ಎಂದು ತಿರುಪತಿ ತಿರುಮಲ ದೇವಾಲಯ ಟ್ರಸ್ಟ್ ವಿಶೇಷ ವ್ಯವಸ್ಥೆಯೊಂದನ್ನು ಮಾಡಿತ್ತು. ಒಂದು ವಾರಗಳ ಕಾಲ ವೈಕುಂಠ ದ್ವಾರದ ಬಾಗಿಲು ತೆರೆದಿಡಲು ತೀರ್ಮಾನಿಸಿದ ಆಡಳಿತ ಮಂಡಳಿ ದರ್ಶನಕ್ಕೆ ಬರುವ ಭಕ್ತರಿಗೆ ಸುಲಭ ದರ್ಶನ ಸಾಧ್ಯವಾಗಲಿ ಎಂದು ಟೋಕನ್ ನೀಡುವ ವ್ಯವಸ್ಥೆ ಮಾಡಿತ್ತು.
9 ಪ್ರತ್ಯೇಕ ಸ್ಥಳಗಳಲ್ಲಿ ಟೋಕನ್ ನೀಡುವ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ ಭಕ್ತರು ತಮಗೆ ದರ್ಶನಕ್ಕೆ ದೊರೆತ ಸಮಯದಲ್ಲಿ ನೇರವಾಗಿ ವೈಕುಂಠ ದ್ವಾರಕ್ಕೆ ಆಗಮಿಸಿ ದೇವರ ದರ್ಶನ ಪಡೆಯುವಂತೆ ಎಲ್ಲವನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು.
ಟೋಕನ್ ವಿತರಿಸುವ ಕುರಿತಂತೆ ಎಲ್ಲ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿತ್ತು ಹೀಗಾಗಿ ಲಕ್ಷಾಂತರ ಮಂದಿ ಟೋಕನ್ ಪಡೆಯಲು ತಿರುಮಲ ಮತ್ತು ತಿರುಪತಿಗೆ ಆಗಮಿಸಿದ್ದರು ತಿರುಮಲಕ್ಕೆ ಆಗಮಿಸಿದ್ದ ಜನರನ್ನು ಪದ್ಮಾವತಿ ಉದ್ಯಾನವನದಲ್ಲಿ ಇರಿಸಲಾಗಿತ್ತು.
ಇಲ್ಲಿ ಇರಿಸಲಾಗಿದ್ದ ಜನರ ಪೈಕಿ ಓರ್ವ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿ ಗೇಟ್ ತೆರೆದಿದ್ದಾರೆ. ಆದರೆ, ಇದನ್ನು ಟೋಕನ್ ನೀಡಲು ಗೇಟ್ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು ಏಕಾಏಕಿ ಮುನ್ನುಗ್ಗಿದರು.
ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಸಿಬ್ಬಂದಿ ಜನರನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಏಕಾಏಕಿ ಜನರು ನುಗ್ಗಿ ಬಂದ ಪರಿಣಾಮ ಕಾಲ್ತುಳಿತ ಉಂಟಾಗಿದೆ. ಈ ವೇಳೆ ಟೋಕನ್ ವಿತರಿಸಲು ನಿಯೋಜಿಸಲಾಗಿದ್ದ ಸಿಬ್ಬಂದಿ ಜನರನ್ನು ನಿಯಂತ್ರಿಸುವ ಹೆಸರಿನಲ್ಲಿ ಮಾಡಿದ ಎಡವಟ್ಟು ಮತ್ತಷ್ಟು ಅವ್ಯವಸ್ಥೆಗೆ ಕಾರಣವಾಯಿತು ಈ ಪರಿಣಾಮದಿಂದ ಏಳು ಮುಂದಿ ನತದೃಷ್ಟರು ಕಾಲ್ತುಳಿತಕ್ಕೆ ಸಿಲುಕಿ ಕಾಲನ ಗರ್ಭ ಸೇರಿದರೆ ಐವತ್ತಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ
Previous Articleಹೀರಾ ಡೈಮಂಡ್ ಒಡತಿಯ ವಂಚನೆ
Next Article ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ