ಬೆಂಗಳೂರು,ಫೆ.7-
ರಾಜ್ಯದಲ್ಲಿ ಸೈಬರ್ ಚೋರರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದೇ ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಅವುಗಳ ತನಿಖೆಗೆ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಉಪ ವಿಭಾಗದ ಮಟ್ಟದಲ್ಲಿ ಸೈಬರ್ ಠಾಣೆಗಳನ್ನು ತೆರೆದು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲು ನಿಧಾನಗತಿಯ ಧೋರಣೆ ತೋರುತ್ತಿರುವುದರಿಂದ ಸರಿಯಾದ ತನಿಖೆ ನಡೆಯದೇ ಹೆಚ್ಚಿನ ಪ್ರಕರಣಗಳು ಅತಂತ್ರವಾಗುತ್ತಿವೆ.
2023ರ ಮೊದಲ ತಿಂಗಳಲ್ಲೇ (ಜನವರಿ) ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಟ್ಟು 1228 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷವೂ ಅತಿ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು ಅವುಗಳ ಸಾಲಿಗೆ ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಕೇವಲ ಒಂದು ತಿಂಗಳಿನಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಇದರ ತನಿಖೆ ನಡೆಸಲು CEN ಪೊಲೀಸ್ ಠಾಣೆ (Cyber Economic and Narcotics Crime Police Station) ಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿದೆ.
ಮಾತ್ರವಲ್ಲದೆ ಉಪ ವಿಭಾಗದ ಮಟ್ಟದಲ್ಲಿ ಸೆನ್ ಠಾಣೆಗಳನ್ನು ತೆರೆಯಲು ಸರ್ಕಾರ ಇನ್ನೂ ಮುಂದಾಗಿಲ್ಲ. ಇದರಿಂದಾಗಿ ಸಮರ್ಪಕ ತನಿಖೆಯಾಗದೆ ಸೈಬರ್ ಕ್ರೈಂ (cyber crime) ಪ್ರಕರಣಗಳು ಅತಂತ್ರವಾಗುತ್ತಿವೆ. ಸದ್ಯ ವಿಭಾಗೀಯ ಮಟ್ಟದಲ್ಲಿ ಮಾತ್ರ CEN ಪೊಲೀಸ್ ಠಾಣೆಗಳಿವೆ. ಇದನ್ನು ಉಪ ವಿಭಾಗದ ಮಟ್ಟದಲ್ಲಿ ತೆರೆಯುವ ಮೂಲಕ ಶೀಘ್ರ ತನಿಖೆಗೆ ಮುಂದಾಗಬೇಕಿದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.
ನಗರದ ಆಗ್ನೇಯ ವಿಭಾಗದ CEN ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿದ್ದು, ಒಂದು ತಿಂಗಳಲ್ಲಿ 223 ಪ್ರಕರಣಗಳು ದಾಖಲಾಗಿವೆ.
ಉತ್ತರ ವಿಭಾಗ CEN ಠಾಣೆಯಲ್ಲಿ 215
ವೈಟ್ ಫೀಲ್ಡ್ ವಿಭಾಗದ CEN ಠಾಣೆಯಲ್ಲಿ 160,
ಈಶಾನ್ಯ ವಿಭಾಗ CEN ಠಾಣೆಯಲ್ಲಿ 155
ದಕ್ಷಿಣ ವಿಭಾಗದ CEN ಠಾಣೆಯಲ್ಲಿ 145
ಪೂರ್ವ ವಿಭಾಗ CEN ಠಾಣೆಯಲ್ಲಿ 122
ಪಶ್ಚಿಮ ವಿಭಾಗ CEN ಠಾಣೆಯಲ್ಲಿ 118 ಹಾಗೂ
ಕೇಂದ್ರ ವಿಭಾಗದ CEN ಠಾಣೆಯಲ್ಲಿ 90 ಪ್ರಕರಣಗಳು ದಾಖಲಾಗಿವೆ.


1 ಟಿಪ್ಪಣಿ
Mostbet te convida a viver a emoГ§ГЈo mГЎxima dos jogos com recompensas incrГveis desde o primeiro momento – https://mostbetpt.pro/pagamento/ , Mostbet te convida a viver a emoГ§ГЈo mГЎxima dos jogos com recompensas incrГveis desde o primeiro momento .