ನವದೆಹಲಿ: ದೇಶದಲ್ಲಿ ಕೋವಿಡ್ ಮತ್ತಿತರ ಕಾರಣಗಳಿಗಾಗಿ ಮುಂದಿನ ಆರು ತಿಂಗಳಲ್ಲಿ ಶೇಕಡಾ 86ರಷ್ಟು ಉದ್ಯೋಗಿಗಳು ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ನೇಮಕಾತಿ ಏಜೆನ್ಸಿ ಮೈಕೆಲ್ ಪೇಜ್ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಜೀನಾಮೆ ಪರ್ವ ಮುಂದುವರೆದಿದ್ದು, ಇನ್ಮುಂದೆ ಅದು ತೀವ್ರಗೊಳ್ಳಲಿದೆ ಎಂದು ಮೈಕೆಲ್ ಪೇಜ್ ತನ್ನ ವರದಿಯಲ್ಲಿ ತಿಳಿಸಿದೆ.