ಜನವರಿ 25, 2023 ರಂದು ವಿಶ್ವದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ, ಶಾರುಖ್ ಖಾನ್ (Shah Rukh Khan), ದೀಪಿಕಾ ಪಡುಕೋಣೆ (Deepika Padukone), ಜಾನ್ ಅಬ್ರಾಹಂ (John Abraham) ಮುಖ್ಯ ಪಾತ್ರದಲ್ಲಿ ನಟಿಸಿರುವ “ಪಠಾಣ್” (Pathaan) ಚಲನಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರೀಕರಣದ ಸಮಯದಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರ, ಮುಂಗಡ ಬುಕ್ಕಿಂಗ್‌ನಿಂದಲೇ 50 ಕೋಟಿ ಕಲೆಕ್ಷನ್ ಮಾಡಿತ್ತು. ಬಿಡುಗಡೆಗೊಂಡ ಕೇವಲ 8 ದಿನಗಳಲ್ಲಿ, ವಿಶ್ವದಾದ್ಯಂತ ಚಿತ್ರ ಗಳಿಸಿದ ಮೊತ್ತ, ಸುಮಾರು 665 ಕೋಟಿಗಿಂತಲೂ ಅಧಿಕ! 1000 ಕೋಟಿಯ ಗಡಿಯನ್ನು ದಾಟಿ, ಹಲವು ದಾಖಲೆಗಳನ್ನು ಮುರಿದು, ಹೊಸ ಇತಿಹಾಸ ಸೃಷ್ಟಿಯಾಗುವ ರೋಚಕ ಕ್ಷಣಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತಿದ್ದಾರೆ.
ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ( Siddharth Anand) ನಿರ್ದೇಶಿಸಿದರೆ, ಯಶ್ ರಾಜ್ ಫಿಲ್ಸ್ಮ್ (Yash Raj Films) ನ ಆದಿತ್ಯ ಚೋಪ್ರಾ (Aditya Chopra) ನಿರ್ಮಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಅವರೊಂದಿಗೆ ಹಿರಿಯ ಕಲಾವಿದರಾದ ಡಿಂಪಲ್ ಕಪಾಡಿಯಾ ಮತ್ತು ಆಶುತೋಷ್ ರಾಣಾ ಸಹ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ರೊಮ್ಯಾಂಟಿಕ್ ಪೋಸ್ ಮತ್ತು ಡೈಲಾಗ್ ಗಳಿಂದ king of romance ಎಂದೇ ಖ್ಯಾತಿ ಪಡೆದಿರುವ ಕಿಂಗ್ ಖಾನ್ ಈ ಚಿತ್ರದಲ್ಲಿ ಆಕ್ಷನ್ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. RAW ಏಜೆಂಟ್ ಪಾತ್ರದಲ್ಲಿ ಶಾರುಖ್ ಖಾನ್ ಮತ್ತು ISI ಏಜೆಂಟ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೆ, ಲ್ಯಾಬ್ ನಲ್ಲಿ ತಯಾರಾದ ವೈರಸ್ ಒಂದನ್ನು ಭಾರತಕ್ಕೆ ಹರಡಲು ಹೊಂಚು ಹಾಕುತ್ತಿರುವ ದೇಶದ್ರೋಹಿಯ ಪಾತ್ರದಲ್ಲಿ ಜಾನ್ ಅಬ್ರಾಹಂ ಕಾಣಿಸಿಕೊಂಡಿದ್ದಾರೆ.
ಬಿಡುಗಡೆಗೊಂಡ ಎಲ್ಲ ಚಿತ್ರಮಂದಿರಗಳಲ್ಲೂ ಭಾರಿ ಮೆಚ್ಚುಗೆಯನ್ನು ಪಡೆಯುತ್ತಿರುವ ಪಠಾಣ್, ಸದ್ಯದಲ್ಲೇ 1000 ಕೋಟಿಯ ಗಡಿಯನ್ನು ದಾಟುವ ನಿರೀಕ್ಷೆ ಇದೆ. ಈ ಮೂಲಕ 1000 ಕೋಟಿಯ ಗಡಿ ದಾಟಿ, ದಾಖಲೆ ನಿರ್ಮಿಸಿರುವ ದಂಗಲ್ , ಬಾಹುಬಲಿ 2, KGF 2 ಮತ್ತು RRR ಚಲನಚಿತ್ರಗಳ ಸಾಲಿನಲ್ಲಿ ಪಠಾಣ್ ಕೂಡ ಸ್ಥಾನ ಪಡೆಯುವ ಉತ್ಸಾಹದಲ್ಲಿದೆ. ಇದರೊಂದಿಗೆ, ಅತಿ ಹೆಚ್ಚು ಗಳಿಸಿದ ಹಿಂದಿ ಚಿತ್ರಗಳಲ್ಲಿ 5 ನೇ ಸ್ಥಾನ ಮತ್ತು ಅತಿ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳ ಸಾಲಲ್ಲಿ 8 ನೇ ಸ್ಥಾನವನ್ನು ಪಠಾಣ್ ಪಡೆದಿದೆ. ಅಲ್ಲದೆ, ಯಶ್ ರಾಜ್ ಫಿಲ್ಮ್ಸ್ ಮತ್ತು ಶಾರುಖ್ ಖಾನ್ ವೃತ್ತಿ ಜೀವನದಲ್ಲಿಯೂ ಸಹ ‘ಪಠಾಣ್’ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ.


8 ಪ್ರತಿಕ್ರಿಯೆಗಳು
wow casino online delivers non-stop casino jumpiness finished with a sweepstakes technique with no insufficiency for real-money gambling. Its standout welcome reward and boundless meet variety enact it a favorite supply common casino fans nationwide.
Sweet Bonanza is the ultimate treat for slot fans: colorful, volatile, and wildly rewarding. Free spins pragmatic play sweet bonanza turn small bets into huge hauls. Your sugar rush starts here!
Embark on a prairie quest for unimaginable wealth. buffalo aristocrat triggers massive free spin chains and major/minor jackpots with every sunset scatter. Play and prosper!
Play chumba casino real cash prizes free today and turn Sweeps Coins into real prizes tomorrow. Huge welcome bonus + daily rewards = endless winning chances. Sign up now!
Trusted since 2017. Still the fastest. Still pragmatic play stake the fairest. Still the best.
Hello admirers of breathable, healthy interiors !
Reading user reviews of pet hair air purifiers can provide insights into real-world performance. Customer feedback often highlights ease of use, maintenance requirements, and actual benefits experienced. . Trusting online resources can help you make a more informed purchasing decision.
Air quality has become a major concern for many, especially pet owners who often face unique challenges. Finding the best pet air purifier can drastically improve indoor air conditions, helping everyone breathe easier. Prioritize your health and your pets’ comfort with efficient air-cleaning technology.
Air Purifier for Dog Hair: Keep Your Home Fur-Free – п»їhttps://bestairpurifierforpets.vercel.app/
May you enjoy incredible experiences of cleaner living !
Unleash the fun at DraftKings new games Casino. New welcome: 500 spins after $5 + up to $1,000 back on day one. Live dealers, slots, jackpots—all here!
Proc platit 3–5? vic? Generika na opravdovalekarna.cz
opravdovalekarna