ಬೆಂಗಳೂರು: ರಾಜ್ಯದಲ್ಲಿ 18 ವರ್ಷದೊಳಗಿನ ಅತಿ ಹೆಚ್ಚು ಮಕ್ಕಳು ಟೈಪ್- 1 ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಅಷ್ಟೇ ಅಲ್ಲ, ಟೈಪ್ 1 ಮಧುಮೇಹದಿಂದ ಬಳುತ್ತಿರುವವರು ರಾಜ್ಯದಲ್ಲಿ ಅತಿ ಹೆಚ್ಚಿದ್ದು, ದೇಶದಲ್ಲಿ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ.
0-18 ವರ್ಷದೊಳಗಿನ ಒಂದು ಲಕ್ಷ ಮಕ್ಕಳಲ್ಲಿ ಸರಾಸರಿ 18 ಮಕ್ಕಳು ಟೈಪ್ -1 ಡಯಾಬಿಟಿಸ್‌ನಿಂದ ಬಾಧಿತರಾಗಿರುವುದು ಆತಂಕ ಹೆಚ್ಚಿಸಿದೆ.
ರಾಜ್ಯಾದ್ಯಂತ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರಿಸುಮಾರು 6,366 ಮಕ್ಕಳ ಸಹಿತ 10,000 ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ರಾಜ್ಯದ ಅಂಗನವಾಡಿ, ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳ 18 ವರ್ಷದೊಳಗಿನ 78.32 ಲಕ್ಷ ಮಕ್ಕಳನ್ನು ಮಕ್ಕಳನ್ನು ಟೈಪ್ -1 ಡಯಾಬಿಟಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1,884 ಮಕ್ಕಳು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು.
ರಾಜ್ಯದ ಒಟ್ಟು ಟೈಪ್ -1 ಡಯಾಬಿಟಿಸ್ ಪ್ರಕರಣಗಳಲ್ಲಿ ಶೇ. 75ರಷ್ಟು ರಾಯಚೂರು ಜಿಲ್ಲೆಯೊಂದರಲ್ಲೇ ಪತ್ತೆಯಾಗಿವೆ. ರಾಯಚೂರು 1,448, ದಾವಣಗೆರೆ 87, ಬಳ್ಳಾರಿ 46, ಬೆಳಗಾವಿ 33, ಚಿಕ್ಕಮಗಳೂರು 30, ಕಲಬುರಗಿ 23, ಬಾಗಲಕೋಟೆಯಲ್ಲಿ 20 ಪ್ರಕರಣಗಳು ವರದಿಯಾಗಿವೆ. ಯಾದಗಿರಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಲಾದ ಮಕ್ಕಳಲ್ಲಿ ಮಧುಮೇಹ ಪತ್ತೆಯಾಗಿಲ್ಲ.
ರಾಜ್ಯದ ನಿವೃತ್ತ ಡಿಜಿಪಿಯೊಬ್ಬರ ಹನ್ನೊಂದು ವರ್ಷದ ಮಗ ಕೂಡ ಟೈಪ್ 1 ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ವಿಶ್ವಸನೀಯ ಮೂಲವೊಂದು ತಿಳಿಸಿದೆ.
ಆರೋಗ್ಯ ಇಲಾಖೆ ತಾಲೂಕು ಮಟ್ಟದಲ್ಲಿ ಈ ಕಾಯಿಲೆಯನ್ನು ಪತ್ತೆಹಚ್ಚಲು ಲ್ಯಾಬ್ ವ್ಯವಸ್ಥೆ ಕಲ್ಪಿಸಿದ್ದು, ಡಯಾಬಿಟಿಸ್ ವರದಿಯಾದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳಲ್ಲಿ ಟೈಪ್ 1 ಮಧುಮೇಹವನ್ನು ನಿಯಂತ್ರಿಸಲು ಮಧುಮೇಹ ತಜ್ಞ, ಪೌಷ್ಟಿಕ ತಜ್ಞ, ಮನಃಶಾಸ್ತ್ರಜ್ಞರು ಹಾಗೂ ಕುಟುಂಬದವರ ಬೆಂಬಲ ಅಗತ್ಯವಾಗಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುವುದು ಅಥವಾ ಕಡಿಮೆಯಾ ಗುವುದನ್ನು ತಡೆಯಬೇಕು. ಮಕ್ಕಳು ಸದಾಕಾಲ ಚಟುವಟಿಕೆಯಲ್ಲಿರುವಂತೆ ಪ್ರೇರೇಪಿಸಬೇಕು ಎನ್ನುತ್ತಾರೆ, ವೈದ್ಯಾಧಿಕಾರಿಗಳು.
ಮಕ್ಕಳನ್ನೇ ಕಾಡುತ್ತಿದೆ ಟೈಪ್ 1 ಡಯಾಬಿಟಿಸ್: ದೇಶದಲ್ಲಿ ರಾಜ್ಯವೇ ನಂಬರ್ 1
Previous Articleಇನ್ನಾರು ತಿಂಗಳಲ್ಲಿ ಶೇ.86ರಷ್ಟು ಉದ್ಯೋಗಿಗಳಿಂದ ರಾಜೀನಾಮೆ
Next Article ಶಾಸಕ ಜಿಟಿಡಿ ಗಾಯನ..!