ಬೆಂಗಳೂರು,ಫೆ.11-
ನಗರದಲ್ಲಿ ಇದೇ ಫೆ.13 ರಿಂದ ಫೆ.17ರವರೆಗೆ ನಡೆಯುತ್ತಿರುವ ಏರೋ ಇಂಡಿಯಾ ಶೋ-2023 (Aero India 2023 ) ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ನಿಲುಗಡೆಯಲ್ಲಿ ಬದಲಾವಣೆ ಮಾಡಲಾಗಿದೆ. ವೈಮಾನಿಕ ಪ್ರದರ್ಶನದ (Air show) ವೇಳೆ ವಾಹನ ಸಂಚಾರಕ್ಕೆ ಸಮಸ್ಯೆ ಆಗಲಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳು ಹಾಗೂ ಬಸ್‌ಗಳು ಸೇರಿದಂತೆ ಕೆಲವೊಂದು ವಾಹನಗಳ ಸಂಚಾರವನ್ನು ಕೆಲವೆಡೆ ನಿಷೇಧಿಸಿ ಮಾರ್ಗ ಬದಲಾವಣೆ ಮಾಡಲಾಗಿದೆ.
Air show ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಹಾಗೂ ಸಂಚಾರ ನಿಷೇಧ ಮಾಡಲಾಗಿದೆ. ಲಾರಿ ಟ್ರಕ್, ಬಸ್, ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನ ಹಾಗು ಟ್ರ್ಯಾಕ್ಟರ್ ಸಂಚಾರ ನಿಷೇಧ ಮಾಡಲಾಗಿದೆ. ನಗರ ಸಂಚಾರ ಪೊಲೀಸರು ವೈಮಾನಿಕ ಪ್ರದರ್ಶನದ ದಿನಗಳಲ್ಲಿ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆ ತಂದಿದ್ದಾರೆ.
ಪ್ರಮುಖವಾಗಿ ಬೆಂಗಳೂರು ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆಯ ವಿವರ ಇಲ್ಲಿದೆ.
ಸಂಚಾರ ನಿಷೇಧ:
* ಬಳ್ಳಾರಿ ರಸ್ತೆಯಲ್ಲಿ – ಮೇಕ್ರಿ ಸರ್ಕಲ್ ನಿಂದ MVIT ಗೇಟ್ ವರೆಗೂ ಎರಡೂ ದಿಕ್ಕಿನಲ್ಲಿ ನಿಷೇಧ (BMTC, KSRTC ಹೊರತುಪಡಿಸಿ)
*ಗೊರಗುಂಟೆಪಾಳ್ಯದಲ್ಲಿ ಹೆಬ್ಬಾಳ – ಹೆಣ್ಣೂರು ಕ್ರಾಸ್ ವರೆಗೆ ಎರಡೂ ದಿಕ್ಕಿನಲ್ಲಿ ಸಂಚಾರ ಮಾಡುವಂತಿಲ್ಲ
*ನಾಗವಾರ ಜಂಕ್ಷನ್ ನಿಂದ – ಥಣಿಸಂದ್ರ ಮುಖ್ಯರಸ್ತೆ – ಬಾಗಲೂರು ಮುಖ್ಯರಸ್ತೆ – ರೇವಾ ಕಾಲೇಜ್ ಜಂಕ್ಷನ್ ವರೆಗೆ ಸಂಚಾರ ನಿಷೇಧ
* ಬೆಂಗಳೂರು ತುಮಕೂರು ರಸ್ತೆಯಲ್ಲಿ ಚಿಕ್ಕಬಾಣಾವರ ಕಡೆಯಿಂದ ಹೆಸರಘಟ್ಟ – ಯಲಹಂಕ ರಸ್ತೆಯಲ್ಲಿ ನಿಷೇಧ ಪರ್ಯಾಯ ಮಾರ್ಗಗಳು
* ಚಿಕ್ಕಬಳ್ಳಾಪುರ ಕಡೆಯಿಂದ ಬರುವ ವಾಹನಗಳು ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ – ದಾಬಸ್ ಪೇಟೆ ಮೂಲಕ ಸಂಚರಿಸವುದು.
* ಕೆ ಆರ್ ಪುರಂ – ಹೊಸೂರು – ಚೆನ್ನೈ – ಬೆಂಗಳೂರು ಮಾರ್ಗದ ಮುಖಾಂತರ ಹೊಸಕೋಟೆ ರಸ್ತೆಯಲ್ಲಿ ಸಂಚರಿಸುವುದು
* ತುಮಕೂರು ರಸ್ತೆಯಿಂದ ಬರುವ ವಾಹನಗಳು – CMTI ಜಂಕ್ಷನ್ ನಲ್ಲಿ ಬಲ ತಿರುವು ಪಡೆದು – ಸುಮನಹಳ್ಳಿ – ನಾಯಂಡಹಳ್ಳಿ ಸರ್ಕಲ್ – ಕನಕಪುರ ರಸ್ತೆ ಮೂಲಕ ಸಂಚಾರ ಮಾಡಬೇಕು
ನಿಲುಗಡೆ ನಿಷೇಧ:
* ನಾಗೇನಹಳ್ಳಿ ಗೇಟ್ ನಿಂದ ಗಂಟಿಗಾಟನಹಳ್ಳಿ ಮಾರ್ಗವಾಗಿ – ಬಳ್ಳಾರಿ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧ
* ಮೇಕ್ರಿ ಸರ್ಕಲ್ ನಿಂದ ದೇವನಹಳ್ಳಿವರೆಗೆ ಎರಡು ಬದಿ ಪಾರ್ಕಿಂಗ್ ನಿಷೇಧ
* ಗೊರಗುಂಟೆಪಾಳ್ಯದಿಂದ – ಹೆಣ್ಣೂರು ಕ್ರಾಸ್ ಜಂಕ್ಷನ್ ವರೆಗೆ ಎರಡೂ ಬದಿ ನಿಷೇಧ
* ಬಾಗಲೂರು ಮುಖ್ಯ ರಸ್ತೆಯಿಂದ – ರೇವಾವರೆಗೆ ಎರಡೂ ಬದಿ
* ನಾಗವಾರ ಜಂಕ್ಷನ್ ನಿಂದ ಬಾಗಲೂರು ಜಂಕ್ಷನ್ ವರೆಗೆ ಪಾರ್ಕಿಂಗ್ ನಿಷೇಧ
* ಫೆಬ್ರವರಿ 13 ರಿಂದ ಏರ್ ಶೋ ಇರುವ ಎಲ್ಲಾ ದಿನವೂ ಈ ನಿಯಮ ಅನ್ವಯ
* ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ನಿಯಮ ಅನ್ವಯ.