ಬೆಂಗಳೂರು,ಅ.17- ನೆಹರು, ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಚುನಾವಣೆ ನಡೆದಿದ್ದು ರಾಜ್ಯದ ಮುತ್ಸದ್ಧಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ರಾಜ್ಯದ ಎರಡನೆ ಹಾಗೂ ದೇಶದ ಎರಡನೇ ದಲಿತ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ರಾಜ್ಯದ ದಿವಂಗತ ಎಸ್. ನಿಜಲಿಂಗಪ್ಪ ಮತ್ತು ದಲಿತ ನಾಯಕ ದಿವಂಗತ ಬಾಬು ಜಗಜೀವನ್ ರಾಮ್ ಈ ಹುದ್ದೆ ಅಲಂಕರಿಸಿದ್ದರು
ಎಐಸಿಸಿ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಸುಮಾರು 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂಬ ನಿರ್ಧಾರದ ಬಳಿಕ ಚುನಾವಣೆ ಸ್ವರೂಪವೇ ಬದಲಾಯಿತು.
ಅಬ್ಬರ, ಆಡಂಬರವಿಲ್ಲದೆ ಪ್ರಚಾರ ನಡೆಯಿತು
ಬ್ಲಾಕ್ ಕಾಂಗ್ರೆಸ್‍ನಿಂದ ತಲಾ ಒಬ್ಬರಂತೆ ಪಿಸಿಸಿ ಸದಸ್ಯರು ಚುನಾಯಿತರಾಗಿದ್ದಾರೆ. ಅವರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಮಂದಿ ಮತದಾರರು ಹಕ್ಕು ಚಲಾಯಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಯುತ್ತಿದ್ದು, ಒಂದಿಷ್ಟು ಮಂದಿ ಪ್ರತಿನಿಧಿಗಳು ಭಾರತ ಮತ್ತು ರಾಜ್ಯದ ಯಾತ್ರಿಗಳಾಗಿ ಭಾಗವಹಿಸಿದ್ದಾರೆ. ಅವರ ಮತದಾನಕ್ಕೆ ಅನುಕೂಲವಾಗುವಂತೆ ಬಳ್ಳಾರಿಯಲ್ಲೇ ಮತಗಟ್ಟೆ ಸ್ಥಾಪಿಸಲಾಗಿತ್ತು
ಉಳಿದಂತೆ ಎಲ್ಲರಿಗೂ ಪಕ್ಷದ ಕೇಂದ್ರ ಕಚೇರಿಯಲ್ಲಿ ಮತದಾನಕ್ಕೆ ಸೂಚನೆ ನೀಡಲಾಗಿತ್ತು ಅಖಿಲ ಭಾರತ ಮಟ್ಟದಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ತಮ್ಮ ತವರು ರಾಜ್ಯದಲ್ಲಿ ಅಥವಾ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಸಲಾಗಿತ್ತು.
ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ. ಗಾಂಧಿ ಕುಟುಂಬದ ಪರೋಕ್ಷ ಬೆಂಬಲವಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶದೆಲ್ಲೆಡೆ ಕಾಂಗ್ರೆಸ್ ಮತದಾರರು ಒಲವು ತೋರಿದರೆ,ರಾಜ್ಯದ ಎಲ್ಲಾ ಮತದಾರರು ಖರ್ಗೆ ಅವರ ಪರವಾಗಿ ಹಕ್ಕು ಚಲಾಯಿಸಿದ್ದಾರೆಂದು ಹೇಳಲಾಗಿದೆ ಹೀಗಾಗಿ ಖರ್ಗೆ ಅವರ ಆಯ್ಕೆ ಖಚಿತವಾದಂತಾಗಿದೆ.
Previous Articleಮನುಷ್ಯರು ಹೀಗೂ ಮಾಡ್ತಾರಾ?
Next Article Special Report : ಎಲ್ಲರಿಗೂ ಪ್ರಿಯ ಈ ಮೀಸಲಾತಿ!