ಶಿವಮೊಗ್ಗ : ಜಿಲ್ಲೆಯ ಅತ್ಯಂತ ಪ್ರತಿಷ್ಟಿತ ಹಾಗು ಸರ್ಕಾರಿ ಜಿಲ್ಲಾಸ್ಪತ್ರೆ ಮೆಗ್ಗಾನ್ ನಲ್ಲಿ ಶೌಚಾಲಯ, ನೀರು ಸೇರಿದಂತೆ ಯಾವುದೇ ಮೂಲಸೌಲಭ್ಯಗಳಿಲ್ಲ ಇದನ್ನು ವಿಚಾರಿಸಲು ಸಾಕಷ್ಟು ಪ್ರಮಾಣದಲ್ಲಿ ವೈದ್ಯರೂ ಇಲ್ಲ.
ಗ್ರಾಮೀಣ ಜನತೆ, ಬಡವರು ಸರ್ಕಾರಿ ಆಸ್ಪತ್ರೆ ಎಂದು ಬಂದರೆ ಇಲ್ಲಿ ಯಾವುದೇ ಸೌಲಭ್ಯ ಸಿಗದೆ ಪರದಾಡಬೇಕಾದ್ದು ಅನಿವಾರ್ಯ. ನಂತರ ಸಾಲ ಮಾಡಿ ಖಾಸಗಿ ಅಸ್ಪತ್ರೆಗೆ ಹೋಗಬೇಕು.
ಜಿಲ್ಲಾಸ್ಪತ್ರೆಯ ಈ ಅವ್ಯವಸ್ಥೆ ಬಗ್ಗೆ ಮಾದ್ಯಮಗಳಲ್ಲಿ ಸಾಕಷ್ಟು ಬಾರಿ ವರದಿ ಬಂದಿದೆ ನಾಗರೀಕರು ಜಿಲ್ಲಾ ಆರೋಗ್ಯಾಧಿಕಾರಿ, ಶಾಸಕರು ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಾತ್ರಿ ವೇಳೆಯಂತೂ ಪಾಳಿ ವೈದ್ಯರೂ ಸೇರಿದಂತೆ ಯಾರೂ ಇಲ್ಲಿರುವುದಿಲ್ಲ ಈ ವೇಳೆ ಅಪಘಾತ, ಹಾವು ಕಚ್ಚಿದವರು ಚಿಕಿತ್ಸೆಗೆ ಬಂದರೆ ಕೇಳುವರಿಲ್ಲದೆ ವಾಪಸ್ ಹೋಗಬೇಕಾದ ಅನಿವಾರ್ಯ ಸ್ಥಿತಿ ಇದೆ.
ಇದರಿಂದ ರೋಸಿ ಹೋದ ಕಾಂಗ್ರೆಸ್ ಯುವ ಮುಖಂಡ ಪೂರ್ಣೇಶ್ ಕೆಳಕೆರೆ ರಾತ್ರಿ 1 ಗಂಟೆಗೆ ಆಸ್ಪತ್ರೆಗೆ ಆಗಮಿಸಿ ಜಿಲ್ಲಾಸ್ಪತ್ರೆಗೆ ಆಗಮಿಸಿ ರೋಗಿಗಳೊಂದಿಗೆ ಆಸ್ಪತ್ರೆ ಮುಂದೆ ಧರಣಿ ನಡೆಸಿದರು
Previous Articleದುಡ್ಡು ಹೋಯ್ತು… ಕೆಲಸವೂ ಹೋಯ್ತು
Next Article ಮಾರ್ಷ್-ವಾರ್ನರ್ ಅಬ್ಬರಕ್ಕೆ ಮಂಕಾದ ರಾಜಸ್ಥಾನ ರಾಯಲ್ಸ್