ಮೈಸೂರು ವಕೀಲರ ಸಂಘದದಿಂದ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಅವರು ಉದ್ಘಾಟಿಸಿದರು.
ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ಪೌರಾಣಿಕ ಗೀತೆ ಹಾಡುವ ಮೂಲಕ ಕಾರ್ಯಕ್ರಮದಲ್ಲಿ ಮನರಂಜನೆ ನೀಡುವುದರ ಜೊತೆಗೆ ತಮ್ಮ ಕಲಾಭಿರುಚಿಯನ್ನ ತೋರಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ರಾಜ್ಯ ವಕೀಲರ ಪರಿಷತ್ ನ ಉಪಾಧ್ಯಕ್ಷರಾದ ಬಿ.ಆರ್.ಚಂದ್ರಮೌಳಿ, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಶ್ರೀ ಉಮೇಶ್, ವಕೀಲರಾದ ಪಾಲಾಕ್ಷ, ಬೆಲವತ್ತ ಕುಮಾರ್ ಉಪಸ್ಥಿತರಿದ್ದರು.