ಬೆಂಗಳೂರು,ಫೆ.11-
ಕಳೆದ 2012-13 ಹಾಗೂ 2014-15ನೇ ಸಾಲಿನಲ್ಲಿ ನಡೆದಿದ್ದ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಹಗರಣ (Karnataka recruitment scam) ಸಂಬಂಧ ಮತ್ತೆ ಇಬ್ಬರು ಶಿಕ್ಷಕಿಯರು ಸೇರಿ ಎಂಟು ಮಂದಿ ಶಿಕ್ಷಕರನ್ನು CID ಅಧಿಕಾರಿಗಳು ಬಂಧಿಸಿದ್ದಾರೆ. ಹಗರಣ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕ, ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ 61 ಸಹ ಶಿಕ್ಷಕರು ಸೇರಿದಂತೆ ಒಟ್ಟು 68 ಜನರನ್ನು ಬಂಧಿಸಲಾಗಿದೆ. ಇದೀಗ ಮತ್ತೆ ಎಂಟು ಜನರ ಬಂಧನವಾಗಿದೆ. ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಚ್ ಶಿಟ್ (ಆರೋಪಪಟ್ಟಿ) ಸಲ್ಲಿಸಿ ತನಿಖೆ ಮುಂದುವರೆಸಿರುವ CID ಅಧಿಕಾರಿಗಳು ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ತುಮಕೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮತ್ತೆ ದಾಳಿ ನಡೆಸಿ ಎಂಟು ಮಂದಿ ಶಿಕ್ಷಕರು ಬಂಧಿಸಿದ್ದಾರೆ .
ಬಾಗಲಕೋಟೆ (Bagalakote) ಜಿಲ್ಲೆ ಮದವಿಬಾವಿ ಸರ್ಕಾರಿ ಪ್ರೌಢ ಶಾಲೆಯ ಶ್ರೀಕಾಂತ ನಾಯಿಕ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ (Basavana Bagewadi, Vijayapura) ತಾಲೂಕಿನ ಕೊಲ್ಹಾರ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ನಾಯಕ್ ಪ್ರಕಾಶ್ ರತ್ನು, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು (Soraba, Shivamogga) ಕಮರೂರು ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಬಿ.ಆರ್. ಮಹಬೂಬ್ ಬಾಷಾ, ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ (Mundgod, Uttara Kannada) ಮಳಗಿಯ ಕರ್ನಾಟಕ ಪಬ್ಲಿಕ್ ಶಾಲೆ ಸಹ ಶಿಕ್ಷಕಿ ಸುಜಾತಾ ಭಂಡಾರಿ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ (Koratagere, Tumkur) ಬುಕ್ಕಾಪಟ್ಟಣ ಸರ್ಕಾರಿ ಶಾಲೆ ಸಹ ಶಿಕ್ಷಕಿ ಜಿ.ಎನ್.ದೀಪಾರಾಣಿ, ಪಾವಗಡ (Pavagada, Tumkur) ತಾಲೂಕಿನ ನಾಗಲಮಡಿಕೆ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಜಿ.ಕೆ.ಮೋಹನ್ ಕುಮಾರ್, ವಲ್ಲೂರು ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಎಸ್.ಮಂಜುನಾಥ್, ಚಿತ್ರದುರ್ಗ ಜಿಲ್ಲೆ ಹಿರಿಯೂರು (Hiriyuru, Chitradurga) ನಗರದ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಶಾಂತಿಲಾಲ್ ಚೌಹ್ಹಾಣ್ ಬಂಧಿತರಾಗಿದ್ದಾರೆ.
ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ಕಳೆದ ವರ್ಷ ವಿಧಾನಸೌಧ ಠಾಣೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದೂರು ನೀಡಿದ್ದರು. ಈ ಹಗರಣದ ತನಿಖೆಯನ್ನು ಸರ್ಕಾರವು ಸಿಐಡಿ ತನಿಖೆಗೆ ವಹಿಸಿತ್ತು.